ADVERTISEMENT

ಬೆಂಗಳೂರು: ಅಕ್ಟೋಬರ್ 3ರಿಂದ ಬಿಡಿಎ ಕ್ರಯಪತ್ರ ಮೇಳ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 23:30 IST
Last Updated 6 ಸೆಪ್ಟೆಂಬರ್ 2025, 23:30 IST
ಬಿಡಿಎ
ಬಿಡಿಎ   

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವತಿಯಿಂದ ನಿರ್ಮಿಸಿರುವ 1,2 ಹಾಗೂ 3 ಬಿ.ಎಚ್.ಕೆ. ಫ್ಲ್ಯಾಟ್‌ ಮತ್ತು ವಿಲ್ಲಾ ಕ್ರಯಪತ್ರದ ಮೇಳವನ್ನು ಅಕ್ಟೋಬರ್ 3ರಿಂದ 16ರವರೆಗೆ ಆಯೋಜಿಸಲಾಗಿದೆ.

ಸುಮಾರು 400 ಫ್ಲ್ಯಾಟ್‌ಗಳಿಗೆ ಕ್ರಯಪತ್ರ ನೋಂದಣಿ ಬಾಕಿ ಇದೆ. ಪ್ರಾಧಿಕಾರ ಆಯೋಜಿಸಿದ್ದ ಮೇಳ, ಆನ್ ಲೈನ್ ಮತ್ತು ಆಫ್ ಲೈನ್ ಮೂಲಕ ಫ್ಲ್ಯಾಟ್‌ಗಳನ್ನು ಖರೀದಿಸಿ, ಹಂಚಿಕೆ ಪತ್ರ ಪಡೆದಿರುವ ಖರೀದಿದಾರರು ಸೆಪ್ಟೆಂಬರ್ 30ರೊಳಗೆ ತಮ್ಮ ಫ್ಲ್ಯಾಟ್, ವಿಲ್ಲಾಗಳಿಗೆ ಸಂಬಂಧಿಸಿದಂತೆ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್‌, ಸ್ವಯಂ ದೃಢೀಕರಣ, ಬ್ಯಾಂಕ್ ಎನ್‌ಒಸಿ, ಪಾಸ್‌ಪೋರ್ಟ್‌ ಚಿತ್ರ ಹಾಗೂ ಹಣ ಪಾವತಿಸಿರುವ ದಾಖಲೆಗಳನ್ನು ಪ್ರಾಧಿಕಾರಕ್ಕೆ ಸಲ್ಲಿಸಬೇಕು. ಮೇಳವನ್ನು ಪ್ರಾಧಿಕಾರದ ಕೇಂದ್ರ ಕಚೇರಿಯಲ್ಲಿ ಕ್ರಯಪತ್ರ ನೋಂದಾಯಿಸಿ ಕೊಡಲಾಗುವುದು ಎಂದು ಬಿಡಿಎ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT