
ಪ್ರಜಾವಾಣಿ ವಾರ್ತೆ
ಶಿಡ್ಲಘಟ್ಟ: ಈ ಜಗತ್ತಿನಲ್ಲಿ ಎಲ್ಲ ವಿದ್ಯೆ, ಕಸುಬುಗಳಿಗಿಂತಲೂ ಕೃಷಿ ವಿದ್ಯೆ, ಕೃಷಿ ಕೆಲಸ ಶ್ರೇಷ್ಠವಾಗಿದೆ. ವಿದ್ಯಾರ್ಥಿಗಳು ಎಲ್ಲ ಭಾಷೆ, ವಿಷಯಗಳನ್ನು ಕಲಿಯುವ ಜತೆ ಜತೆಗೆ ಕೃಷಿಯನ್ನು ಕೂಡ ಕಲಿಯಬೇಕಿದೆ ಎಂದು ವೈದ್ಯ ಡಾ.ಸತ್ಯನಾರಾಯಣರಾವ್ ಹೇಳಿದರು.
ಶಿಡ್ಲಘಟ್ಟ-ಚಿಕ್ಕಬಳ್ಳಾಪುರ ಮಾರ್ಗದ ಹಂಡಿಗನಾಳದಲ್ಲಿ ಶನಿವಾರ ನಡೆದ ಸಿಟಿಜನ್ ಶಾಲೆಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಾಲೆಯ ಶೈಕ್ಷಣಿಕ ಸಾಧನೆ ಪ್ರದರ್ಶಿಸಲಾಯಿತು. ರಾಮಚಂದ್ರರೆಡ್ಡಿ, ಮುಖ್ಯಶಿಕ್ಷಕ ಎನ್.ಶಿವಣ್ಣ, ಮಂಗಳಮ್ಮ, ಶ್ರೀರಂಗರೆಡ್ಡಿ, ಅನಿಲ್ ಶೌರಿ, ಭವ್ಯ ಅನಿಲ್ ಶೌರಿ, ಅಜಯ್ ಶೇಖರ್, ಶ್ವೇತಲಕ್ಷ್ಮಿ, ಲಕ್ಷ್ಮಿದಿವ್ಯ, ಮದನಗೋಪಾಲ್, ಅಶೋಕ್, ಮಹಮದ್ ತಮೀಮ್ ಅನ್ಸಾರಿ, ಪ್ರಕಾಶ್ ಇದ್ದರು.