ADVERTISEMENT

ಬೆಂಗಳೂರು: 12 ಸಾವಿರ ಪಿಒಪಿ ಮೂರ್ತಿಗಳ ವಿಸರ್ಜನೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2022, 21:41 IST
Last Updated 1 ಸೆಪ್ಟೆಂಬರ್ 2022, 21:41 IST
ಬೆಂಗಳೂರು ನಗರದ ಸ್ಯಾಂಕಿ ಕೆರೆಯಲ್ಲಿ ಬುಧವಾರ ಬಿಬಿಎಂಪಿ ವ್ಯವಸ್ಥೆ ಮಾಡಿದ್ದ ಜಾಗದಲ್ಲಿ ಸಾರ್ವಜನಿಕರು ನೀಡಿದ ಗಣೇಶ ವಿಗ್ರಹಗಳನ್ನು ಬಿಬಿಎಂಪಿ ನೌಕರರು ವಿಸರ್ಜಿಸಿದರು - –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್ ಪಿ.ಎಸ್.
ಬೆಂಗಳೂರು ನಗರದ ಸ್ಯಾಂಕಿ ಕೆರೆಯಲ್ಲಿ ಬುಧವಾರ ಬಿಬಿಎಂಪಿ ವ್ಯವಸ್ಥೆ ಮಾಡಿದ್ದ ಜಾಗದಲ್ಲಿ ಸಾರ್ವಜನಿಕರು ನೀಡಿದ ಗಣೇಶ ವಿಗ್ರಹಗಳನ್ನು ಬಿಬಿಎಂಪಿ ನೌಕರರು ವಿಸರ್ಜಿಸಿದರು - –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್ ಪಿ.ಎಸ್.   

ಬೆಂಗಳೂರು: ನಗರದಲ್ಲಿ ಬುಧವಾರ ಒಂದೇ ದಿನ 12 ಸಾವಿರಕ್ಕೂ ಹೆಚ್ಚು ಪಿಒಪಿಮೂರ್ತಿಗಳು ವಿಸರ್ಜನೆಯಾಗಿವೆ.

ಆ.31ರಂದು ಸಂಚಾರಿ/ ಮೊಬೈಲ್ ಟ್ಯಾಂಕರ್ ಹಾಗೂ ಕಲ್ಯಾಣಿ/ ಹೊಂಡಗಳಲ್ಲಿ ಒಟ್ಟು 1,59,980 ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಅತಿ ಹೆಚ್ಚು ಮಣ್ಣಿನ ಮೂರ್ತಿಗಳು (68,521) ದಕ್ಷಿಣ ವಲಯದಲ್ಲಿ ವಿಸರ್ಜನೆಯಾಗಿದ್ದು, ಇದೇ ವಲಯದಲ್ಲಿ ಅತಿ ಹೆಚ್ಚು ಪಿಒಪಿ ಮೂರ್ತಿಗಳೂ (11,402) ವಿಸರ್ಜನೆಯಾಗಿವೆ.

ನಂತರದ ಸ್ಥಾನದಲ್ಲಿ ಪಶ್ಚಿಮ ವಲಯ (306) ಇದೆ. ಆರ್‌.ಆರ್‌. ನಗರ– 152, ಬೊಮ್ಮನಹಳ್ಳಿ– 131, ಯಲಹಂಕ– 73,ದಾಸರಹಳ್ಳಿ ವಲಯದಲ್ಲಿ 22 ಪಿಒಪಿ ಮೂರ್ತಿಗಳು ವಿಸರ್ಜನೆಯಾಗಿವೆ. ಪೂರ್ವ ಹಾಗೂ ಮಹದೇವಪುರ ವಲಯಲದಲ್ಲಿ ಪಿಒಪಿ ಮೂರ್ತಿಗಳು ವಿಸರ್ಜನೆಯಾಗಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.