ADVERTISEMENT

ಹೊಸಪೇಟೆಯಲ್ಲಿ ಎಸ್‌ಬಿಐನಿಂದ ₹5 ಲಕ್ಷ ಕೋವಿಡ್‌ ಕಿಟ್‌

​ಪ್ರಜಾವಾಣಿ ವಾರ್ತೆ
Published 10 ಜೂನ್ 2021, 13:26 IST
Last Updated 10 ಜೂನ್ 2021, 13:26 IST
ಎಸ್‌ಬಿಐ ಅಧಿಕಾರಿಗಳು ಗುರುವಾರ ಹೊಸಪೇಟೆಯಲ್ಲಿ ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಅವರಿಗೆ ಕೋವಿಡ್‌ ಕಿಟ್‌ ಹಸ್ತಾಂತರಿಸಿದರು
ಎಸ್‌ಬಿಐ ಅಧಿಕಾರಿಗಳು ಗುರುವಾರ ಹೊಸಪೇಟೆಯಲ್ಲಿ ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಅವರಿಗೆ ಕೋವಿಡ್‌ ಕಿಟ್‌ ಹಸ್ತಾಂತರಿಸಿದರು   

ಹೊಸಪೇಟೆ (ವಿಜಯನಗರ): ನಗರದ ಭಾರತೀಯ ಸ್ಟೇಟ್‌ ಬ್ಯಾಂಕಿನಿಂದ ಗುರುವಾರ ನಗರದಲ್ಲಿ ₹5 ಲಕ್ಷ ಮೊತ್ತದ ಕೋವಿಡ್‌ ಕಿಟ್‌ ಅನ್ನು ತಾಲ್ಲೂಕು ಆಡಳಿತಕ್ಕೆ ನೀಡಲಾಯಿತು.

ಬ್ಯಾಂಕಿನ ಬ್ಯಾಂಕಿನ ವಿಭಾಗೀಯ ಪ್ರಧಾನ ವ್ಯವಸ್ಥಾಪಕ ಪ್ರದೀಪ್ ನಾಯರ್ ಅವರು ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಅವರಿಗೆಕಿಟ್ ಹಸ್ತಾಂತರಿಸಿದರು.

ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸುವ ಕೊರೊನಾ ಮುಂಚೂಣಿ ಸೇನಾನಿಗಳಿಗೆ ಎನ್ -95 ಮಾಸ್ಕ್,ಸ್ಯಾನಿಟೈಸರ್, ಕೈಗವಸು, ಪಲ್ಸ್‌ಆಕ್ಸಿಮೀಟರ್, ಔಷಧವನ್ನು ಕಿಟ್‌ ಒಳಗೊಂಡಿದೆ.

ADVERTISEMENT

ಬ್ಯಾಂಕಿನಮುಖ್ಯ ಶಾಖೆಯ ವ್ಯವಸ್ಥಾಪಕ ಅಭಯ್ ಕುಮಾರ್ ಸಿಂಗ್, ವಲಯ ವ್ಯವಸ್ಥಾಪಕ ರವಿ ರಾಮಮೂರ್ತಿ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಭಾಸ್ಕರ್, ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.