ADVERTISEMENT

ಬೆಂಗಳೂರು | ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಪಾದಯಾತ್ರೆ: ಹಲವರು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2025, 19:24 IST
Last Updated 20 ಮಾರ್ಚ್ 2025, 19:24 IST
   

ಬೆಂಗಳೂರು: ಪರಿಶಿಷ್ಟ ಜಾತಿಯ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ನಗರಕ್ಕೆ ಪಾದಯಾತ್ರೆ ಕೈಗೊಂಡಿದ್ದ ನೂರಕ್ಕೂ ಹೆಚ್ಚು ಜನರನ್ನು ಪೀಣ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನೆಲಮಂಗಲದಿಂದ ಹೊರಟ ನೂರಾರು ಜನರು ಸರ್ವಿಸ್‌ ರಸ್ತೆ ಮೂಲಕ ನಗರಕ್ಕೆ ಬರುತ್ತಿದ್ದ ವೇಳೆ ಪೊಲೀಸ್ ಸಿಬ್ಬಂದಿ ಅವರನ್ನು ವಶಕ್ಕೆ ಪಡೆದು, ಕೃಷ್ಣಚಂದ್ರ ಕನ್ವೆಷನ್ ಸಭಾಂಗಣಕ್ಕೆ ತಂದು ಬಿಟ್ಟಿದ್ದಾರೆ.

‘ದಾವಣಗೆರೆಯ ಹರಿಹರದಿಂದ ಈ ಪಾದಯಾತ್ರೆ ಆರಂಭವಾಗಿದೆ. ಗುರುವಾರ ನೆಲಮಂಗಲದಿಂದ ಹೊರಟ ಪಾದಯಾತ್ರೆಗೆ ಮಾರ್ಗಮಧ್ಯೆ ಪೊಲೀಸರು ತಡೆವೊಡ್ಡಿದ್ದಾರೆ. ಯಾರಿಗೂ ತೊಂದರೆ ಮಾಡಿರಲಿಲ್ಲ. ಆದರೂ ಬಲವಂತವಾಗಿ ನಮ್ಮನ್ನು ವಶಕ್ಕೆ ಪಡೆದಿದ್ದಾರೆ. ಶುಕ್ರವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಯಲಿದೆ’ ಎಂದು ಮುಖಂಡ ಗುರುಮೂರ್ತಿ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.