ADVERTISEMENT

ಬುಡಕಟ್ಟು ವ್ಯವಹಾರಗಳ ಸಚಿವಾಲಯದಿಂದ ಪ್ರಾದೇಶಿಕ ಪ್ರಕ್ರಿಯೆ ಪ್ರಯೋಗಾಲಯ ಪ್ರಾರಂಭ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 18:50 IST
Last Updated 11 ಜುಲೈ 2025, 18:50 IST
ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್,  ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ಭಾಗವಹಿಸಿದ್ದರು. 
ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್,  ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ಭಾಗವಹಿಸಿದ್ದರು.    

ಬೆಂಗಳೂರು: ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಆದಿ ಕರ್ಮಯೋಗಿ ಅಭಿಯಾನದ ಅಡಿ ಮೊದಲ ಪ್ರಾದೇಶಿಕ ಪ್ರಕ್ರಿಯೆ ಪ್ರಯೋಗಾಲಯವನ್ನು (ಆರ್‌ಪಿಎಲ್) ಗುರುವಾರ ಪ್ರಾರಂಭಿಸಿತು.

ಈ ಕಾರ್ಯಕ್ರಮವು ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಉನ್ನತ ಅಧಿಕಾರಿಗಳು, ದಕ್ಷಿಣ ರಾಜ್ಯಗಳ ಹಿರಿಯ ಅಧಿಕಾರಿಗಳು ಮತ್ತು ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣದ ನಾಮನಿರ್ದೇಶಿತ ರಾಜ್ಯ ಮಾಸ್ಟರ್ ತರಬೇತುದಾರರನ್ನು (ಎಸ್ಎಂಟಿ) ಒಂದೆಡೆ ಸೇರಲು ವೇದಿಕೆ ಒದಗಿಸಿತು.  

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಮಾತನಾಡಿ, ‘ಭೂ ಹಕ್ಕುಗಳು, ಜೀವನೋಪಾಯ ಮತ್ತು ಶಿಕ್ಷಣ ಸೇರಿದಂತೆ ಮಾನವ ಅಭಿವೃದ್ಧಿ ಸೂಚಕಗಳತ್ತ ಗಮನ ಹರಿಸಬೇಕು. ಎಸ್‌ಐಆರ್‌ಡಿ ಮೈಸೂರು, ವಿಸ್ತರಣಾ ತರಬೇತಿ ಕೇಂದ್ರಗಳು ಮತ್ತು ಪಂಚಾಯತ್ ಮಟ್ಟದ ಸೌಲಭ್ಯಗಳಂತಹ ತರಬೇತಿ ಮೂಲಸೌಕರ್ಯಗಳ ಮೂಲಕ ಎಸ್‌ಎಂಟಿಗಳು ಮತ್ತು ಡಿಎಂಟಿಗಳನ್ನು ಸಬಲೀಕರಣಗೊಳಿಸಲು ರಾಜ್ಯ ಸರ್ಕಾರ ಸಂಪೂರ್ಣ ಸಾಂಸ್ಥಿಕ ಬೆಂಬಲವನ್ನು ನೀಡುತ್ತದೆ’ ಎಂದರು.

ADVERTISEMENT

ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಜುವಾಲ್ ಓರಮ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.