ADVERTISEMENT

ಕ್ರಿಸ್‌ಮಸ್: ವರ್ಷಾಂತ್ಯಕ್ಕೆ ಕರ್ನಾಟಕದಲ್ಲಿ ನೀವು ಭೇಟಿ ನೀಡಬಹುದಾದ ಚರ್ಚ್‌ಗಳಿವು

ವೀಣಾಶ್ರೀ
Published 19 ಡಿಸೆಂಬರ್ 2025, 11:23 IST
Last Updated 19 ಡಿಸೆಂಬರ್ 2025, 11:23 IST
<div class="paragraphs"><p>ಶಿವಾಜಿನಗರದಲ್ಲಿರುವ ಸಂತ ಬೇಸಿಲಿಕಾ ಚರ್ಚನಲ್ಲಿ ರಾತ್ರಿ ಭಕ್ತರು ಪ್ರಾರ್ಥನೆಯನ್ನು ಸಲ್ಲಿಸಿದರು.<br></p></div>

ಶಿವಾಜಿನಗರದಲ್ಲಿರುವ ಸಂತ ಬೇಸಿಲಿಕಾ ಚರ್ಚನಲ್ಲಿ ರಾತ್ರಿ ಭಕ್ತರು ಪ್ರಾರ್ಥನೆಯನ್ನು ಸಲ್ಲಿಸಿದರು.

   S K DINESH

ಡಿಸೆಂಬರ್ 25ರಂದು ಕ್ರಿಸ್‌ಮಸ್‌ ಹಬ್ಬ. ಆ ದಿನ ಕ್ರಿಶ್ಚಿಯನ್ ಸಮುದಾಯದವರು ಭಕ್ತಿ, ಪ್ರೀತಿ, ಶಾಂತಿ, ಸೌಹಾರ್ದತೆ ಸಾರಿದ ಏಸುಕ್ರಿಸ್ತನನ್ನು ಸ್ಮರಿಸುತ್ತಾರೆ. ಕ್ರಿಸ್‌ಮಸ್ ಎಂದಾಕ್ಷಣ ನಮ್ಮ ನೆನಪಿಗೆ ಬರುವುದು ಚರ್ಚ್, ಏಸುಕ್ರಿಸ್ತ, ಕ್ರಿಸ್‌ಮಸ್ ಟ್ರೀ, ಕೇಕ್. ಅದರಲ್ಲೂ ಚರ್ಚ್‌ಗಳು ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿರುತ್ತವೆ.

ವಿಶೇಷವಾಗಿ ‌ಚರ್ಚ್‌ಗಳಿಂದ ಪ್ರಾರ್ಥನೆ, ಮಕ್ಕಳಿಗೆ ಅಚ್ಚರಿಯ ಉಡುಗೊರೆ ನೀಡುವ ಸಾಂತಾ, ಕೈಯಲ್ಲಿ ವೈನ್ ಗ್ಲಾಸ್ ಹಿಡಿದು ಕೇಕ್‌ಗಳನ್ನು ತಿನ್ನುತ್ತಾ ಈ ಕ್ರಿಸ್‌ಮಸ್‌ ಹಬ್ಬವನ್ನು ಆಚರಿಸುತ್ತಾರೆ. ಇನ್ನು, ಕ್ರಿಸ್‌ಮಸ್ ಸಂಭ್ರಮವನ್ನು ದುಪ್ಪಟ್ಟು ಮಾಡಲು ಡಿಸೆಂಬರ್ 25ರಂದು ಬೆಂಗಳೂರು, ಮಂಗಳೂರು ಹಾಗೂ ಮೈಸೂರಿನಲ್ಲಿರುವ ಈ ಚರ್ಚ್‌ಗಳಿಗೆ ಭೇಟಿ ನೀಡಬಹುದು.

ADVERTISEMENT

ಶಿವಾಜಿನಗರದಲ್ಲಿರುವ ಸಂತ ಬೇಸಿಲಿಕಾ ಚರ್ಚ್‌

ಬೆಂಗಳೂರಿನಲ್ಲಿರುವ ಈ ಚರ್ಚ್‌ಗಳಿಗೆ ಭೇಟಿ ನೀಡಿ

ಉದ್ಯಾನ ನಗರಿಯಲ್ಲಿ 150ಕ್ಕೂ ಹೆಚ್ಚು ಚರ್ಚ್‌ಗಳಿವೆ. ಅದರಲ್ಲೂ 100 ವರ್ಷ ಹಳೆಯದಾದ ಹತ್ತಾರು ಚರ್ಚ್‌ಗಳು ಬೆಂಗಳೂರಿನಲ್ಲಿದ್ದು, ಪಾರಂಪರಿಕ ಚರ್ಚ್‌ಗಳಾಗಿ ಕಂಗೊಳಿಸುತ್ತಿವೆ. ಶಿವಾಜಿನಗರದಲ್ಲಿರುವ ಸೇಂಟ್ ಮೇರಿ 'ಬೆಸಿಲಿಕಾ', ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ‘ಸೇಂಟ್ ಮಾರ್ಕ್ಸ್ ಕೆಥೆಡ್ರಲ್’ ಚರ್ಚ್‌, ಹಡ್‌ನ್ ವೃತ್ತದಲ್ಲಿರುವ 'ಹಯ್ಸನ್' ಚರ್ಚ್, ಚಿಕ್ಕಪೇಟೆಯ ‘ರೈಸ್ ಸ್ಮಾರಕ’ ಚರ್ಚ್, ಚಾಮರಾಜಪೇಟೆಯ ಸೇಂಟ್ 'ಲೂಕ್ಸ್ ಚರ್ಚ್', ಟ್ರಿನಿಟಿ ರಸ್ತೆಯ ಹೋಲಿ ಟ್ರಿನಿಟಿ ಚರ್ಚ್ ಸೇರಿದಂತೆ ಕೆಲ ಚರ್ಚ್‌ಗಳು ನೂರಾರು ವರ್ಷಗಳ ಇತಿಹಾಸ ಹೊಂದಿವೆ. ಹೀಗಾಗಿ ಕ್ರಿಸ್‌ಮಸ್‌ ದಿನ ಈ ಚರ್ಚ್‌ಗಳಿಗೆ ಭೇಟಿ ನೀಡಬಹುದು.

ಮಂಗಳೂರಿನಲ್ಲಿರುವ ಪ್ರಸಿದ್ಧ ಚರ್ಚ್‌ಗಳು

ಮಂಗಳೂರಿನಲ್ಲಿ ನೀವು ನೋಡಬಹುದಾದ ಚರ್ಚ್‌ಗಳು

ದಕ್ಷಿಣ ಕನ್ನಡ ಜಿಲ್ಲೆಯ ಚರ್ಚ್‌ಗಳಿಗೆ ನಾಲ್ಕೂವರೆ ಶತಮಾನಗಳಿಗೂ ಅಧಿಕ ಇತಿಹಾಸವಿದೆ. ರೊಸಾರಿಯೊ ಕೆಥೆಡ್ರಲ್‌, ‘ಅವರ್ ಲೇಡಿ ಆಫ್‌ ಮರ್ಸಿ’ ಚರ್ಚ್‌ ಪಾನಿರ್‌, ಮೇರಮಜಲು ಹೋಲಿ ಫ್ಯಾಮಿಲಿ ಚರ್ಚ್‌, ಮಿಲಾಗ್ರೀಸ್‌ ಚರ್ಚ್‌, ಸೇಂಟ್ ಅಲೋಸಿಯಸ್ ಚಾಪೆಲ್, ಇನ್ಫಂಟ್ ಜೀಸಸ್ ಶ್ರೈನ್ ಸೇರಿದಂತೆ ಇನ್ನಿತರ ಚರ್ಚ್‌ಗಳು ಹೆಸರುವಾಸಿಯಾಗಿವೆ.‌

ಮೈಸೂರಿನಲ್ಲಿ ಭೇಟಿ ನೀಡಬೇಕಾದ ಅತ್ಯುತ್ತಮ ಚರ್ಚುಗಳು

ಅರಮನೆ ನಗರಿಯಲ್ಲಿ ಕ್ರಿಸ್‌ಮಸ್‌ ಪ್ರಯುಕ್ತ ಕೆಲವು ಆಕರ್ಷಕ ಚರ್ಚ್‌ಗಳಿಗೆ ಭೇಟಿ ನೀಡಬಹುದು. ಏಷ್ಯಾದ ಎರಡನೇ ಅತಿ ಎತ್ತರದ ಚರ್ಚ್ ಎಂದೇ ಗುರುತಿಸಲ್ಪಟ್ಟಿರುವ ಸೇಂಟ್‌ ಫಿಲೋಮಿನಾ ಕ್ಯಾಥೆಡ್ರಲ್ ಚರ್ಚ್‌. ಸಿಎಸ್ಐ ಸೇಂಟ್ ಬಾರ್ತಲೋಮೆವ್ ಚರ್ಚ್, ಶಿಶು ಜೀಸಸ್ ಕ್ಯಾಥೆಡ್ರಲ್, ಸೇಂಟ್ ಆಂಥೋನಿ ಚರ್ಚ್, ಸಿಎಸ್ಐ ವೆಸ್ಲಿ ಕ್ಯಾಥೆಡ್ರಲ್, ಅವರ್ ಲೇಡಿ ಆಫ್ ಪರ್ಪೆಚುಯಲ್ ಸಕರ್ ಚರ್ಚ್, ಬಡವರ ಚರ್ಚಿನ ವರ್ಜಿನ್, ಸೇಂಟ್ ಪೀಟರ್ಸ್ ಚರ್ಚುಗಳಿಗೆ ಭೇಟಿ ನೀಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.