ಬೀದರ್: ನಗರದ ಗುರುನಾನಕ ದೇವ್ ಪಬ್ಲಿಕ್ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ಪೂರ್ವಿ ಅವರು ಜೂನಿಯರ್ ಮಿಸ್ ಇಂಡಿಯಾ–2025ರ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಗೆ ಆಯ್ಕೆಯಾಗಿದ್ದಾರೆ.
ನವದೆಹಲಿ, ಮುಂಬೈ, ಹೈದರಾಬಾದ್, ಚೆನ್ನೈ, ಬೆಂಗಳೂರು ಸೇರಿದಂತೆ ದೇಶದಾದ್ಯಂತ 10 ಪ್ರಮುಖ ಮಹಾನಗರಗಳಲ್ಲಿ ಆಡಿಷನ್‌ಗಳಲ್ಲಿ ಭಾಗವಹಿಸಿದ್ದಾರೆ. 11ರಿಂದ 13 ವರ್ಷ ವಯಸ್ಸಿನ ಸ್ಪರ್ಧಿಗಳಲ್ಲಿ ಹೈದರಾಬಾದ್‌ನಲ್ಲಿ ನಡೆದ ಆಡಿಷನ್‌ನಲ್ಲಿ ಪೂರ್ವಿ ಆಯ್ಕೆಯಾಗಿ ಅಂತಿಮ ಸುತ್ತು ಪ್ರವೇಶಿಸಿದ್ದಾರೆ. ಇದು ಸಂಸ್ಥೆಗೆ ಹೆಮ್ಮೆಯ ಸಂಗತಿ ಎಂದು ಶಾಲೆಯ ಅಧ್ಯಕ್ಷೆ ರೇಷ್ಮಾ ಕೌರ್ ತಿಳಿಸಿದ್ದಾರೆ.
ಶನಿವಾರ ನಗರದ ಶಾಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರೇಷ್ಮಾ ಕೌರ್ ಅವರು ಪೂರ್ವಿ ಅವರನ್ನು ಅಭಿನಂದಿಸಿದರು. ‘ಪೂರ್ವಿ ಅವರ ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪದಿಂದ ಇದು ಸಾಧ್ಯವಾಗಿದೆ. ಯುವ ಕನಸುಗಾರರಿಗೆ ಸ್ಫೂರ್ತಿ’ ಎಂದು ವರ್ಣಿಸಿದ್ದಾರೆ.
ಪ್ರಾಂಶುಪಾಲೆ ಶರ್ಲಿ ಶೀಬಾ, ಪೂರ್ವಿ ಪೋಷಕರಾದ ಸಂಜಯಕುಮಾರ ಬಿರಾದಾರ, ಹೇಮಾ, ಅಕ್ಕಂದಿರಾದ ವೈಭವಿ ಮತ್ತು ವೈಷ್ಣವಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.