ADVERTISEMENT

Christmas 2025: ಕ್ರಿಸ್‌ಮಸ್ ಸಂಭ್ರಮ ಹೆಚ್ಚಿಸಲು ಗೆಳೆಯರಿಗೆ ಈ ಉಡುಗೊರೆ ನೀಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಡಿಸೆಂಬರ್ 2025, 12:17 IST
Last Updated 16 ಡಿಸೆಂಬರ್ 2025, 12:17 IST
<div class="paragraphs"><p>ಎಐ ಚಿತ್ರ</p></div>

ಎಐ ಚಿತ್ರ

   

ಡಿಸೆಂಬರ್ 25ರಂದು ಕ್ರಿಸ್‌ಮಸ್‌ ಹಬ್ಬವನ್ನು ಆಚರಿಸಲಾಗುತ್ತದೆ. ಇನ್ನೇನು ಈ ವರ್ಷದ ಕ್ರಿಸ್‌ಮಸ್‌ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಯೇಸುಕ್ರಿಸ್ತನ ಜನ್ಮದಿನವನ್ನು ಡಿ.25ರಂದು ಕ್ರಿಸ್‌ಮಸ್‌ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಈ ಕ್ರಿಸ್‌ಮಸ್‌ ಹಬ್ಬದ ಸಂಭ್ರಮವನ್ನು ದುಪ್ಪಟ್ಟು ಮಾಡಲು ನಿಮ್ಮ ಸ್ನೇಹಿತರಿಗೆ ಈ ಉಡುಗೊರೆ ನೀಡಬಹುದು.

ಗ್ರೀಟಿಂಗ್ ಕಾರ್ಡುಗಳು

ಗ್ರೀಟಿಂಗ್ ಕಾರ್ಡ್

ಗ್ರೀಟಿಂಗ್‌ ಕಾರ್ಡ್‌ಗಳನ್ನು ಕ್ರಿಸ್‌ಮಸ್‌ ಹಬ್ಬಕ್ಕೆ ಸ್ನೇಹಿತರಿಗೆ ಉಡುಗೊರೆಯಾಗಿ ನೀಡಬಹುದು. ಇದು ಸರಳ ಎನಿಸಿದರು ಭಾವನೆಗೆ ಹತ್ತಿರವಾಗುವಂತೆ ಮಾಡುತ್ತದೆ. ಗ್ರೀಟಿಂಗ್ ಕಾರ್ಡ್‌ನಲ್ಲಿ ವಿಶೇಷವಾಗಿ ಕ್ರಿಸ್‌ಮಸ್‌ ಹಬ್ಬದ ಹಾಗೂ ಹೊಸ ವರ್ಷಕ್ಕೆ ಭಿನ್ನವಾಗಿ ಬರೆಯುವ ಮೂಲಕ ಶುಭ ಕೋರಬಹುದು. ಈ ಕಾರ್ಡ್​ಗಳಲ್ಲಿ ಹಲವಾರು ವಿನ್ಯಾಸಗಳಿಂದ ಅಲಂಕರಿಸಲ್ಪಟ್ಟ ಗ್ರೀಟಿಂಗ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿರುತ್ತವೆ. ಅದರಲ್ಲೂ ಕೈಯಿಂದ ತಯಾರಿಸಿ ಅದರಲ್ಲಿ ಸಣ್ಣದೊಂದು ಸಂದೇಶಗಳನ್ನು ಬರೆದರೇ ಬಹಳ ಉತ್ತಮವಾಗಿರುತ್ತದೆ. ಕಡಿಮೆ ಖರ್ಚಿನಲ್ಲಿ ಸ್ನೇಹಿತರಿಗೆ ಪ್ರೀತಿಯ ಸಂದೇಶವನ್ನು ನೀಡಲು ಈ ಉಡುಗೊರೆ ವಿಧಾನವು ಒಂದು ಉತ್ತಮ ಮಾರ್ಗವಾಗಿದೆ.

ADVERTISEMENT

ಪುಸ್ತಕ

ಡೈರಿ ಅಥವಾ ಪುಸ್ತಕ

ಕ್ರಿಸ್‌ಮಸ್‌ ಹಾಗೂ ಹೊಸ ವರ್ಷ ಎರಡು ವಾರದ ಅಂತರದಲ್ಲೇ ಬಂದಿರುವುದರಿಂದ ಡೈರಿಯನ್ನು ಉಡುಗೊರೆಯಾಗಿ ಕೊಡುವುದು ಉತ್ತಮ ಆಯ್ಕೆಯಾಗಿದೆ. ಸಾಕಷ್ಟು ಮಂದಿ ಹೊಸ ವರ್ಷದಿಂದ ಹೊಸ ಕೆಲಸಕ್ಕೆ ಮುಂದಾಗುತ್ತಾರೆ. ಹೀಗಾಗಿ ಸ್ನೇಹಿತರಿಗೆ ಕ್ರಿಸ್‌ಮಸ್‌ಗೆ ಡೈರಿ ಅಥವ ಪುಸ್ತಕಗಳನ್ನು ಉಡುಗೊರೆಯಾಗಿ ಕೊಡುವುದು ಉತ್ತಮ ವಿಧಾನವಾಗಿದೆ.

ಚಳಿಗಾಲಕ್ಕೆ ಸ್ವೆಟರ್

ಚಳಿಗಾಲಕ್ಕೆ ಸ್ವೆಟರ್

ಡಿಸೆಂಬರ್‌ ತಿಂಗಳಿನಲ್ಲಿ ಅತಿಯಾದ ಶೀತ ವಾತವರಣ ಇರುತ್ತದೆ. ಕ್ರಿಸ್‌ಮಸ್‌ ಕೂಡ ಡಿಸೆಂಬರ್‌ನಲ್ಲಿ ಇರುವ ಕಾರಣ ಭಿನ್ನ ವಿಭಿನ್ನವಾದ, ಅದರಲ್ಲೂ ಕೈಯಿಂದ ಹೆಣೆದ ಸ್ವೆಟರ್‌ಗಳನ್ನು ಉಡುಗೊರೆಯಾಗಿ ನೀಡಬಹುದು. ಹಾಗೇ ಸ್ವೆಟರ್ ಅನ್ನು ಕೊಡುವುದು ಕ್ರಿಸ್ಮಸ್‌ಗೆ ಪರಿಪೂರ್ಣ ಉಡುಗೊರೆಯಾಗಿದೆ. ಇದಲ್ಲದೆ ಚಳಿಯಿಂದ ಬೆಚ್ಚಗಿಡಲು ವಿವಿಧ ರೀತಿಯ ಜಾಕೆಟ್ಸ್​ಗಳನ್ನು ಕೂಡ ಉಡುಗೊರೆ ರೂಪದಲ್ಲಿ ಕೊಡಬಹುದು.

ಅಲಂಕಾರಿಕ ವಸ್ತುಗಳು

ಮನೆಯ ಅಲಂಕಾರಿಕ ವಸ್ತುಗಳು

ಕಚೇರಿ ಅಥವಾ ಮನೆಯ ಗೋಡೆಯ ಮೇಲೆ ಹಾಕಲು ಫ್ರೇಮ್‌ಗಳನ್ನು ನೀಡಬಹುದು. ಅದರಲ್ಲೂ ಕೈಯಿಂದ ಬಿಡಿಸಿದ ಚಿತ್ರಗಳನ್ನು ಉಡುಗೊರೆಯಾಗಿ ನೀಡುವುದು ವಿಶೇಷ ಎನಿಸುತ್ತದೆ. ಪ್ರೀತಿ ಪಾತ್ರರಿಗೆ ಇದು ಬಲು ಇಷ್ಟವಾಗುತ್ತದೆ.

ಟೀ ಕಪ್ ಸೆಟ್ 

ಟೀ ಕಪ್ ಸೆಟ್ 

ಜನರು ಅತಿಯಾಗಿ ಟೀ, ಕಾಫಿ ಕುಡಿದು ದಿನವನ್ನು ಶುರುಮಾಡುತ್ತಾರೆ. ಹೀಗಾಗಿ ಟೀ, ಕಾಫಿ ಪ್ರಿಯರಿಗೆ ಕಪ್ ಸೆಟ್‌ಗಳನ್ನು ಉಡುಗೊರೆಯಾಗಿ ನೀಡುವುದು ಉತ್ತಮವಾದ ಆಯ್ಕೆಯಾಗಿದೆ. ದೈನಂದಿನ ಬಳಕೆಗೆ ಸೂಕ್ತವಾದ ಪ್ರಾಯೋಗಿಕ ಉಡುಗೊರೆಯಾಗಿ ಕಾರ್ಯನಿರ್ವಹಿಸುತ್ತದೆ.

ತಟ್ಟೆಗಳು

ತಟ್ಟೆಗಳು

ಈ ಕ್ರಿಸ್‌ಮಸ್‌ನಲ್ಲಿ ಸ್ನೇಹಿತರು ಊಟದ ಅನುಭವವನ್ನು ಹೆಚ್ಚಿಸಲು ಸೊಗಸಾದ ತಟ್ಟೆಗಳ ಸೆಟ್‌ಗಳನ್ನು ಉಡುಗೊರೆಯಾಗಿ ನೀಡಿ. ಫೈನ್ ಗ್ಲಾಸ್‌ನಲ್ಲಿ ವಿನ್ಯಾಸಗೊಳಿಸಿದ್ದನ್ನು ಆರಿಸಿ. ದೈನಂದಿನ ಬಳಕೆಗೆ ಇದು ಪರಿಪೂರ್ಣವಾದ ಉಡುಗೊರೆಯಾಗಿದೆ.

ಮನಿ ಪ್ಲಾಂಟ್

ಮನಿ ಪ್ಲಾಂಟ್

ಕಚೇರಿಯಾಗಲಿ ಅಥವಾ ಮನೆಯಾಗಲಿ ಮನಿ ಪ್ಲಾಂಟ್ ಉಡುಗೊರೆಗೆ ಅತ್ಯುತ್ತಮವಾದ ಆಯ್ಕೆ. ಏಕೆಂದರೆ ಕೆಲಸದ ಸ್ಥಳದಲ್ಲಿ ಧನಾತ್ಮಕ ಶಕ್ತಿ, ಹಾಗೂ ಖುಷಿಯನ್ನು ಕೊಡುವಂತೆ ಮಾಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.