
ಚಿಂತಾಮಣಿ: ನಗರದ ಹೊರವಲಯದ ಮಾಡಿಕೆರೆ ಕ್ರಾಸ್‌ನಲ್ಲಿ ಮಂಗಳವಾರ ಅನುಮಾನಾಸ್ಪವಾಗಿ ಬರುತ್ತಿದ್ದ ಕಾರನ್ನು ಡಿವೈಎಸ್ಪಿ ಮುರಳೀಧರ್ ನೇತೃತ್ವದ ಪೊಲೀಸರ ತಂಡ ತಡೆದು ಅಕ್ರಮವಾಗಿ ಮಾರಾಟಕ್ಕೆ ಕೊಂಡೊಯ್ಯುತ್ತಿದ್ದ ₹ 8 ಲಕ್ಷ ಬೆಲೆ ಬಾಳುವ 20 ಕೆ.ಜಿ ಗಾಂಜಾವನ್ನು ವಶಪಡಿಸಿಕೊಂಡಿದೆ.
ಆಂಧ್ರಪ್ರದೇಶದ ಮದನಪಲ್ಲಿ ರಸ್ತೆಯಲ್ಲಿ ಬರುತ್ತಿದ್ದ ಕ್ರಿಬಾ ಕಾರಿನಲ್ಲಿ ಮಾದಕವಸ್ತು ಸಾಗಣೆ ಆಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ದೊರೆತಿತ್ತು. ಗ್ರಾಮಾಂತರ ಠಾಣೆ ಪೊಲೀಸರು ಮಾಡಿಕೆರೆ ಕ್ರಾಸ್‌ನಲ್ಲಿ ಕಾರನ್ನು ತಡೆದು ಪರಿಶೀಲನೆ ನಡೆಸಿದಾಗ 20 ಕೆ.ಜಿ ಗಾಂಜಾ ಸೊಪ್ಪು ಪತ್ತೆಯಾಗಿದೆ. ಕಾರಿನಲ್ಲಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಓಡಿಶಾ ಲದ ಮನೋರಂಜನ್ ಮಹಲಿಕ, ರಾಕೇಶ್ ಕುಮಾರ್ ಮಹರಾಣ, ದೀಪಕ್ ಸಾಹು ಬಂಧಿತರು. ಓಡಿಶಾದಿಂದ ಬೆಂಗಳೂರಿಗೆ ಅಕ್ರಮವಾಗಿ ಗಾಂಜಾ ಸಾಗಿಸಲಾಗುತ್ತಿತ್ತು. ಆರೋಪಿಗಳು ಮಾದಕ ವಸ್ತುಗಳನ್ನು ಸಾಗಾಟ ಮಾಡುವ ದಂಧೆಗೆ ಸೇರಿದವರು ಎನ್ನಲಾಗಿದೆ. ಈ ಹಿಂದೆಯೂ ಇದೇ ರೀತಿ ಸಾಗಾಣಿಕೆ ಮಾಡಿರಬಹುದು. ಇದೊಂದು ದೊಡ್ಡ ಜಾಲವಿರಬಹುದು ಎನ್ನುವ ಸಂಶಯ ಪೊಲೀಸರು ವ್ಯಕ್ತಪಡಿಸಿದರು.
ದಿಬ್ಬೂರಹಳ್ಳಿ ಠಾಣೆಯ ಪಿ.ಎಸ್.ಐ ಶ್ಯಾಮಲಾ, ಸಿಬ್ಬಂದಿಯಾದ ಶಿವಪ್ಪ ಬ್ಯಾಕೋಡ, ನಟರಾಜ, ಶ್ರೀನಾಥರಾವ್, ನಂದಕುಮಾರ್, ಮಂಜುನಾಥ, ಹರಿನಾಥ, ಗಿರೀಶ, ಶ್ರೀನಿವಾಸ್, ಸುಭಾಶ್, ಚೆನ್ನಕೇಶವ, ಚೌಡಪ್ಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.