
ಲಾಲ್‌ಬಾಗ್‌ನಲ್ಲಿ ನಡೆದ ತೇಜಸ್ವಿ ವಿಸ್ಮಯ ವಿಷಯಾಧಾರಿತ ಫಲಪುಷ್ಪ ಪ್ರದರ್ಶನದಲ್ಲಿ ಕಾರ್ಪೊರೇಟ್ ತೋಟಗಾರಿಕೆ ವಿಭಾಗದಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ತಂಡದವರು ಪ್ರಥಮ ಬಹುಮಾನ ಪಡೆದರು.
-ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಗಣರಾಜ್ಯೋತ್ಸವ ಅಂಗವಾಗಿ ಲಾಲ್‌ಬಾಗ್ ಉದ್ಯಾನದಲ್ಲಿ ಪೂರ್ಣಚಂದ್ರ ತೇಜಸ್ವಿ ಬದುಕು ಬರಹ ಆಧರಿತ ಫಲಪುಷ್ಪ ಪ್ರದರ್ಶನ ಪರಿಸರ ಜಾಗೃತಿ ಮೂಡಿಸುವ ಉತ್ತಮ ಮಾದರಿ’ ಎಂದು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ್ ಕೆಂಜಿಗೆ ಹೇಳಿದರು.
ತೋಟಗಾರಿಕೆ ಇಲಾಖೆ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಜಂಟಿಯಾಗಿ ಆಯೋಜಿಸಿರುವ ತೇಜಸ್ವಿ ವಿಸ್ಮಯ ಫಲಪುಷ್ಪ ಪ್ರದರ್ಶನ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
‘ನಿರೀಕ್ಷೆ ಮೀರಿ ತೇಜಸ್ವಿ ಕುರಿತಾದ ಚಟುವಟಿಕೆಗಳಿಗೆ ಒತ್ತು ನೀಡಲಾಗಿದೆ. ಗ್ಯಾಲರಿ, ಕ್ಯಾರಿಕೇಚರ್, ಛಾಯಾಚಿತ್ರ, ಪುಸ್ತಕಗಳು ಗಮನ ಸೆಳೆಯುತ್ತಿವೆ. ಇದು ತೇಜಸ್ವಿ ಅವರಿಗೆ ಸಲ್ಲಿಸಿರುವ ಪುಷ್ಪ ಗೌರವ’ ಎಂದು ಬಣ್ಣಿಸಿದರು.
ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಂ. ಜಗದೀಶ್, ಉಪನಿರ್ದೇಶಕ ಬಾಲಕೃಷ್ಣ ಉಪಸ್ಥಿತರಿದ್ದರು.
ಗಾಜಿನಮನೆಯ ಪ್ರದರ್ಶನ, ತೋಟಗಳ ಸ್ಪರ್ಧೆ, ಇಕೆಬಾನ, ಪುಷ್ಪಭಾರತಿ, ಪುಷ್ಪ ರಂಗೋಲಿ, ತರಕಾರಿ ಕೆತ್ತನೆ, ಡಚ್ ಹೂವಿನ ಜೋಡಣೆ, ಥಾಯ್ ಆರ್ಟ್, ಜಾನೂ, ಬೊನ್ಸಾಯ್ ಗಿಡಗಳ ಪ್ರದರ್ಶನ ಮತ್ತು ಚಿತ್ರಕಲಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಬಹುಮಾನ ವಿಜೇತರು
ಮನೆತೋಟ:
ಸಣ್ಣ: ಝೈದ್ ಸಾದಿಕ್, ಹಲಸೂರು ರಸ್ತೆ (ಪ್ರಥಮ), ಪ್ರಭಾ ಚಿತ್ತರಂಜನ್, ಬಿಟಿಎಂ ಲೇಔಟ್ (ದ್ವಿತೀಯ), ಎಸ್.ಸುಪ್ರಿಯಾ, ಅಬ್ಬಿಗೆರೆ (ತೃತೀಯ)
ದೊಡ್ಡ: ಎ.ಪಿ.ವಿಜಯನ್, ಆರ್‌ಎಂವಿ ಬಡಾವಣೆ (ಪ್ರಥಮ), ಲುಬ್ನಾ ಹಸ್ಸನ್, ಸರ್ಜಾಪುರ ರಸ್ತೆ (ದ್ವಿತೀಯ), ಅರವಿಂದ್ , ಬಸವನಗುಡಿ (ತೃತಿಯ)
ಅಪಾರ್ಟ್‌ಮೆಂಟ್:
ಸಣ್ಣ: ಪ್ರೆಸ್ಟೀಜ್ ಪೈನ್‌ವುಡ್ (ಪ್ರಥಮ), ಪ್ರೆಸ್ಟೀಜ್ ಫೋರ್ ಸೀಸನ್ಸ್ (ದ್ವಿತೀಯ), ಪ್ರೆಸ್ಟೀಜ್ ಪಾರ್ಕ್‌ವ್ಯೂ (ತೃತೀಯ)
ಮಧ್ಯಮ: ಪ್ರೆಸ್ಟೀಜ್ ಫೇರ್‌ಫೀಲ್ಡ್ (ಪ್ರಥಮ), ಪ್ರೆಸ್ಟೀಜ್ ಕಿಂಗ್‌ಫಿಷರ್ (ದ್ವಿತೀಯ), ಪ್ರೆಸ್ಟೀಜ್ ಏವ್ಲಾನ್ ಪಾರ್ಕ್ (ತೃತೀಯ),
ದೊಡ್ಡ: ಪ್ರೆಸ್ಟೀಜ್ ವಾಟರ್ ಫೋರ್ಡ್( ಪ್ರಥಮ), ಪ್ರೆಸ್ಟೀಜ್ ಸಾಂಗ್ ಆಫ್ ಸೌಥ್( ದ್ವಿತೀಯ), ಪ್ರೆಸ್ಟೀಜ್ ಫಿನ್ಸ್‌ಬರಿ ಪಾರ್ಕ್( ತೃತೀಯ)
ಕಾರ್ಪೊರೇಟ್:
ಸಣ್ಣ: ಕಾರ್ಲ್ ಝೀಸ್ ಇಂಡಿಯಾ, ಬೊಮ್ಮಸಂದ್ರ (ಪ್ರಥಮ), ಸ್ಟಾರಗ್ ಇಂಡಿಯಾ, ಏರೋಸ್ಪೇಸ್ ಪಾರ್ಕ್ (ದ್ವಿತೀಯ), ಅರ್ಲಿಗಾ ಎಕೋವುಡ್, ದೇವರಬೀಸನಹಳ್ಳಿ (ತೃತೀಯ)
ಮಧ್ಯಮ: ಪ್ರೆಸ್ಟೀಜ್ ಟೆಕ್ ಫೆಸಿಫಿಕ್ ಪಾರ್ಕ್ (ಪ್ರಥಮ), ಅರ್ಲಿಗಾ ನೆಕ್ಸ್ಟ್, ಮಹದೇವಪುರ (ದ್ವಿತೀಯ), ಪ್ರೆಸ್ಟೀಜ್ ಮಿನ್ಸ್ಕ್ ಸ್ಕ್ವೇರ್ (ತೃತೀಯ)
ದೊಡ್ಡ: ಬಿಇಎಎಲ್ ದೇವನಹಳ್ಳಿ (ಪ್ರಥಮ), ಇನ್ಫೋಸಿಸ್ ಹೊಸೂರು ರಸ್ತೆ (ದ್ವಿತೀಯ), ಪ್ರೆಸ್ಟೀಜ್ ಲೇಕ್ ಶೇರ್ ಡ್ರೈವ್( ತೃತೀಯ)
ಕೈಗಾರಿಕೆ: ತ್ರಿವೇಣಿ ಟರ್ಬೈನ್, ಪೀಣ್ಯ (ಪ್ರಥಮ), ಎಲ್‌ಎಂ ವಿಂಡ್ ಪವರ್ ಬ್ಲೇಡ್ಸ್, ದಾಬಸ್‌ಪೇಟೆ (ದ್ವಿತೀಯ), ಮಾರುತಿ ಸುಜುಕಿ, ಯೆಡಹಳ್ಳಿ (ತೃತೀಯ)
ಶೈಕ್ಷಣಿಕ: ಐಐಎಂಬಿ ಬನ್ನೇರಘಟ್ಟ ರಸ್ತೆ (ಪ್ರಥಮ), ಬಿಎಂಎಸ್ ಕಾನೂನು ಕಾಲೇಜು (ದ್ವಿತೀಯ), ಗ್ರೀನ್‌ವುಡ್ ಅಂತರರಾಷ್ಟ್ರೀಯ ಶಾಲೆ, ಹೆಗ್ಗೊಂಡನಹಳ್ಳಿ (ತೃತೀಯ)
ಕ್ಲಬ್: ಪ್ರೆಸ್ಟೀಜ್ ಗಾಲ್ಫ್‌ಶೈರ್ (ಪ್ರಥಮ), ಬೆಂಗಳೂರು ಕ್ಲಬ್ (ದ್ವಿತೀಯ), ಸೆಂಚುರಿ ಈಡನ್ (ತೃತೀಯ)
ರಾಜ್ಯ ಸರ್ಕಾರ:
ಮಧ್ಯಮ: ಕೆಎಂಎಫ್ (ಪ್ರಥಮ), ಡಿಜಿಪಿ ಗೃಹರಕ್ಷಕ ದಳ (ದ್ವಿತೀಯ), ಜಲಮಂಡಳಿ, ಉತ್ತರಹಳ್ಳಿ (ತೃತೀಯ)
ದೊಡ್ಡ: ಲೋಕಭವನ (ಪ್ರಥಮ), ವಿಧಾನಸೌಧ (ದ್ವಿತೀಯ), ಕಬ್ಬನ್‌ಪಾರ್ಕ್ (ತೃತೀಯ)
ಕೇಂದ್ರ ಸರ್ಕಾರ: ಯುಆರ್ ರಾವ್ ಉಪಗ್ರಹ ಕೇಂದ್ರ (ಪ್ರಥಮ), ಪಿಸಿಐ (ದ್ವಿತೀಯ), ಎಲ್‌ಆರ್‌ಡಿಇ, ರಾಮನ್‌ನಗರ (ತೃತೀಯ)
ವಿದ್ಯಾರ್ಥಿಗಳ ವಿಭಾಗ: ಪೂರ್ಣಚಂದ್ರ ತೇಜಸ್ವಿ ಅವರ ಯಾವುದಾದರೂ ಕಥೆ ಲೇಖನ ಪಾತ್ರ ಇಲ್ಲವೇ ಸನ್ನಿವೇಶ ಆಧರಿತ ಚಿತ್ರಕಲಾ ಸ್ಪರ್ಧೆ/ 8ನೇ ತರಗತಿ: ಎಂ.ನಿಶಾ( ಪ್ರಥಮ) ಎಂ.ಎಸ್.ಸಿಂಧು( ದ್ವಿತೀಯ) ಗಾಯತ್ರಿ ಆಂಗ್ಲ ಮಾಧ್ಯಮ ಶಾಲೆ ಕೆ.ಪ್ರೀತಿ ಕೆಪಿಎಸ್ ನ್ಯೂ ವಾಣಿ ವಿಲಾಸ ಶಾಲೆ( ತೃತೀಯ) 9ನೇ ತರಗತಿ: ತಸ್ಲೀಂ ಆರೀಫ್ ರೆಹಮಾನಿಯ ಶಾಲೆ( ಪ್ರಥಮ) ಕನ್ನಿಕಾ ಮೂರ್ತಿ ಎಸ್ ಟಿ ಮೈಕಲ್ ಶಾಲೆ( ದ್ವಿತೀಯ) ಮೋನಿಷ್ ಸೆಂಟ್ ಥೆರೆಸಾ ಬಾಲಕಿಯರ ಪ್ರೌಢಶಾಲೆ( ತೃತೀಯ) 10ನೇ ತರಗತಿ: ಕೆ.ವರಲಕ್ಷ್ಮಿ ಗಾಯತ್ರಿ ಆಂಗ್ಲ ಮಾಧ್ಯಮ ಶಾಲೆ( ಪ್ರಥಮ) ಸಿ.ಶುಕ್ರ ತೇಜ್ ಸೆಂಟ್ ಲಾರೆನ್ಸ್ ಪ್ರೌಢಶಾಲೆ( ದ್ವಿತೀಯ) ಕೆ.ಪ್ರೀತಮ್ ಕೆಪಿಎಸ್ ಸಾರಕ್ಕಿ ಪ್ರೌಢಶಾಲೆ( ತೃತೀಯ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.