
ಚಿತ್ರ: ಎಐ
ಧನುರ್ಮಾಸ ದೇವರಿಗೆ ಪೂಜೆ ಸಲ್ಲಿಸಲು ಪ್ರಶಸ್ತ ಕಾಲ. ಬೆಳಗಿನಜಾವ ಬ್ರಾಹ್ಮಿ ಮುಹೂರ್ತದಲ್ಲಿ ನಾರಾಯಣನಿಗೆ ಪೂಜೆ ಸಲ್ಲಿಸುವುದರಿಂದ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ನಾರಾಯಣನಿಗೆ ಪೂಜೆ ಮಾಡುವಾಗ ಕೆಲವು ಮಂತ್ರಗಳು ಪಠಿಸುವುದರಿಂದ ಮೋಕ್ಷ ದೊರೆಯುತ್ತದೆ ಎಂಬ ನಂಬಿಕೆ ಇದೆ.
ಇಲ್ಲಿರುವ 8 ಮಂತ್ರಗಳಲ್ಲಿ ಯಾವುದಾದರೂ ಒಂದು ಮಂತ್ರವನ್ನು 108 ಬಾರಿ ಪಠಿಸುವುದರಿಂದ, ನಮ್ಮೆಲ್ಲಾ ಕರ್ಮಗಳು ಕಳೆದು, ಜೀವನದಲ್ಲಿ ಒಳಿತು ಕಾಣುವುದರ ಜೊತೆ ಜೊತೆಗೆ ಆರೋಗ್ಯ, ಐಶ್ವರ್ಯ ಸಕಲವೂ ದೊರೆಯುತ್ತದೆ ಎಂದು ಶಾಸ್ತ್ರಾನುಸಾರ ಹೇಳಲಾಗುತ್ತದೆ.
ಓಂ ನಮೋ ಭಗವತಿ ವಾಸುದೇವಾಯ
ಓಂ ನಾರಾಯಣಾಯ ವಿದ್ಮಹೇ ವಾಸುದೇವಾಯಧೀಮಹಿ ತನ್ನೋ ವಿಷ್ಣುಪ್ರಚೋದಯಾತ್
ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ ವಿಶ್ವಾಧಾರಂ ಗಗನ ಸದೃಶಂ ಮೇಘವರ್ಣಂ ಶುಭಾಂಗಂ ಲಕ್ಷ್ಮೀಕಾಂತಂ ಕಮಲನಯನಂ ಯೋಗಿಹೃಧ್ಯಾನಗಮ್ಯಂ ವಂದೇ ವಿಷ್ಣುಂ ಭವಭಯಹರಂ ಸರ್ವಲೋಕೈಕನಾಥಂ
ಓಂ ನಮೋ ನಾರಾಯಣಾಯ
ಕಾಯೇನ ವಾಚಾ ಮನಸೇನ್ದ್ರಿಯೈರ್ವಾ ಬುದ್ಧ್ಯಾತ್ಮನಾ ವಾ ಪ್ರಕೃತಿಸ್ವಭಾವಾತ್ ಕರೋಮಿ ಯದ್ಯತ್ಸಕಲಂ ಪರಸ್ಮೈ ನಾರಾಯಣಯೇತಿ ಸಮರ್ಪಯಾಮಿ
ಮಂಗಳಂ ಭಗವಾನ್ ವಿಷ್ಣು, ಮಂಗಳಂ ಗರುಡ ಧ್ವಜ, ಮಂಗಳಂ ಪುಂಡರಿಕಾಕ್ಷ ಮಂಗಳಾಯ ತನುಹರಿ
ಸಶಂಖಚಕ್ರಂ ಸಕಿರೀಟಕುಂಡಲಮ್, ಸಪೀತವಸ್ತ್ರಂ ಸರಸೀರುಹೇಕ್ಷಣಮ್, ಸಹರ ವಕ್ಷಃಸ್ಥಲ ಶೋಭಿ ಕೌಸ್ತುಭಮ್, ನಮಾಮಿ ವಿಷ್ಣುಂ ಶಿರಸಾ ಚತುರ್ಭುಜಮ್
ತ್ವಮೇವ ಮಾತಾ ಚ ಪಿತಾ ತ್ವಮೇವ, ತ್ವಮೇವ ಬಂಧುಶ್ಚ ಸಖಾ ತ್ವಮೇವ, ತ್ವಮೇವ ವಿದ್ಯಾ ದ್ರವಿಣಂ ತ್ವಮೇವ, ತ್ವಮೇವ ಸರ್ವಂ ಮಮ ದೇವದೇವ
ಈ ಮಂತ್ರಗಳನ್ನು ಪೂಜಾ ಸಮಯದಲ್ಲಿ ಶ್ರದ್ಧೆಯಿಂದ ಪಠಿಸಿದರೆ, ಧನುರ್ಮಾಸದ ಪೂಜೆಯು ಸಫಲವಾಗುತ್ತದೆ ಎಂದು ಹೇಳಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.