
ಚಿಕ್ಕಬಳ್ಳಾಪುರ: ನಮ್ಮೂರ ಮಕ್ಕಳನ್ನು ಬೀದಿಗೆ ತಳ್ಳುವ ‘ಕೆಪಿಎಸ್-ಮ್ಯಾಗ್ನೆಟ್ ಶಾಲೆ ಬೇಡ’ ಎಂದು ಎಐಡಿಎಸ್‌ಒ ಹಮ್ಮಿಕೊಂಡಿರುವ ಪ್ರತಿಭಟನೆಯು ಗುರುವಾರ ತಾಲ್ಲೂಕಿನ ಕಾಡದಿಬ್ಬೂರು ಸರ್ಕಾರಿ ಶಾಲೆ ಎದುರು ನಡೆಯಿತು.
ಕಾಡದಿಬ್ಬನೂರು, ಮರಳುಕುಂಟೆ, ಕತ್ರಿಗುಪ್ಪೆ, ನೆಲ್ಲಿಮರದ ಹಳ್ಳಿಯ ಶಾಲೆಗಳನ್ನು ದಿಬ್ಬೂರು ಮ್ಯಾಗ್ನೆಟ್ ಶಾಲೆಗೆ ವಿಲೀನಗೊಳಿಸುವುದರ ವಿರುದ್ಧ ಈ ಹೋರಾಟ ಹಮ್ಮಿಕೊಳ್ಳಲಾಗಿತ್ತು.
ಸಂಘಟನೆ ರಾಜ್ಯ ಉಪಾಧ್ಯಕ್ಷೆ ಅಪೂರ್ವ ಮಾತನಾಡಿ, ಊರಿನ ಜನರು ಒಗ್ಗಟ್ಟಾಗಿ ನಿಂತು ಶಾಲೆ ಉಳಿಸಬೇಕು ಎಂದರು.
‘ಏನೇ ಆದರೂ ನಮ್ಮೂರಿನ ಸರ್ಕಾರಿ ಶಾಲೆಯನ್ನು ಮುಚ್ಚಲು ಬಿಡುವುದಿಲ್ಲ’ ಎಂದು ಸಭೆಯಲ್ಲಿದ್ದ ಪೋಷಕರು ಹಾಗೂ ಗ್ರಾಮಸ್ಥರು ತಿಳಿಸಿದರು. 15 ಸದಸ್ಯರ ಸಾರ್ವಜನಿಕ ಶಿಕ್ಷಣ ಉಳಿಸಿ ಪೋಷಕರ ಸಮಿತಿ ರಚನೆಯಾಯಿತು. ಎಐಡಿಎಸ್ಒ ಜಿಲ್ಲಾ ಸಂಚಾಲಕ ಕಿರಣ್ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.