ಶ್ರೀರಾಮಲಕ್ಷ್ಮಣರ ಸಮೇತ ಹನುಮನ ಏಕಶಿಲಾ ವಿಗ್ರಹ
ಕೆ.ಆರ್.ಪುರ: ಅತಿ ಎತ್ತರದ (72 ಅಡಿ) ಸುಮಾರು 480 ಟನ್ ತೂಕದ ರಾಮಲಕ್ಷ್ಮಣರ ಸಮೇತ ಬೃಹತ್ ಹನುಮನ ಏಕಶಿಲಾ ಮೂರ್ತಿಯನ್ನು ಕಾಚರಕನಹಳ್ಳಿಯ ಕೋದಂಡ ರಾಮಸ್ವಾಮಿ ದೇವಾಲಯದ ಆವರಣ ದಲ್ಲಿ ಬುಧವಾರ ಪ್ರತಿಷ್ಠಾಪನೆಯಾಗಲಿದೆ.
‘ಈ ವಿಗ್ರಹ ಏಷ್ಯಾದಲ್ಲಿಯೇ ಅತಿ ಎತ್ತರದ್ದಾಗಿದ್ದು, ಆದಿಚುಂಚನಗಿರಿ ಮಠದ ನಿರ್ಮಾಲಾನಂದನಾಥ ಸ್ವಾಮೀಜಿ, ಉಡುಪಿ ಪೇಜಾವರ ಮಠದ ವಿಶ್ವತೀರ್ಥಸ್ವಾಮೀಜಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ’ ಎಂದು ಶ್ರೀರಾಮ ಚೈತನ್ಯ ವರ್ಧಿನಿ ಸಭಾ ಟ್ರಸ್ಟ್ನ ಅಧ್ಯಕ್ಷ ಎಂ.ಎನ್. ರೆಡ್ಡಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.