
ಪ್ರಜಾವಾಣಿ ವಾರ್ತೆ
ಇರಾನ್ ಮೇಲೆ ದಾಳಿ
ಪಿಟಿಐ ಚಿತ್ರ
ಕೊಪ್ಪ: ಕೆಲಸಕ್ಕೆಂದು ಇರಾನ್‌ಗೆ ಹೋಗಿರುವ ಮಗ ನಿಶ್ಚಿತ್ ಜಿ.ಎಂ. ದೂರವಾಣಿ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ತಾಲ್ಲೂಕಿನ ಹಿರೇಕೊಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಗಣಪತಿಕಟ್ಟೆ ನಿವಾಸಿ ಮಹೇಶ್ ತಿಳಿಸಿದ್ದಾರೆ.
ಕಳೆದ 5 ತಿಂಗಳ ಹಿಂದೆ ಕೆಲಸಕ್ಕೆ ಹೋಗಿದ್ದು, ವಾರಕ್ಕೊಮ್ಮೆ ಫೋನ್ ಮಾಡುತ್ತಿದ್ದ ಕಳೆದ ಬುಧವಾರ ಕೊನೆಯ ಬಾರಿ ಮಾತನಾಡಿದ್ದ. ಆತ ಟೈಲ್ಸ್, ಗ್ರಾನೈಟ್ ಸರಕು ಸಾಗಣೆ ಹಡಗಿನಲ್ಲಿ ಕೆಲಸ ಮಾಡಿಕೊಂಡಿದ್ದು, ಕೊನೆಯ ಬಾರಿ ಮಾತನಾಡಿದ್ದ ವೇಳೆ, ನಾಳೆ ದಿನ ಕುವೈಟ್ ಗೆ ಹೋಗುತ್ತಿರುವುದಾಗಿ ಹೇಳಿದ್ದ ಎಂಬುದಾಗಿ ತಿಳಿಸಿದ್ದಾರೆ.
ತಾಲ್ಲೂಕು ಆಡಳಿತ, ಪೊಲೀಸ್ ಇಲಾಖೆಯಿಂದ ಮಾಹಿತಿ ಕೇಳಿದ್ದು ಅಗತ್ಯ ಮಾಹಿತಿಯನ್ನು ನೀಡಿದ್ದೇನೆ. ಮಗ ಫೋನ್ ಸಂಪರ್ಕಕ್ಕೆ ಸಿಕ್ಕಿ ಸುರಕ್ಷಿತವಾಗಿದ್ದೇನೆ ಎಂದು ತಿಳಿಸಿದರೆ ಸಮಾಧಾನವಾಗುತ್ತಿತ್ತು ಎಂದು ಮಹೇಶ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.