ಚಿತ್ರ ಕೃಪೆ: ಪ್ರಾತಿನಿಧಿಕ ಚಿತ್ರ
ಕೆಲ ವಿಷಯಗಳಲ್ಲಿ ಕೆಲವರಿಗೆ ಭಯ ಕಾಡುವುದು ಸಾಮಾನ್ಯ. ಆದರೆ ಯಾವೆಲ್ಲ ರಾಶಿಯಲ್ಲಿ ಜನಿಸಿದವರಿಗೆ ಏನೆಲ್ಲಾ ಭಯ ಕಾಡಲಿದೆ ಎಂಬುದು ಜ್ಯೋತಿಷ ಶಾಸ್ತ್ರದಲ್ಲಿ ಹೇಳಲಾಗಿದೆ. ಯಾವ ರಾಶಿಯವರಿಗೆ ಏನೆಲ್ಲಾ ಭಯವಿರುತ್ತದೆ ಎಂಬುದರ ಮಾಹಿತಿ ಇಲ್ಲಿದೆ...
ಮೇಷ ರಾಶಿಯವರು ಸೋಲನ್ನು ಒಪ್ಪಿಕೊಳ್ಳಲು ಭಯಪಡುತ್ತಾರೆ. ಪ್ರತಿ ಕೆಲಸದಲ್ಲೂ ತಾವೇ ಮೊದಲಿಗರಾಗಿರಬೇಕು ಎಂದು ಬಯಸುತ್ತಾರೆ. ಆದ್ದರಿಂದ, ಯಾವುದೇ ವಿಚಾರದಲ್ಲಿ ಹಿಂದುಳಿಯುವುದು ಇವರಿಗೆ ದೊಡ್ಡ ಭಯವಾಗಿ ಕಾಡುತ್ತದೆ.
ವಷಭ ರಾಶಿಯಲ್ಲಿ ಜನಿಸಿದವರು ಸ್ಥಿರತೆ ಮತ್ತು ಸುರಕ್ಷತೆಯನ್ನು ಕಳೆದುಕೊಳ್ಳುವುದು ಭಯದ ಸಂಗತಿ. ಹಠಾತ್ ಬದಲಾವಣೆಗಳು ಮತ್ತು ಅನಿಶ್ಚಿತ ಬೆಳವಣಿಗೆಗಳು ಇವರನ್ನು ವಿಚಲಿತಗೊಳಿಸುತ್ತವೆ.
ಮಿಥುನ ರಾಶಿಯವರಿಗೆ ಒಂಟಿತನ ಕಾಡುವುದರಿಂದ ಏಕಾಂಗಿಯಾಗಿ ಇರಲು ಹೆದರುತ್ತಾರೆ. ಇವರಿಗೆ ಜನರ ಜೊತೆ ಬೆರೆಯುವುದು ಮತ್ತು ಸಂಭಾಷಣೆ ಮಾಡುವುದೆಂದರೆ ಅಚ್ಚುಮೆಚ್ಚು.
ಕಟಕ ರಾಶಿಯವರು ಕುಟುಂಬ ಮತ್ತು ಸ್ನೇಹಿತರ ವಿಚಾರದಲ್ಲಿ ಹೆಚ್ಚು ಭಾವನಾತ್ಮಕವಾಗಿರುತ್ತಾರೆ. ಪ್ರೀತಿ ಪಾತ್ರರನ್ನು ಕಳೆದುಕೊಳ್ಳಲು ಭಯಪಡುತ್ತಾರೆ. ಅಂತಹವರಿಂದ ದೂರಾಗುವುದನ್ನು ಸಹಿಸಲಾರರು.
ಸಿಂಹ ರಾಶಿಯಲ್ಲಿ ಜನಿಸಿದವರು ಸದಾ ಎಲ್ಲರ ಮೆಚ್ಚುಗೆಗೆ ಪಾತ್ರರಾಗಬೇಕೆಂದು ಬಯಸುತ್ತಾರೆ. ಯಾರಿಂದಲಾದರೂ ನಿರ್ಲಕ್ಷಕ್ಕೆ ಒಳಗಾದರೆ ಪರಿತಪಿಸುತ್ತಾರೆ. ಗಮನ ಸೆಳೆಯುವಲ್ಲಿ ವಿಫಲವಾಗುವ ಭಯ ಇವರನ್ನು ಕಾಡುತ್ತದೆ.
ಕನ್ಯಾ ರಾಶಿಯವರು ತಮ್ಮ ಕೆಲಸದಲ್ಲಿ ಪರಿಪೂರ್ಣತೆಯನ್ನು ಬಯಸುವುದರಿಂದ, ಅಪೂರ್ಣತೆಯನ್ನು ಮತ್ತು ತಪ್ಪುಗಳನ್ನು ಮಾಡಲು ಹೆದರುತ್ತಾರೆ. ಸಣ್ಣ ತಪ್ಪುಗಳೂ ಇವರನ್ನು ಕಾಡುತ್ತವೆ.
ತುಲಾ ರಾಶಿಯವರಿಗೆ ಸಮತೋಲನದಿಂದ ಕೂಡಿದ ಜೀವನವನ್ನು ನೀರಿಕ್ಷಿಸುತ್ತಾರೆ. ಇವರು ವಿವಾದಗಳು ಮತ್ತು ಅನ್ಯಾಯವನ್ನು ಎದುರಿಸಲು ಹಿಂಜರಿಯುತ್ತಾರೆ.
ವೃಶ್ಚಿಕ ರಾಶಿಯಲ್ಲಿ ಜನಿಸಿದವರು ವಿಶ್ವಾಸವನ್ನು ಕಳೆದುಕೊಳ್ಳುಲು ಭಯಪಡುತ್ತಾರೆ. ರಹಸ್ಯಗಳನ್ನು ಕಾಪಾಡಿಕೊಳ್ಳುತ್ತಾರೆ. ತಮ್ಮ ಮೇಲೆ ಯಾರಾದರೂ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದರೆ ಅದನ್ನು ವಿರೋಧಿಸುತ್ತಾರೆ.
ಧನಸ್ಸು ರಾಶಿಯವರು ಹೊಸ ಸ್ಥಳಗಳನ್ನು ಅನ್ವೇಷಿಸಲು ಮತ್ತು ಮುಕ್ತವಾಗಿರಲು ಬಯಸುತ್ತಾರೆ. ಸ್ವಾತಂತ್ರ್ಯ ಕಳೆದುಕೊಳ್ಳಲು ಭಯಪಡುತ್ತಾರೆ. ಜವಾಬ್ದಾರಿಗಳು ಇವರನ್ನು ಮಿತಿಗೊಳಿಸಿದಂತೆ ಅನಿಸುತ್ತದೆ.
ಮಕರ ರಾಶಿಯಲ್ಲಿ ಜನಿಸಿದವರು ಮಹತ್ವಾಕಾಂಕ್ಷೆಗಳನ್ನು ಸಾಧಿಸಲು ವಿಫಲರಾಗಲು ಭಯಪಡುತ್ತಾರೆ. ಇವರು ಪರಿಶ್ರಮಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ.
ಕುಂಭ ರಾಶಿಯವರು ಸಾಂಪ್ರದಾಯಿಕ ನಿಯಮಗಳನ್ನು ಪಾಲಿಸಲು ಹಾಗೂ ಇತರರಂತೆ ಇರಲು ಇಷ್ಟಪಡುವುದಿಲ್ಲ.
ಮೀನ ರಾಶಿಯಲ್ಲಿ ಜನಿಸಿದವರು ವಾಸ್ತವದಲ್ಲಿ ಬದುಕಲು ಭಯಪಡುತ್ತಾರೆ. ಇವರು ತಮ್ಮದೇ ಕಲ್ಪನಾ ಲೋಕದಲ್ಲಿ ಇರುತ್ತಾರೆ. ಕಠಿಣ ಮಾತುಗಳಿಂದ ಇವರು ಗೊಂದಲಕ್ಕೀಡಾಗುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.