ADVERTISEMENT

ಶಿಡ್ಲಘಟ್ಟ: ಹೊಸ ವರ್ಷದ ಪಯಣಕ್ಕೆ ಮುನ್ನುಡಿ ಬರೆದ ಹಕ್ಕಿಗಳು

ಡಿ.ಜಿ.ಮಲ್ಲಿಕಾರ್ಜುನ
Published 1 ಜನವರಿ 2024, 7:30 IST
Last Updated 1 ಜನವರಿ 2024, 7:30 IST
ಬೂದು ಬಕ (ಗ್ರೇ ಹೆರಾನ್)ಗಳ ಗುಂಪು
ಬೂದು ಬಕ (ಗ್ರೇ ಹೆರಾನ್)ಗಳ ಗುಂಪು   

ಶಿಡ್ಲಘಟ್ಟ: ಹೊಸವರ್ಷದ ಸಂಭ್ರಮವನ್ನು ಖಗಗಳ ಕೂಗು ಮತ್ತು ಹಾರಾಟ ಶಿಡ್ಲಘಟ್ಟದಲ್ಲಿ ಇಮ್ಮಡಿಗೊಳಿಸಿವೆ. ಎಲ್ಲೆಡೆ ವಿವಿಧ ರೀತಿಯಲ್ಲಿ ಹೊಸವರ್ಷವನ್ನು ಜನರು ಆಚರಿಸುತ್ತಿದ್ದರೆ, ನಗರದ ಹೊರವಲಯದಲ್ಲಿ ವೈವಿಧ್ಯಮಯ ಪಕ್ಷಿಗಳು, ನೀಲಿ ಆಗಸದ ಹಿನ್ನೆಲೆಯಲ್ಲಿ ಅವುಗಳ ಹಾರಾಟ, ಹಕ್ಕಿಗಳನ್ನು ನೋಡಲೆಂದೇ ಬಂದವರ ಕ್ಯಮೆರಾ ಕಣ್ಣೋಟ ಹೊಸ ಸಂವತ್ಸರದ ಮುನ್ನುಡಿ ರಚಿಸುತ್ತಿವೆ.

ನಗರದ ಹೊರವಲಯದ ಅಮ್ಮನಕೆರೆ ಇದೀಗ ಬಾನಾಡಿಗಳ ತಾಣವಾಗಿದ್ದು, ಬೆಂಗಳೂರಿನಿಂದ ಹಾಗೂ ದೂರದೂರುಗಳಿಂದ ಹಕ್ಕಿ ಛಾಯಾಗ್ರಾಹಕರು ಮತ್ತು ಪಕ್ಷಿ ವೀಕ್ಷಕರು ಆಗಮಿಸುತ್ತಿದ್ದಾರೆ.

ಯೂರೋಪ್‌ನಿಂದ ವಲಸೆ ಬಂದಿರುವ ಬಿಳಿ ಕೊಕ್ಕರೆ (ವೈಟ್ ಸ್ಟಾರ್ಕ್) ಹಕ್ಕಿಗಳನ್ನು ಚಿತ್ರದಲ್ಲಿ ಸೆರೆಹಿಡಿಯಲೆಂದು ಛಾಯಾಗ್ರಾಹಕರು ಬಂದು ಹೋಗುತ್ತಿದ್ದಾರೆ.

ADVERTISEMENT

ಬಿಳಿ ಕೊಕ್ಕರೆ (ವೈಟ್ ಸ್ಟಾರ್ಕ್)ಗಳಲ್ಲದೆ, ವೂಲಿ ನೆಕ್ಡ್ ಸ್ಟಾರ್ಕ್ ಅಥವಾ ಬಿಳಿ ಕತ್ತಿನ ಕೊಕ್ಕರೆ, ಬಣ್ಣದ ಕೊಕ್ಕರೆ (ಪೇಯಿಂಟೆಡ್ ಸ್ಟಾರ್ಕ್), ಗದ್ದೆಗೊರವ (ಸ್ಯಾಂಡ್ ಪೈಪರ್). ನೀರು ಗೊರವ (ಬ್ಲಾಕ್ ವಿಂಗ್ಡ್ ಸ್ಟಿಲ್ಟ್), ಬೂದು ಬಕ (ಗ್ರೇ ಹೆರಾನ್), ಗೋವಕ್ಕಿ(ಕ್ಯಾಟಲ್ ಎಗ್ರೆಟ್), ಕೊಳದಬಕ (ಪಾಂಡ್ ಹೆರಾನ್), ಬೆಳ್ಳಕ್ಕಿಗಳು (ಲಿಟಲ್ ಎಗ್ರೆಟ್), ಗರುಡ, ಕಪ್ಪುಹದ್ದು, ಲಾರ್ಕ್ ಮುಂತಾದ ಹಕ್ಕಿಗಳನ್ನು ಕಾಣಬಹುದಾಗಿದೆ.

ಬಿಳಿ ಕೊಕ್ಕರೆ
ಬಿಳಿ ಕತ್ತಿನ ಕೊಕ್ಕರೆ
ಗದ್ದೆಗೊರವ ಹಕ್ಕಿ
ಬಣ್ಣದ ಕೊಕ್ಕರೆಗಳು
ನೀರು ಗೊರವ ಹಕ್ಕಿಗಳು
ಬಿಳಿ ಕೊಕ್ಕರೆ ಜೋಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.