
ಧಾರ್ಮಿಕ ನಂಬಿಗಳ ಪ್ರಕಾರ ತುಳಸಿ ಗಿಡ ಅಥವಾ ಎಲೆ ವಿಷ್ಣುವಿಗೆ ಪ್ರಿಯವಾದದ್ದಾಗಿದೆ. ಆದ್ದರಿಂದ ವಿಷ್ಣು ಪೂಜೆಯಲ್ಲಿ ತುಳಸಿ ಬಳಸಲಾಗುತ್ತದೆ.
ತುಳಸಿ ದಳದಲ್ಲಿ ಲಕ್ಷ್ಮೀ ದೇವಿ ನೆಲೆಸಿದ್ದಾಳೆ ಎಂಬ ನಂಬಿಕೆ ಇದೆ. ಈ ಕಾರಣದಿಂದ ಎಲ್ಲರ ಮನೆಯಲ್ಲಿ ತುಳಸಿ ಗಿಡವನ್ನು ನೆಡಲಾಗುತ್ತದೆ. ಇದರಿಂದ ಆರ್ಥಿಕ ಲಾಭ ಹಾಗೂ ಲಕ್ಷ್ಮೀ ದೇವಿಯ ಆಶೀರ್ವಾದ ದೊರೆಯುತ್ತದೆ ಎಂದು ಹೇಳಲಾಗುತ್ತದೆ.
ತುಳಸಿ ಪೂಜೆಯಿಂದ ಸಿಗುವ ಲಾಭಗಳೇನು?
ವೈವಾಹಿಕ ಜೀವನದ ಸಮಸ್ಯೆಗಳು ಪರಿಹಾರವಾಗುತ್ತವೆ.
ಸಂತಾನ ಪ್ರಾಪ್ತಿಯಾಗುತ್ತದೆ.
ಮನೆ ಮಕ್ಕಳಿಗೆ ವಿದ್ಯೆ ಹಾಗೂ ಜ್ಞಾನ ವೃದ್ಧಿಯಾಗುತ್ತದೆ.
ಜಾತಕದಲ್ಲಿನ ಶನಿದೋಷ ನಿವಾರಣೆಯಾಗಲು ತುಳಸಿಯ ಬೇರನ್ನು ದೇವರ ಕೋಣೆಯಲ್ಲಿ ಇಟ್ಟು ಪೂಜಿಸುವುದರಿಂದ ದೋಷ ನಿವಾರಣೆಯಾಗುತ್ತದೆ.
ವ್ಯಾಪಾರ ಹಾಗೂ ಉದ್ಯೋಗದಲ್ಲಿ ಯಶಸ್ಸು ಪಡೆಯಲು ಪ್ರತಿದಿನ ಸಂಜೆ ಸಮಯದಲ್ಲಿ ತುಳಸಿ ಗಿಡದ ಬಳಿ ತುಪ್ಪದ ದೀಪವನ್ನು ಹಚ್ಚುವುದರಿಂದ ವ್ಯಾಪಾರ ಹಾಗೂ ಉದ್ಯೋಗದಲ್ಲಿನ ಅಡೆತಡೆಗಳು ದೂರವಾಗುತ್ತವೆ.
ತುಳಸಿ ಇಲ್ಲದ ವಿಷ್ಟುವಿನ ಪೂಜೆ ಅಪೂರ್ಣ
ತುಳಸಿಯನ್ನು ಭಾನುವಾರ ಮತ್ತು ಏಕಾದಶಿ ತಿಥಿಯಂದು ಯಾವುದೇ ಕಾರಣಕ್ಕೂ ಕೀಳಬಾರದು. ಕಾರಣ, ತುಳಸಿ ಮಾತೆಯು ನಾರಾಯಣನ ಒಲುಮೆಗಾಗಿ ಈ ದಿನಗಳಲ್ಲಿಉಪವಾಸ ಮಾಡುತ್ತಾಳೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿತವಾಗಿದೆ. ಆದ್ದರಿಂದ ಭಾನುವಾರ ಮತ್ತು ಏಕಾದಶಿ ತಿಥಿಯಂದು ತುಳಸಿಯನ್ನು ಬಿಡಿಸಿದರೆ ಅಶುಭ ಫಲಗಳು ಉಂಟಾಗುತ್ತವೆ. ತುಳಸಿ ದಳಗಳನ್ನು ಸೂರ್ಯಾಸ್ತದ ನಂತರ ಬಿಡಿಸಬಾರದು.
ಹೊಸ ತುಳಸಿ ಗಿಡವನ್ನು ಭಾನುವಾರ ಸೋಮವಾರ ಬುಧವಾರ ಈ ದಿನಗಳಂದು ನೆಡಬಾರದು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.
ಏಕಾದಶಿಯ ವಿಷ್ಣುವಿನ ಪೂಜೆಯಲ್ಲಿ ತುಳಿಸಿಯನ್ನು ಕಡ್ಡಾಯವಾಗಿ ಉಪಯೋಗಿಸಬೇಕು.
ಸೂರ್ಯ ಗ್ರಹಣ ಮತ್ತು ಚಂದ್ರಗ್ರಹಣದಂದು ತುಳಸಿಯನ್ನು ಕೀಳುವುದಾಗಲಿ ಅಥವಾ ನೆಡುವದಾಗಲಿ ಮಾಡಬಾರದು. ಗ್ರಹಣದ ದಿನದಂದು ನಾವು ಬಳಸುವ ಆಹಾರ ಪದಾರ್ಥ ಹಾಗೂ ನೀರಿನಲ್ಲಿ ತುಳಸಿ ಎಲೆಯನ್ನು ಹಾಕಿ ಇಡಬೇಕು. ಇದರಿಂದಾಗಿ ಗ್ರಹಣದ ಪ್ರಭಾವ ನಮ್ಮ ಹಾಗೂ ಮನೆಯ ವಾಸ್ತುವಿನ ಮೇಲೆ ಪರಿಣಾಮ ಬೀರುವುದಿಲ್ಲ ಎನ್ನುವ ನಂಬಿಕೆ ಇದೆ.
ಹೊಸ ತುಳಸಿ ಗಿಡವನ್ನು ನೆಡಲು ಗುರುವಾರ ಶುಕ್ರವಾರ ಶನಿವಾರ ಶುಭವೆಂದು ಪರಿಗಣಿಸಲಾಗಿದೆ. ತುಳಸಿ ಗಿಡವನ್ನು ನೆಡುವುದಾದರೆ, ಸೂರ್ಯೋದಯದ ಸಮಯದಲ್ಲಿ ನೆಡುವುದು ಉತ್ತಮ ಎಂದು ಹೇಳಲಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಉತ್ತರ, ಈಶಾನ್ಯ ಹಾಗೂ ಪೂರ್ವ ದಿಕ್ಕಿನಲ್ಲಿ ತುಳಸಿ ಗಿಡವನ್ನು ನೆಡುವುದು ಶ್ರೇಷ್ಠ ಎಂದು ಹೇಳಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.