ADVERTISEMENT

BDA | ಅನಧಿಕೃತ ನಿರ್ಮಾಣ; ಕೆಂಗೇರಿ ಉಪನಗರ ಬಡಾವಣೆಯಲ್ಲಿ ₹50 ಕೋಟಿ ಆಸ್ತಿ ವಶ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 16:17 IST
Last Updated 29 ಆಗಸ್ಟ್ 2025, 16:17 IST
ಜೆಸಿಬಿ ಬಳಸಿ ಅನಧಿಕೃತ ಶೆಡ್‌ಗಳನ್ನು ತೆರವುಗೊಳಿಸಲಾಯಿತು. 
ಜೆಸಿಬಿ ಬಳಸಿ ಅನಧಿಕೃತ ಶೆಡ್‌ಗಳನ್ನು ತೆರವುಗೊಳಿಸಲಾಯಿತು.    

ಬೆಂಗಳೂರು: ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಮುಂದುವರಿಸಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಶುಕ್ರವಾರ ಕೆಂಗೇರಿ ಉಪನಗರದಲ್ಲಿ ₹50 ಕೋಟಿ ಆಸ್ತಿ ವಶಪಡಿಸಿಕೊಂಡಿದೆ.

ಕೆಂಗೇರಿ ಉಪನಗರ ಬಡಾವಣೆಯ ನಿವೇಶನ ಸಂಖ್ಯೆ 2040, 2041, 2043, 2049, 2096, 2098, 2099, 2100, 2101, 2152, 2142, 2143, 2135, 2103/23 ಮತ್ತು 2167ರಲ್ಲಿ ಅನಧಿಕೃವಾಗಿ ನಿರ್ಮಾಣವಾಗಿದ್ದ ಗ್ಯಾರೆಜ್, ತಗಡಿನ ಶೀಟ್‌ ಮನೆಗಳು, ಅಂಗಡಿ ಮಳಿಗೆ, ಶೆಡ್ ಮತ್ತು ಕಾಂಪೌಂಡ್ ಗೋಡೆಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಿ, 3,7000 ಚದರ ಅಡಿ ವಿಸ್ತೀರ್ಣದ ಸುಮಾರು ₹50 ಕೋಟಿ ಬೆಲೆ ಬಾಳುವ ಪ್ರದೇಶವನ್ನು ವಶಪಡಿಸಿಕೊಳ್ಳಲಾಗಿದೆ.

ಈ ಜಾಗದ ಸುತ್ತಲೂ ಬೇಲಿ ಹಾಕಿ, ಎಚ್ಚರಿಕೆ ಫಲಕ ಅಳವಡಿಸಲಾಗಿದೆ. 

ADVERTISEMENT

ಪ್ರಾಧಿಕಾರದ ಕಾರ್ಯನಿರತ ಪಡೆಯ ಆರಕ್ಷಕ ಅಧೀಕ್ಷಕ, ನಾಡಪ್ರಭು ಕೆಂಪೇಗೌಡ ಬಡಾವಣೆಯ ಕಾರ್ಯಪಾಲಕ ಎಂಜಿನಿಯರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹಾಗೂ ಸ್ಥಳೀಯ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.