ADVERTISEMENT

ಬೆಂಗಳೂರು ಪರಪ್ಪನ ಅಗ್ರಹಾರ: ಎ.ಐ ತಂತ್ರಜ್ಞಾನ ಅಳವಡಿಕೆಗೆ ಚಿಂತನೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 23:50 IST
Last Updated 17 ಡಿಸೆಂಬರ್ 2025, 23:50 IST
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ 
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ    

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಕೃತಕ ಬುದ್ಧಿಮತ್ತೆ(ಎ.ಐ) ತಂತ್ರಜ್ಞಾನದ ಮೊರೆ ಹೋಗಲು ಕಾರಾಗೃಹ ಹಾಗೂ ಸುಧಾರಣಾ ಸೇವೆಗಳ ಇಲಾಖೆಯ ಚಿಂತನೆ ನಡೆಸಿದೆ.

'ಜೈಲಿಗೆ ಹೊರಭಾಗದಿಂದ ನಿಷೇಧಿತ ವಸ್ತುಗಳು ಬರುತ್ತಿವೆ. ಕೆಲವೆಡೆ ತಡೆಗೋಡೆಯಿಂದ ಒಳಗೆ ವಸ್ತುಗಳನ್ನು ಎಸೆಯಲಾಗುತ್ತಿದೆ. ಜೈಲಿನ ಆವರಣದಲ್ಲಿ ಕೈದಿಗಳು ಬೇರೆ ಬ್ಯಾರಕ್‌ಗಳಿಗೆ ಹೋಗುತ್ತಿರುವುದು, ಜೈಲು ಸಿಬ್ಬಂದಿ ಕೆಲವು ಕೈದಿಗಳ ಜತೆಗೆ ಸಂಪರ್ಕ ಹೊಂದಿರುವುದನ್ನು ಪತ್ತೆ ಹಚ್ಚಲು ತಂತ್ರಜ್ಞಾನ ಅಳವಡಿಸಲು ಚಿಂತನೆ ನಡೆಸಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ.

‘ಅಕ್ರಮಕ್ಕೆ ತಡೆಗಟ್ಟಲು ತಂತ್ರಜ್ಞಾನ ಅಳವಡಿಸುವ ಸಂಬಂಧ ಅಧಿಕಾರಿಗಳ ಜತೆಗೆ ಸಭೆ ನಡೆಸಿದ್ದೇನೆ. ಪ್ರಾಯೋಗಿಕವಾಗಿ ತಂತ್ರಜ್ಞಾನ ಅಳವಡಿಕೆ ಮಾಡಲಾಗುವುದು. ಅದರ ಸಾಧಕ-ಬಾಧಕಗಳ ನೋಡಿಕೊಂಡು ಮುಂದಿನ ತೀರ್ಮಾನ ಮಾಡಲಾಗುವುದು’ ಎಂದು ಡಿಜಿಪಿ ಅಲೋಕ್‌ ಕುಮಾರ್ ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.