ಬೆಂಗಳೂರು: ತೋಟಗಾರಿಕಾ ಇಲಾಖೆಯಲ್ಲಿ ವೃತ್ತಿಪರ ಪದವಿ ಅರ್ಹತೆ ಪರಿಗಣಿಸಬೇಕು ಹಾಗೂ ತೋಟಗಾರಿಕಾ ಸಹಾಯಕರಿಗೆ ಸಹಾಯಕ ತೋಟಗಾರಿಕಾ ಅಧಿಕಾರಿಗಳಾಗಿ(ಎಎಚ್ಒ) ಬಡ್ತಿ ನೀಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಬೆಂಗಳೂರು ತೋಟಗಾರಿಕೆ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
‘ರಾಜ್ಯದಲ್ಲಿ 11 ತೋಟಗಾರಿಕೆ ಕಾಲೇಜುಗಳಿದ್ದು, 4 ವರ್ಷಗಳ ವೃತ್ತಿಪರ ಪದವಿ ಮೂಲಕ ತರಬೇತಿ ನೀಡುತ್ತಿವೆ. ಎಎಚ್‌ಒ ಹುದ್ದೆಗೆ ವಿಶೇಷ ಜ್ಞಾನ ಮತ್ತು ತರಬೇತಿ ಹೊಂದಿದ್ದ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಬೇಕು. ಅರ್ಹತೆ ಕಡೆಗಣಿಸುವುದರಿಂದ ಈ ಪದವಿಯ ಪ್ರಾಮುಖ್ಯತೆ ಕಡಿಮೆ ಆಗುತ್ತದೆ’ ಎಂದು ವಿದ್ಯಾರ್ಥಿಗಳು ಹೇಳಿದರು.
ಬೇಡಿಕೆ ಈಡೇರಿಸಲು ಆಗ್ರಹಿಸಿ ಕಾಲೇಜಿನ ಡೀನ್ ಅವರಿಗೆ ಮನವಿ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.