ADVERTISEMENT

ಡೆಂಗಿ: ರಾಜ್ಯದಲ್ಲಿ 445 ಪ್ರಕರಣ ದೃಢ

​ಪ್ರಜಾವಾಣಿ ವಾರ್ತೆ
Published 14 ಜುಲೈ 2024, 15:49 IST
Last Updated 14 ಜುಲೈ 2024, 15:49 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 294 ಸೇರಿ ರಾಜ್ಯದಲ್ಲಿ 445 ಡೆಂಗಿ ಪ್ರಕರಣಗಳು ಹೊಸದಾಗಿ ಭಾನುವಾರ ದೃಢಪಟ್ಟಿವೆ. 

ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, 24 ಗಂಟೆಗಳಲ್ಲಿ 2,630 ಪರೀಕ್ಷೆಗಳನ್ನು ಮಾಡಲಾಗಿದೆ. 17 ಮಂದಿ ಒಂದು ವರ್ಷದೊಳಗಿನವರಾದರೆ, 145 ಮಂದಿ ಒಂದರಿಂದ 18 ವರ್ಷದವರು, 283 ಮಂದಿ 18 ವರ್ಷ ಮೇಲ್ಪಟ್ಟವರಿಗೆ ಸೋಂಕು ದೃಢಪಟ್ಟಿದೆ. ಸದ್ಯ ಡೆಂಗಿ ಪೀಡಿತರಲ್ಲಿ 308 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ADVERTISEMENT

9 ಜಿಲ್ಲೆಗಳಲ್ಲಿ ಹೊಸದಾಗಿ ಡೆಂಗಿ ಪ್ರಕರಣಗಳು ಖಚಿತಪಟ್ಟಿವೆ. ದಕ್ಷಿಣಕನ್ನಡದಲ್ಲಿ 62, ಮಂಡ್ಯದಲ್ಲಿ 33, ತುಮಕೂರಿನಲ್ಲಿ 19, ಚಿಕ್ಕಮಗಳೂರಿನಲ್ಲಿ 13, ಧಾರವಾಡದಲ್ಲಿ 12, ಉಡುಪಿಯಲ್ಲಿ 5, ಬೀದರ್‌ನಲ್ಲಿ 4, ಬಳ್ಳಾರಿಯಲ್ಲಿ3 ಮೂರು ಪ್ರಕರಣ ವರದಿಯಾಗಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.