ADVERTISEMENT

ವೈಕುಂಠ ಏಕಾದಶಿ: ಉಪವಾಸ ಮಾಡುವವರು ಈ ತಪ್ಪುಗಳನ್ನು ಮಾಡಬೇಡಿ

ಎಲ್.ವಿವೇಕಾನಂದ ಆಚಾರ್ಯ
Published 30 ಡಿಸೆಂಬರ್ 2025, 6:32 IST
Last Updated 30 ಡಿಸೆಂಬರ್ 2025, 6:32 IST
<div class="paragraphs"><p>ಚಿತ್ರ: ಎಐ</p></div>
   

ಚಿತ್ರ: ಎಐ

ವೈಕುಂಠ ಏಕಾದಶಿಯಂದು ಉಪವಾಸ ಆಚರಿಸಿ ನಾರಾಯಣನಿಗೆ ಪೂಜೆ ಸಲ್ಲಿಸುವುದರಿಂದ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಜ್ಯೋತಿಷದ ಪ್ರಕಾರ, ಉಪವಾಸ ಆಚರಣೆ ಮಾಡುವಾಗ ಕೆಲವು ತಪ್ಪುಗಳನ್ನು ಮಾಡಬಾರದು.

ಈ ದಿನ ಉಪವಾಸದ ಜೊತೆಗೆ ವಿಷ್ಣು ಸಹಸ್ರನಾಮ ಜಪಿಸುವುದು ಶುಭಕರವೆಂದು ಹೇಳಲಾಗುತ್ತದೆ. ಇದರಿಂದ ಮೋಕ್ಷ ಸಿಗಲಿದೆ ಎಂಬ ನಂಬಿಕೆ ಇದೆ. 

ADVERTISEMENT

ಈ ದಿನ ಹಗಲಿನಲ್ಲಿ ನಿದ್ದೆ ಮಾಡಲೇಬಾರದು. ಇದು ಆರೋಗ್ಯ ಸಮಸ್ಯೆ ಇರುವವರು ಹಾಗೂ ಮಕ್ಕಳಿಗೆ ಅನ್ವಯವಾಗುವುದಿಲ್ಲ. ಉಳಿದವರು ಹಾಗೂ ಉಪವಾಸ ಆಚರಣೆಯಲ್ಲಿರುವಾಗ ನಿದ್ದೆ ಮಾಡಬಾರದು.

ಈ ದಿನ ಸಾಧ್ಯವಾದಷ್ಟು ಒಳ್ಳೆಯ ಕೆಲಸಗಳನ್ನು ಮಾಡಬೇಕು. ಧಾನ, ಧರ್ಮ ಮಾಡುವುದು ಉತ್ತಮ.

ಇಂದು ಗಂಡ ಹೆಂಡತಿ ಇಬ್ಬರೂ ಸಂತೋಷದಿಂದ ಕಾಲ ಕಳೆಯಬೇಕು. ವಾದ ವಿವಾದ ಹಾಗೂ ಜಗಳ ಮಾಡಿಕೊಳ್ಳುವುದನ್ನು ತಪ್ಪಿಸುವುದು ಉತ್ತಮ. ಇದರಿಂದ ವೈವಾಹಿಕ ಜೀವನ ಇನ್ನಷ್ಟು ಗಟ್ಟಿಯಾಗುತ್ತದೆ.

ಉಪವಾಸ ಆಚರಿಸುವಾಗ ಗಂಡ–ಹೆಂಡತಿ ಯಾವುದೇ ಕಾರಣಕ್ಕೂ ಲೈಂಗಿಕ ಸಂಪರ್ಕ ಹೊಂದಬಾರದು ಎಂದು ಜ್ಯೋತಿಷ ಹೇಳುತ್ತದೆ.  

ಈ ದಿನ ಅಪ್ಪಿತಪ್ಪಿಯೂ ತುಳಸಿ ಗಿಡ ಅಥವಾ ಎಲೆಯನ್ನು ಕೀಳಬಾರದು.

ರಾತ್ರಿ ಪೂರ್ತಿ ಜಾಗರಣೆ ಮಾಡಿ, ವಿಷ್ಣುವಿನ ನಾಮ ಜಪಿಸಬೇಕು. ಇದರಿಂದ ಇಷ್ಟಾರ್ಥಗಳು ಈಡೇರಲಿವೆ ಎಂದು ಜ್ಯೋತಿಷದಲ್ಲಿ ಹೇಳಲಾಗಿದೆ. ನೀರಿಗೆ ತುಳಸಿ ದಳ ಸೇರಿಸಿ ಆಗಾಗಾ ಕುಡಿಯುವುದು ಶುಭಕರ.

ಉಪವಾಸ ಆಚರಿಸುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ವಿಶ್ರಾಂತಿ ಸಿಗುತ್ತದೆ. ಅಲ್ಲದೆ ನೀರು ಹೊಟ್ಟೆಯನ್ನು ಶುದ್ಧಿ ಮಾಡುತ್ತದೆ

ಈ ದಿನ ಕಟ್ಟುನಿಟ್ಟಾದ ವ್ರತ ಆಚರಿಸಿದರೆ, ಮೋಕ್ಷ ಪ್ರಾಪ್ತವಾಗುತ್ತದೆ ಎಂಬ ನಂಬಿಕೆ ಇದೆ. ಇಂದು ವಿಷ್ಟು ದೇವಾಲಯಕ್ಕೆ ಭೇಟಿ ನೀಡಿದರೆ ಒಳ್ಳೆಯದಾಗಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.