ADVERTISEMENT

ಮಹಿಳೆಯಿಂದಲೇ ಮಹಿಳಾ ಸಬಲೀಕರಣ- ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಬಿಲ್ಲಪ್ಪ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2022, 5:19 IST
Last Updated 9 ಮಾರ್ಚ್ 2022, 5:19 IST
ಹೊಸದುರ್ಗದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ವಂದನೀಯ ಫಾದರ್ ಉದ್ಘಾಟಿಸಿದರು.
ಹೊಸದುರ್ಗದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ವಂದನೀಯ ಫಾದರ್ ಉದ್ಘಾಟಿಸಿದರು.   

ಹೊಸದುರ್ಗ: ಮಹಿಳೆಯರಿಗೆ ಸೌಲಭ್ಯ ನೀಡಿ, ಮಹಿಳೆಯರನ್ನು ಸಬಲರನ್ನಾಗಿ ಮಾಡಲು ಮತ್ತೊಬ್ಬ ಮಹಿಳೆಯಿಂದ ಸಾಧ್ಯ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿಲ್ಲಪ್ಪ ತಿಳಿಸಿದರು.

ನಿಸರ್ಗ ಸಂಸ್ಥೆ ಹಾಗೂ ನಿಸರ್ಗ ಮಹಿಳಾ ಮಹಾಒಕ್ಕೂಟ ಇವರ ಸಹಯೋಗದಲ್ಲಿ ಪಟ್ಟಣದ ಗಣೇಶ ಸದನದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರದಲ್ಲಿ ‘ಸಾಂವಿಧಾನಿಕ ಮೌಲ್ಯಗಳು ಮತ್ತು ಮಹಿಳೆ’ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.

ಹೆಣ್ಣುಭ್ರೂಣ ಹತ್ಯೆ ನಿಷೇಧ, ಆಸ್ತಿಯ ಹಕ್ಕು, ಸಮಾನ ಕೆಲಸಕ್ಕೆ ಸಮಾನ ಕೂಲಿಯಂತಹ ಅವಕಾಶಗಳನ್ನು ಸಂವಿಧಾನ ನೀಡಿದೆ. ಲಿಂಗ ತಾರತಮ್ಯ ನಿವಾರಣೆಗಾಗಿ ಶ್ರಮಿಸುತ್ತಿದೆ. ಮಹಿಳೆಯರು ಈ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.

ADVERTISEMENT

ಹಿಜಾಬ್ ಸಂಬಂಧ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಭಾರತ ವೈವಿಧ್ಯಮಯ ರಾಷ್ಟ್ರ. ಎಲ್ಲರೂ ಸಂವಿಧಾನವನ್ನು ಅರ್ಥೈಸಿಕೊಳ್ಳಬೇಕು. ಧರ್ಮ ಜೀವನದ ಒಂದು ಮಾರ್ಗವಷ್ಟೇ. ಎಲ್ಲಾ ಧರ್ಮಗಳನ್ನು ಸಮಾನವಾಗಿ ಸ್ವೀಕರಿಸಿ, ಅವರವರ ಧರ್ಮ ಪಾಲಿಸಿ, ಮತ್ತೊಬ್ಬರ ಧರ್ಮವನ್ನು ಗೌರವಿಸಿ ಸಹೋದರತ್ವ ರೂಢಿಸಿಕೊಂಡು ಸಾಮರಸ್ಯದಿಂದ ಬಾಳಬೇಕು ಎಂದು ಕಿವಿಮಾತು ಹೇಳಿದರು. ವಂದನೀಯ ಫಾದರ್, ತಹಶೀಲ್ದಾರ್ ಮಲ್ಲಿಕಾರ್ಜುನ ಮಾತನಾಡಿದರು.

ನಿಸರ್ಗ ಸಂಸ್ಥೆ ನಿರ್ದೇಶಕರು ವಂದನೀಯ ಸಿಸ್ಟರ್ ಸ್ಮಿತಾ ಡಿಸೋಜಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂರಕ್ಷಣಾಧಿಕಾರಿ ಶ್ರೀದೇವಿ, ನಿಸರ್ಗ ಮಹಿಳಾ ಮಹಾ ಒಕ್ಕೂಟದ ಅಧ್ಯಕ್ಷೆ ಎಂ. ಶೈಲಜಾ, ನಿಸರ್ಗ ಸ್ವ ಶಕ್ತಿ ಸೌಹಾರ್ದ ಸ್ವ–ಸಹಾಯ ಸಹಕಾರಿ ನಿಗಮದ ಅಧ್ಯಕ್ಷೆ ಟಿ. ಅನುಸೂಯ, ರೈತ ಶಕ್ತಿ ರೈತ ಉತ್ಪಾದಕರ ಕಂಪನಿ ಲಿಮಿಟೆಡ್ ನಿರ್ದೇಶಕಿ ಎಚ್.ಪಿ. ಭಾರತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.