ADVERTISEMENT

ಎರಡು ತಲೆ ಹಾವು ಮಾರಾಟ ಯತ್ನ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2020, 5:51 IST
Last Updated 23 ಏಪ್ರಿಲ್ 2020, 5:51 IST
ಹಾವು ಮಾರಾಟ ಮಾಡುತ್ತಿದ್ದ ಮಹಮ್ಮದ್ ರಿಜ್ವಾನ್, ಅಜರ್ ಖಾನ್ ಬಂಧನ
ಹಾವು ಮಾರಾಟ ಮಾಡುತ್ತಿದ್ದ ಮಹಮ್ಮದ್ ರಿಜ್ವಾನ್, ಅಜರ್ ಖಾನ್ ಬಂಧನ   

ಬೆಂಗಳೂರು: ಲಾಕ್ ಡೌನ್ ಕಾರಣಕ್ಕೆ ಬಿಗಿ ಬಂದೋಬಸ್ತ್ ಇದ್ದರೂ ಸಾರಕ್ಕಿ ವೃತ್ತದ ಬಳಿ ಬಸಪ್ಪ ಗಾರ್ಡನ್ ಸಮೀಪ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಎರಡು ತಲೆ ಹಾವು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಕೇಂದ್ರ ಅಪರಾಧ ದಳ (ಸಿಸಿಬಿ) ಪೊಲೀಸರು ಬಂಧಿದ್ದಾರೆ.

ನ್ಯೂ ಗುರುಪ್ಪನಪಾಳ್ಯದ ನಿವಾಸಿಗಳಾದ ಮಹಮ್ಮದ್‌ ರಿಜ್ವಾನ್ (26) ಮತ್ತು ಅಜರ್ ಖಾನ್ (27) ಬಂಧಿತರು. ಬಂಧಿತರಿಂದ ಒಂದು ಎರಡು ತಲೆ ಹಾವು, ಬೈಕ್, ಮೂರು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳ ಪೈಕಿ, ಮಹಮ್ಮದ್ ರಿಜ್ವಾನ್, ಡೆನ್ಜೊ ಕಂಪನಿಯ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ತನ್ನ ಕಂಪನಿಯ ಬ್ಯಾಗಿನಲ್ಲಿ ಹಾವು ಇಟ್ಟುಕೊಂಡು ಮಾರಾಟಕ್ಕೆ ಯತ್ನಿಸುತ್ತಿದ್ದ. ಅಗತ್ಯ ವಸ್ತುಗಳ ಸಾಗಣೆಗೆ ಪಡೆದ ಪಾಸ್ ಅನ್ನು ಕೂಡಾ ಆರೋಪಿಗಳು ದುರ್ಬಳಕೆ ಮಾಡಿದ್ದರು.

ADVERTISEMENT

'ಅಂತರರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ಈ ಹಾವಿಗೆ 50 ಲಕ್ಷ ದಿಂದ 60 ಲಕ್ಷ ರೂಪಾಯಿ ಬೆಲೆ ಇದೆ. ಆರೋಪಿಗಳ ವಿರುದ್ಧ ಕಗ್ಗಲಿಪುರ ಅರಣ್ಯ ವಲಯದ ಅಧಿಕಾರಿಗಳಿಗೆ ದೂರು ನೀಡಲಾಗಿದ್ದು ಪ್ರಕರಣ ದಾಖಲಾಗಿದೆ. ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಲಾಗಿತ್ತು' ಎಂದು ಸಿಸಿಬಿ ಜಂಟಿ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.