
ಪ್ರಜಾವಾಣಿ ವಾರ್ತೆಗವಿಮಠದ ಜಾತ್ರಾ ಮಹೋತ್ಸವದಲ್ಲಿ ಪ್ರತಿವರ್ಷವೂ ಮಿರ್ಚಿ ತಯಾರಿಕೆ ವಿಶೇಷ ಆಕರ್ಷಣೆಯಾಗಿರುತ್ತದೆ. ಜಾತ್ರೆಯ ಮಹಾರಥೋತ್ಸವ ನಡೆದ ಮರುದಿನ ಕನಿಷ್ಠ ಐದಾರು ಲಕ್ಷ ಭಕ್ತರಿಗೆ ಕೊಪ್ಪಳದ ಸಮಾನ ಮನಸ್ಕ ಸ್ನೇಹಿತರ ಬಳಗದವರು ಮಿರ್ಚಿ ತಯಾರಿಸಿ ಕೊಡುತ್ತಾರೆ. ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿಯೇ ಖುದ್ದು ಮಿರ್ಚಿ ತಯಾರಿಸಿ ಸೇವಾಕರ್ತರಲ್ಲಿ ಹುಮ್ಮಸ್ಸು ತುಂಬುತ್ತಾರೆ. ನಿಮ್ಮ ಸೇವೆಗೆ ಧನ್ಯ ಎನ್ನುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.