
ಆನೇಕಲ್: ಪಟ್ಟಣಕ್ಕೆ ಸಮೀಪದ ಡೆಂಕಣಿಕೋಟೆಯ ಮಲ್ಲಿಕಾರ್ಜುನ ದುರ್ಗಂನಲ್ಲಿ ಜಲ್ಲಿಕಟ್ಟು ನಡೆಯಿತು. ಸಹಸ್ರಾರು ಮಂದಿ ಜಲ್ಲಿಕಟ್ಟು ವೀಕ್ಷಿಸಿದರು. ಜಲ್ಲಿಕಟ್ಟಿನಲ್ಲಿ ರಾಸುಗಳನ್ನು ಹಿಡಿಯಲು ಯುವಕರ ಗುಂಪುಗಳು ಹರಸಾಹಸ ಪಡುತ್ತಿದ್ದ ದೃಶ್ಯ ಕಂಡು ಬಂದಿತು.
ಮಲ್ಲಿಕಾರ್ಜುನ ದುರ್ಗಂನಲ್ಲಿ ಸಿಡಿಲು ಮಲ್ಲಿಕಾರ್ಜುನ ಸ್ವಾಮಿಯ ಜಾತ್ರಾ ಮಹೋತ್ಸವದ ಪ್ರಯುಕ್ತ ಪ್ರತಿ ವರ್ಷ ಜಲ್ಲಿಕಟ್ಟು ನಡೆಸಲಾಗುತ್ತದೆ. ಈ ಬಾರಿ ಕರ್ನಾಟಕದ ಗಡಿ ಗ್ರಾಮಗಳು ಸೇರಿದಂತೆ ಸಹಸ್ರಾರು ಮಂದಿ ಜಲ್ಲಿಕಟ್ಟು ಪ್ರಿಯರು ಆಗಮಿಸಿದ್ದರು. ಆನೇಕಲ್, ಅತ್ತಿಬೆಲೆ, ಗುಮ್ಮಳಾಪುರ, ಥಳೀ ಸೇರಿದಂತೆ ವಿವಿಧೆಡೆಯಿಂದ ಹೋರಿಗಳು ಆಗಮಿಸಿದ್ದವು. ರಾಸುಗಳನ್ನು ಹಿಡಿಯಲು ಯುವಕರು ಮುನ್ನುಗ್ಗುತ್ತಿದ್ದ ದೃಶ್ಯ ಗಮನ ಸೆಳೆಯಿತು.
ಕರ್ನಾಟಕದ ರಾಣೆಬೆನ್ನೂರು ರಾಸು ನೆರೆದಿದ್ದವರ ಗಮನ ಸೆಳೆಯಿತು. ಕರ್ನಾಟಕ ಬಾವುಟದ ಬಣ್ಣದ ಬಲೂನ್‌ಗಳನ್ನು ರಾಸಿಗೆ ಕಟ್ಟಿ ಅಲಂಕರಿಸಲಾಗಿತ್ತು. ಈ ರಾಸನ್ನು ಹಿಡಿಯಲು ನೆರೆದಿದ್ದವರು ಪ್ರಯತ್ನ ಪಟ್ಟರೂ ರಾಸಿನ ವೇಗಕ್ಕೆ ಯಾರು ಸಹ ಮುಟ್ಟಲಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.