ಚಿತ್ರದುರ್ಗ: ಪ್ರಧಾನಿ ಹುದ್ದೆ ಅಲಂಕರಿಸಿದ್ದ ಜವಾಹರಲಾಲ್ ನೆಹರೂ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರದು ಮೇರು ವ್ಯಕ್ತಿತ್ವ. ಇವರ ಬಗ್ಗೆ ಎರಡೂ ಪಕ್ಷಗಳ (ಕಾಂಗ್ರೆಸ್ ಮತ್ತು ಬಿಜೆಪಿ) ನಾಯಕರು ಅವಹೇಳನಕಾರಿಯಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಾಜಪೇಯಿ ಮತ್ತು ನೆಹರೂ ಹಿರಿಯ ನಾಯಕರು. ರಾಜಕಾರಣಕ್ಕೆ ಇಂಥ ದೊಡ್ಡ ನಾಯಕರ ಹೆಸರು ಎಳೆದು ತರುವುದು ಸರಿಯಲ್ಲ. ಇಬ್ಬರ ಹೆಸರಿನಲ್ಲಿ ನಡೆಯುತ್ತಿರುವ ವಿವಾದಕ್ಕೆ ತೆರೆ ಎಳೆಯಬೇಕಿದೆ’ ಎಂದು ಹೇಳಿದರು.
‘ನೆಹರೂ ಬಗ್ಗೆ ವಾಜಪೇಯಿ ಅವರಿಗೆ ಅಪಾರ ಗೌರವವಿತ್ತು. ಮೊರಾರ್ಜಿ ದೇಸಾಯಿ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ವಾಜಪೇಯಿ, ನೆಹರೂ ಅವರ ಪ್ರತಿಮೆ ಪುನರ್ ಸ್ಥಾಪನೆ ಆಗುವಂತೆ ನೋಡಿಕೊಂಡರು. ಈ ಇಬ್ಬರೂ ನಾಯಕರ ಬಗ್ಗೆ ಆಡುತ್ತಿರುವ ಮಾತುಗಳು ರಾಜಕಾರಣಿಗಳಿಗೆ ಶೋಭೆ ತರುವುದಿಲ್ಲ. ಯಾರನ್ನು ಬೇಕಾದರೂ ಟೀಕೆ ಮಾಡಬಹುದು ಎಂಬುದು ಸರಿಯಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.