ಎಐ ಚಿತ್ರ
ಎಲ್ಲೆಡೆ ನವರಾತ್ರಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ನವದುರ್ಗೆಯರ ಅವತಾರಗಳನ್ನು ಪ್ರತಿದಿನ ಭಕ್ತಿಯಿಂದ ಪೂಜಿಸುವುದರಿಂದ ಇಷ್ಟಾರ್ಥಗಳು ಸಿದ್ದಿಯಾಗುವುದು ಎಂದು ನಂಬಲಾಗಿದೆ.
ನವರಾತ್ರಿಯ 5ನೇ ದಿನ ಸ್ಕಂದ ಮಾತೆಯನ್ನು ಆರಾಧಿಸಲಾಗುತ್ತದೆ. ಸ್ಕಂದ ಮಾತೆಯು ಪಾರ್ವತಿಯ ರೂಪವೆಂದು ಹೇಳಲಾಗುತ್ತದೆ. ಸ್ಕಂದ ಮಾತೆಯನ್ನು ಪೂಜಿಸುವಾಗ ಕೆಲವು ವಿಶೇಷ ಆಹಾರಗಳನ್ನು ನೈವೇದ್ಯದ ರೂಪದಲ್ಲಿ ಅರ್ಪಿಸಿದರೆ ದೇವಿಯ ಅನುಗ್ರಹ ದೊರೆಯುತ್ತದೆ ಎಂದು ವೇದಗಳಲ್ಲಿ ಉಲ್ಲೇಖಿಸಲಾಗಿದೆ.
ದೇವಿಯನ್ನು ಪೂಜಿಸುವ ಮುನ್ನ ಅಕ್ಕಿ ಹಿಟ್ಟಿನ ರಂಗೋಲಿಯನ್ನು ಹಾಕಬೇಕು. ದೇವರ ಮನೆಯಲ್ಲಿ ಪೂಜಿಸುವುದಾದರೆ ಅಲ್ಲಿಯೆ ರಂಗೋಲಿಯನ್ನು ಹಾಕುವುದು ಉತ್ತಮ. ಸ್ಕಂದ ಮಾತೆಯನ್ನು ಪೂಜಿಸುವುದರಿಂದ ಸಿರಿತನ ವೃದ್ದಿಯಾಗುತ್ತದೆ ಎಂಬ ನಂಬಿಕೆಯೂ ಇದೆ.
ಸ್ಕಂದ ಮಾತೆಗೆ ಯಾವ ಆಹಾರ ನೈವೇದ್ಯ ಮಾಡಬೇಕು?
ದೇವರ ಮನೆಯಲ್ಲಿ ಸ್ಕಂದ ಮಾತೆಯ ಫೋಟೋ ಇಟ್ಟು ಪೂಜೆ ಸಲ್ಲಿಸಬೇಕು. ಪೂಜೆಯಲ್ಲಿ ನೈವೇದ್ಯಕ್ಕೆ ಕೋಸಂಬರಿ, ಕಡಲೆ ಬೇಳೆ ಉಸ್ಲಿ, ಬಿಳಿ ಪೊಂಗಲ್ ಹಾಗೂ ಮೊಸರು ಅನ್ನವನ್ನು ಮಾಡಬಹುದು. ಹಾಗೂ ಸಿಹಿ ತಿಂಡಿಗಳನ್ನು ಕೂಡ ನೈವೇದ್ಯದಲ್ಲಿ ಬಳಸಬಹುದು. ಹೀಗೆ ಮಾಡಿದರೆ ದೇವರ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆ ಇದೆ.
ಪಠಿಸಬೇಕಾದ ಮಂತ್ರ?
ಓಂ ದೇವಿ ಸ್ಕಂದಮಾತಾಯೇ ನಮಃ
ಓಂ ನಮೋ ನಾರಾಯಣಿಯೇ ನಮಃ
ಓಂ ನಮೋ ಸ್ಕಂದಮಾತಾಯ ನಮಃ
ಓಂ ನಮೋ ಮೋಹಿನಿಯೆ ನಮಃ
ಓಂ ನಮೋ ಸರ್ವ ಮಂಗಳ ಕಾರುಣಿಯೇ ನಮಃ
ಯಾ ದೇವಿ ಸರ್ವಭೂತೇಶು ಮಾಸ್ಕಂದಮಾತ ರೂಪೇಣ ಸಂಸ್ಥಿತಾ!
ನಮಸ್ತಸ್ಯೆ ನಮಸ್ತಸ್ಯೆ ನಮಸ್ತಸ್ಯೆ ನಮೋನಮಃ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.