
ಪ್ರಜಾವಾಣಿ ವಾರ್ತೆ
ಕನ್ನಡ ಸಾಹಿತ್ಯ ಸಮ್ಮೇಳನ
ಬಳ್ಳಾರಿ: ‘ಬಳ್ಳಾರಿಯಲ್ಲಿ ನಡೆಯುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಾಹಾರದ ಜೊತೆ ಮಾಂಸಾಹಾರವನ್ನು ಒದಗಿಸಿ, ಆಹಾರ ಸಮಾನತೆ ಕಾಯ್ದುಕೊಳ್ಳಬೇಕು’ ಎಂದು ‘ನಾವು ದ್ರಾವಿಡ ಕನ್ನಡಿಗರು ಚಳವಳಿ’ ಸಂಘಟನೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.
‘ಮಂಡ್ಯದಲ್ಲಿ ನಡೆದ ಸಮ್ಮೇಳನದಲ್ಲಿ ಆಹಾರದಲ್ಲಿ ಸಮಾನತೆಗಾಗಿ ಹೋರಾಟ ನಡೆದಿದ್ದು, ಮೊಟ್ಟೆ ನೀಡಲಾಗಿತ್ತು. ಈಗ ಬಳ್ಳಾರಿ ಸಮ್ಮೇಳನ ನಡೆಯುವ ದಿನಾಂಕ ಘೋಷಣೆ ಜತೆಗೆ ಆಹಾರ ಪಟ್ಟಿ ಪ್ರಕಟಿಸಬೇಕು’ ಎಂದು ಸಂಘಟನೆಯು ಕೋರಿದೆ. ಆಗ್ರಹಿಸಿದೆ. ಸಂಘಟನೆಯ ಚೇತನ್, ಬಳ್ಳಾರಿ ಶೇಖರ್ ಬಾಬು, ಮಂಡ್ಯದ ಅಭಿ ಒಕ್ಕಲಿಗ ಅವರು ಮನವಿ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.