ADVERTISEMENT

Aero India 2025 | ಬೆಂಗಳೂರಲ್ಲಿ ವಿಮಾನಗಳ ಮಹಾಕುಂಭ ಮೇಳ: ರಾಜನಾಥ ಸಿಂಗ್ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2025, 4:27 IST
Last Updated 10 ಫೆಬ್ರುವರಿ 2025, 4:27 IST
<div class="paragraphs"><p>ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು&nbsp;ಏರೊ ಇಂಡಿಯಾ ವೈಮಾನಿಕ ಪ್ರದರ್ಶನವನ್ನು ಉದ್ಘಾಟಿಸಿದರು.</p></div>

ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಏರೊ ಇಂಡಿಯಾ ವೈಮಾನಿಕ ಪ್ರದರ್ಶನವನ್ನು ಉದ್ಘಾಟಿಸಿದರು.

   

-ಪ್ರಜಾವಾಣಿ ಚಿತ್ರ/ ಬಿ.ಕೆ.ಜನಾರ್ದನ

ಬೆಂಗಳೂರು: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಅಧ್ಯಾತ್ಮದ ಮಹಾಕುಂಭ ಮೇಳ ನಡೆಯುತ್ತಿದ್ದರೆ, ಇಲ್ಲಿ ವೈಮಾನಿಕ ಮಹಾಕುಂಭ ಮೇಳ ನಡೆಯುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಬಣ್ಣಿಸಿದರು.

ADVERTISEMENT

ಏರೊ ಇಂಡಿಯಾ ವೈಮಾನಿಕ ಪ್ರದರ್ಶನವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಅಂತರಂಗದ ಆಧ್ಯಾತ್ಮ ಶಕ್ತಿ ಪ್ರದರ್ಶನ ಆ ಕುಂಭಮೇಳದಲ್ಲಿ ನಡೆಯುತ್ತಿದ್ದರೆ, ಇದು ವಾಯುನೆಲೆಯಲ್ಲಿ ನಮ್ಮ ಬಹಿರಂಗ ಶಕ್ತಿ ಪ್ರದರ್ಶನ ಎಂದು ಹೇಳಿದರು.

ಬೆಂಗಳೂರಿನ ಹೊರವಲಯದ ಯಲಹಂಕದಲ್ಲಿ ಫೆ.14ರ ವರೆಗೆ ಐದು ದಿನ ನಡೆಯಲಿರುವ ಏರೊ ಇಂಡಿಯಾ ವೈಮಾನಿಕ ಪ್ರದರ್ಶನ ಉದ್ಘಾಟನೆಗೆ ರಕ್ಷಣಾ ಸಚಿವ ರಾಜನಾಥ ಸಿಂಗ್, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಆಗಮಿಸಿದ್ದರು.

ಈ ಸಂದರ್ಭದಲ್ಲಿ ತೇಜಸ್, ಸುಖೋಯ್  ಸಹಿತ ವಿವಿಧ ಯುದ್ಧ ವಿಮಾನಗಳು ಹಾರಾಡುವ ಮೂಲಕ ಸ್ವಾಗತ ಕೋರಿದವು

ವಿಮಾನ ಹಾರಾಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.