ಎಐ ಚಿತ್ರ
ನವರಾತ್ರಿಯ ನಾಲ್ಕನೇ ದಿನ ದೇವಿಯ 4ನೇ ಅವತಾರವಾಗಿರುವ ಕೂಷ್ಮಾಂಡ ಅವತಾರವನ್ನು ಪೂಜಿಸಲಾಗುತ್ತದೆ. ದುರ್ಗಾ ಸಪ್ತಶತಿಯ ಪ್ರಕಾರ, ಕೂಷ್ಮಾಂಡ ದೇವಿಯು ಜಗದ ಸೃಷ್ಟಿಗೆ ಕಾರಣಿಕರ್ತಳು ಎಂಬ ಉಲ್ಲೇಖವಿದೆ.
ಸೂರ್ಯದೇವನಿಗೆ ಲೋಕವನ್ನು ಬೆಳಗಲು ಬೆಳಕು ನೀಡುವವಳು ಕೂಷ್ಮಾಂಡ ದೇವಿ. ಆದ್ದರಿಂದ ಸೂರ್ಯ ನಾರಾಯಣನು ಎಲ್ಲಾ ಖಾಯಿಲೆಗಳನ್ನು ವಾಸಿ ಮಾಡುವ ಗುಣ ಹೊಂದಿದ್ದಾನೆ ಎಂದು ಶಾಸ್ತ್ರಗಳು ಹೇಳುತ್ತವೆ.
ದೇವಿಯ ರೂಪ ಯಾವುದು?
ಕೂಷ್ಮಾಂಡ ರೂಪದಲ್ಲಿರುವ ದೇವಿಯು 8 ಕೈಗಳನ್ನು ಹೊಂದಿದ್ದು, ಅಷ್ಟ ಭುಜದೇವಿ ಎಂತಲೂ ಕರೆಯುತ್ತಾರೆ. ತನ್ನ ಎಂಟು ಕೈಗಳಲ್ಲಿ ಕಮಂಡಲ, ಧನಸ್ಸು, ಕಮಲ, ಗದ್ದೆ, ಅಮೃತ ಕಲಶ, ಚಕ್ರ ಹಾಗೂ ಬಾಣವನ್ನು ಹಿಡಿದಿರುತ್ತಾಳೆ. ಈ ದೇವಿಗೆ ಪೂಜೆಯನ್ನು ಸಲ್ಲಿಸುವುದರಿಂದ ಸೂರ್ಯನಿಂದಾಗುವ ತೊಂದರೆಗಳು ದೂರವಾಗುತ್ತವೆ.
ಪೂಜಾ ವಿಧಾನ:
ಕೂಷ್ಮಾಂಡ ದೇವಿಗೆ ಮಲ್ಲಿಗೆ ಹೂವು ಪ್ರಿಯವಾದದ್ದು, ಹಾಗಾಗಿ ಮಲ್ಲಿಗೆ ಹೂವನ್ನು ಇಟ್ಟು ಪೂಜೆ ಮಾಡುವುದು ಶುಭವನ್ನು ತಂದುಕೊಡುತ್ತದೆ. ನೈವೇದ್ಯಕ್ಕೆ ಸಕ್ಕರೆ ಹಾಗೂ ಮೈದಾ ಬಳಸಿ ತಯಾರಿಸಿದ ಸಿಹಿ ಪದಾರ್ಥಗಳು ಇಡಬಹುದು. ಬೂದು ಕುಂಬಳದಲ್ಲಿ ತಯಾರಿಸಿದ ಪದಾರ್ಥಗಳು, ಹೆಸರುಕಾಳು ಉಸ್ಲಿ ಹಾಗೂ ಹಾಲು ಪಾಯಸವನ್ನು ನೈವೇದ್ಯವಾಗಿ ಬಳಸಬಹುದು.
ಪೂಜೆಯನ್ನು ಸಲ್ಲಿಸುವವರು ಕೇಸರಿ ಅಥವಾ ಆರೆಂಜ್ ಬಣ್ಣದ ವಸ್ತ್ರವನ್ನು ತೊಟ್ಟು ಪೂಜೆ ಸಲ್ಲಿಸಿದರೆ ಸರ್ವಸಿದ್ಧಿ ಪ್ರಾಪ್ತಿಯಾಗುತ್ತದೆ. ದೇವಿಯ ಅಲಂಕಾರಕ್ಕೆ ಸೂಜಿ ಮಲ್ಲಿಗೆ ಅಥವಾ ಮಲ್ಲಿಗೆ ಹೂವಿನ ಜೊತೆಯಲ್ಲಿ ನೆಲ್ಲಿ ಎಲೆ ಬಳಸಬಹುದು.
ಪೂಜೆಯಲ್ಲಿ ಪಠಿಸಬೇಕಾದ ಮಂತ್ರ:
ಓಂ ದೇವಿ ಕೂಶ್ಮಾಂಡೇ ನಮಃ
ಓಂ ಶ್ರೀಂ ಕೂಶ್ಮಾಂಡ ದೇವಿ ನಮಃ
ಓಂ ಪದ್ಮಾಯೇ ನಮಃ
ಓಂ ಕಮಲಾಯೇ ನಮಃ
ಓಂ ಕರುಣಾಯಯೇ ನಮಃ"
ಓಂ ಪದ್ಮ ಪರ್ಯಾಯೇ ನಮಃ
ಯಾ ದೇವಿ ಸರ್ವಭೂತೇಶುಮಾ ಕೂಶ್ಮಾಂಡ ರೂಪೇಣ ಸಮಸ್ಥಿತ
ನಮಸ್ತಸ್ಯೆ ನಮಸ್ತಸ್ಯೆ ನಮಸ್ತಸ್ಯೆ ನಮೋ ನಮಃ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.