ಮೆಟ್ರೊ ಕಾಮಗಾರಿ
–ಪ್ರಜಾವಾಣಿ ಚಿತ್ರ: ರಂಜು ಪಿ.
ಬೆಂಗಳೂರು: ನಮ್ಮ ಮೆಟ್ರೊ 3ನೇ ಹಂತದ (ಕಿತ್ತಳೆ ಮಾರ್ಗ) ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಂಡಿದ್ದು, ಕಾರಿಡಾರ್ 1ಕ್ಕೆ ಸಂಬಂಧಪಟ್ಟ ಪ್ರಕ್ರಿಯೆ ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಇದರ ಸಾಮಾಜಿಕ ಪರಿಣಾಮಗಳ ಬಗ್ಗೆ ಬಾಧಿತ ಪಾಲುದಾರರೊಂದಿಗೆ ಬಿಎಂಆರ್‌ಸಿಎಲ್ ಅಧಿಕಾರಿಗಳು ಸಮಾಲೋಚನಾ ಸಭೆಗಳನ್ನು ಆರಂಭಿಸಿದ್ದಾರೆ.
ಕೆಂಪಾಪುರ–ಜೆ.ಪಿ.ನಗರ 4ನೇ ಹಂತ ಮೊದಲ ಕಾರಿಡಾರ್ ಆಗಿದ್ದು, ಹೊಸಹಳ್ಳಿ–ಕಡಬಗೆರೆ ಎರಡನೇ ಕಾರಿಡಾರ್ ಆಗಿದೆ. ಒಂದನೇ ಕಾರಿಡಾರ್ ಮೂರು ಪ್ಯಾಕೇಜ್‌ಗಳಲ್ಲಿ ನಿರ್ಮಾಣಗೊಳ್ಳಲಿದೆ. ಎರಡನೇ ಕಾರಿಡಾರ್ ನಾಲ್ಕನೇ ಪ್ಯಾಕೇಜ್ ಆಗಿದೆ. ಇವುಗಳಿಗೆ ಸಂಬಂಧಿಸಿದಂತೆ ಮೊದಲು ತಯಾರಿಸಿದ್ದ ವಿಸ್ತೃತ ಯೋಜನಾ ವರದಿಯಲ್ಲಿ ಡಬಲ್ ಡೆಕರ್ ಸೇರ್ಪಡೆಗೊಂಡಿರಲಿಲ್ಲ. ಅದಕ್ಕಾಗಿ ಮರು ಸರ್ವೆ ಶುರುವಾಗಿತ್ತು.
ಮೊದಲ ಪ್ಯಾಕೇಜ್ ಜೆ.ಪಿ.ನಗರ 4ನೇ ಹಂತದಿಂದ ಮೈಸೂರು ರಸ್ತೆಯ ಸರ್ವೆ ಮುಗಿಸಿ ಅಂತಿಮ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಕಂಠೀರವ ಸ್ಟೇಡಿಯಂನಿಂದ ಕೆಂಪಾಪುರದವರೆಗಿನ 3ನೇ ಪ್ಯಾಕೇಜ್‌ನಲ್ಲಿ 100 ಆಸ್ತಿಗಳನ್ನು ಗುರುತಿಸಲಾಗಿದೆ. ಮೈಸೂರು ರಸ್ತೆ–ಕಂಠೀರವ ಸ್ಟೇಡಿಯಂವರೆಗಿನ ಎರಡನೇ ಪ್ಯಾಕೇಜ್‌ನ ಸರ್ವೆ ನಡೆಯುತ್ತಿದೆ. ಈ ಎಲ್ಲ ಕಾರ್ಯಗಳು ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿವೆ ಎಂದು 3ನೇ ಹಂತದ 1ನೇ ಕಾರಿಡಾರ್‌ನ ಭೂಸ್ವಾಧೀನ ವಿಭಾಗದ ಪ್ರಧಾನ ವ್ಯವಸ್ಥಾಪಕಿ ಪೂರ್ಣಿಮಾ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.
ಕಾರಿಡಾರ್–2ಕ್ಕೆ ಸಂಬಂಧಿಸಿದಂತೆ ಸರ್ವೆ ನಡೆಯುತ್ತಿದ್ದು, ಭೂಸ್ವಾಧೀನ ಪ್ರಕ್ರಿಯೆ 8 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೆಂಪಾಪುರ–ಜೆ.ಪಿ.ನಗರ 4ನೇ ಹಂತ |
---|
ಕೆಂಪಾಪುರ |
ಹೆಬ್ಬಾಳ ರೈಲು ನಿಲ್ದಾಣ |
ನಾಗಶೆಟ್ಟಿಹಳ್ಳಿ |
ಬಿಇಎಲ್ ಸರ್ಕಲ್ |
ಮುತ್ಯಾಲನಗರ |
ಪೀಣ್ಯ |
ಕಂಠೀರವನಗರ |
ಸ್ವಾತಂತ್ರ್ಯ ಯೋಧರ ಕಾಲೊನಿ |
ಚಾಡೇಶ್ವರಿನಗರ |
ನಾಗರಬಾವಿ ಬಿಡಿಎ |
ಪಾಪರೆಡ್ಡಿಪಾಳ್ಯ |
ವಿನಾಯಕ ಲೇಔಟ್ |
ನಾಗರಬಾವಿ ವೃತ್ತ |
ಮೈಸೂರು ರಸ್ತೆ |
ದ್ವಾರಕಾನಗರ |
ಹೊಸಹಳ್ಳಿ–ಕಡಬಗೆರೆ ಎರಡನೇ ಕಾರಿಡಾರ್ |
ಹೊಸಹಳ್ಳಿ |
ಕಾಮಾಕ್ಷಿಪಾಳ್ಯ |
ಕೆ.ಎಚ್.ಬಿ.ಕಾಲೊನಿ |
ಸುಮನಹಳ್ಳಿ ಕ್ರಾಸ್ |
ಸುಂಕದಕಟ್ಟೆ |
ಹೇರೋಹಳ್ಳಿ |
ಬ್ಯಾಡರಹಳ್ಳಿ |
ಕಾಮತ್ ಲೇಔಟ್ |
ಕಡಬಗೆರೆ |
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.