ADVERTISEMENT

ದೀಪಾವಳಿ: ಈ ವಸ್ತುಗಳನ್ನು ಮನೆಗೆ ತರುವುದು ಮಂಗಳಕರವೆಂಬ ನಂಬಿಕೆ ಇದೆ

ಎಲ್.ವಿವೇಕಾನಂದ ಆಚಾರ್ಯ
Published 14 ಅಕ್ಟೋಬರ್ 2025, 6:14 IST
Last Updated 14 ಅಕ್ಟೋಬರ್ 2025, 6:14 IST
<div class="paragraphs"><p>ಎಐ ಚಿತ್ರ</p></div>

ಎಐ ಚಿತ್ರ

   

ಬೆಳಕಿನ ಹಬ್ಬ ದೀಪಾವಳಿಗೆ ಇನ್ನೇನು ಕೇಲವೇ ದಿನಗಳು ಬಾಕಿ ಉಳಿದಿದೆ. ಜನರು ಕೂಡ ಸಂಭ್ರಮ ಸಡಗರದಿಂದ ದೀಪಾವಳಿ ಆಚರಿಸಲು ಎದುರು ನೋಡುತ್ತಿದ್ದಾರೆ. ಜೊತೆಗೆ ದೀಪಾವಳಿಯ ಸಂದರ್ಭದಲ್ಲಿ ಕೆಲವು ವಸ್ತುಗಳನ್ನು ಮನೆಗೆ ತಂದರೆ ಶುಭವಾಗಲಿದೆ ಎಂದು ಜ್ಯೋತಿಷ ಹೇಳುತ್ತದೆ. ಅಷ್ಟಕ್ಕೂ ಆ ವಸ್ತುಗಳು ಯಾವುವು ಎಂದು ನೋಡೋಣ ಬನ್ನಿ.

  • ಜ್ಯೋತಿಷ ಪ್ರಕಾರ, ಲಕ್ಷ್ಮೀ ದೇವಿಯ ಬೆಳ್ಳಿಯ ಪಾದಗಳನ್ನು ಮನೆಗೆ ತರುವುದು ಶುಭವೆಂದು ಪರಿಗಣಿಸಲಾಗಿದೆ.

    ADVERTISEMENT
  • ಶುದ್ಧ ಅರಿಶಿನ ಕುಂಕುಮ ಖರೀದಿಸಿ ತರುವುದು ಶುಭ ಎಂದು ಜ್ಯೋತಿಷದಲ್ಲಿ ತಿಳಿಸಿದೆ.

  • ಹಬ್ಬದ ಸಂದರ್ಭದಲ್ಲಿ ಹೊಸ ಮಣ್ಣಿನ ದೀಪಗಳನ್ನು ಮನೆಗೆ ತಂದು ದಕ್ಷಿಣದ ಕಡೆ ಮುಖ ಮಾಡಿ ಹಚ್ಚುವುದನ್ನು ಶುಭವೆಂದು ಪರಿಗಣಿಸಲಾಗಿದೆ. 

  • ಲಕ್ಷ್ಮೀ, ಗಣೇಶನ ಚಿನ್ನ ಅಥವಾ ಬೆಳ್ಳಿಯ ವಿಗ್ರಹಗಳನ್ನು ಮನೆಗೆ ತರುವುದು ಶುಭ ಎಂದು ಪರಿಗಣಿಸಲಾಗುತ್ತದೆ. (ಕನಿಷ್ಠ ಫೋಟೋಗಳನ್ನಾದರೂ ತರುವುದು ಮಂಗಳಕರ)

  • ದೀಪಾವಳಿಯಂದು ಚಿನ್ನ, ಬೆಳ್ಳಿ, ತಾಮ್ರ, ಹಿತ್ತಾಳೆ ವಸ್ತುಗಳನ್ನು ಖರೀದಿಸುವುದು ಉತ್ತಮ ಎಂದು ನಂಬಲಾಗಿದೆ. 

  • ಲಕ್ಷ್ಮೀಗೆ ಸಕ್ಕರೆ ಮಿಠಾಯಿಂದ ನೈವೇದ್ಯ ಮಾಡುವುದು ಶುಭ ಎಂದು ಹೇಳಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.