ADVERTISEMENT

ಬೆಂಗಳೂರಲ್ಲಿ ಅಪಘಾತಗಳ ಸಂಖ್ಯೆ ಶೇ 3.97ರಷ್ಟು ಇಳಿಕೆ

ಸಂಚಾರ ನಿಯಮ ಉಲ್ಲಂಘನೆ: ₹80.90 ಕೋಟಿ ದಂಡ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 2 ಜನವರಿ 2025, 0:30 IST
Last Updated 2 ಜನವರಿ 2025, 0:30 IST
<div class="paragraphs"><p>ಅಪಘಾತದಲ್ಲಿ ನುಜ್ಜುಗುಜ್ಜಾಗಿರುವ ಬಿಎಂಟಿಸಿ ಬಸ್</p></div>

ಅಪಘಾತದಲ್ಲಿ ನುಜ್ಜುಗುಜ್ಜಾಗಿರುವ ಬಿಎಂಟಿಸಿ ಬಸ್

   

ಬೆಂಗಳೂರು: ನಗರದಲ್ಲಿ ಸಂಭವಿಸಿದ ಅಪಘಾತಗಳ ಅಂಕಿಅಂಶಗಳ ಪಟ್ಟಿಯನ್ನು ನಗರ ಸಂಚಾರ ವಿಭಾಗದ ಪೊಲೀಸರು ಬಿಡುಗಡೆ ಮಾಡಿದ್ದಾರೆ.

2023ಕ್ಕೆ ಹೋಲಿಸಿದರೆ 2024ರಲ್ಲಿ ಸಂಭವಿಸಿದ ಅಪಘಾತಗಳ ಸಂಖ್ಯೆಯಲ್ಲಿ ಒಟ್ಟಾರೆ ಶೇ 3.97ರಷ್ಟು ಇಳಿಕೆಯಾಗಿದೆ.

ADVERTISEMENT

ಗಂಭೀರ ಅಪಘಾತಗಳ ಪ್ರಮಾಣವು ಶೇ 1.26ರಷ್ಟು ಇಳಿಕೆ ಕಂಡಿದೆ. ಈ ಅಪಘಾತಗಳಿಂದ ಉಂಟಾಗುವ ಸಾವುಗಳ ಪ್ರಮಾಣ ಶೇ 1.90ರಷ್ಟು ಇಳಿಕೆಯಾಗಿದೆ. ಗಂಭೀರವಲ್ಲದ ಅಪಘಾತಗಳ ಪ್ರಮಾಣವು ಶೇ 4.57ರಷ್ಟು ಇಳಿಕೆ ಕಂಡಿದೆ.

2024ರಲ್ಲಿ ಸ್ವಯಂ ಅಪಘಾತಗಳ ಸಂಖ್ಯೆಯು ಶೇ 3.34ರಷ್ಟು ಆಗಿದ್ದು, ಕಳೆದ ಸಾಲಿಗೆ ಹೋಲಿಸಿದರೆ ಅಲ್ಪಪ್ರಮಾಣದಲ್ಲಿ ಏರಿಕೆ ಆಗಿರುವುದು ಕಂಡು ಬಂದಿದೆ.

ನಗರದಲ್ಲಿ ಪಾದಚಾರಿ ಅಪಘಾತಗಳನ್ನು ತಡೆಗಟ್ಟಲು ಅಪಘಾತ ಕಪ್ಪು ಚುಕ್ಕೆಗಳನ್ನು ಗುರುತಿಸಲು ಹಾಗೂ ದುರಸ್ತಿ ಪಡಿಸಲು ಹಲವು ಕ್ರಮ ಕೈಗೊಳ್ಳಲಾಗಿತ್ತು. ಇದರ ಫಲವಾಗಿ ಕಳೆದ ವರ್ಷ ಪಾದಚಾರಿಗಳ ಸಾವಿನ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. 2023ಕ್ಕೆ ಹೋಲಿಸಿದರೆ ಕಳೆದ ವರ್ಷ ಶೇ 23.17ರಷ್ಟು ಕಡಿಮೆಯಾಗಿದೆ.

ರಸ್ತೆ ಸುರಕ್ಷತೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಕಳೆದ ವರ್ಷ ಬೆಂಗಳೂರು ನಗರ ಸಂಚಾರ ಪೊಲೀಸ್ ವಿಭಾಗವು ತನ್ನ ಎಲ್ಲ ಪಾಲುದಾರರ ಜತೆಗೆ ನಡೆಸಿದ ಪ್ರಯತ್ನವು ಫಲ ನೀಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಚಾರ ನಿಯಮ ಉಲ್ಲಂಘಿಸಿದವರಿಂದ ಕಳೆದ ವರ್ಷ ₹80.90 ಕೋಟಿ ದಂಡ ಸಂಗ್ರಹಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.