ADVERTISEMENT

ಕರ್ನಾಟಕಕ್ಕೆ 40 ಟನ್‌ ಆಮ್ಲಜನಕ: ಕುವೈತ್‌ನಿಂದ ಬಂತು ಐಎನ್‌ಎಸ್‌ ಕೋಲ್ಕತ್ತ ಹಡಗು

​ಪ್ರಜಾವಾಣಿ ವಾರ್ತೆ
Published 10 ಮೇ 2021, 11:58 IST
Last Updated 10 ಮೇ 2021, 11:58 IST
ಎರಡು ಕಂಟೈನರ್‌ಗಳಲ್ಲಿ ವೈದ್ಯಕೀಯ ಆಕ್ಸಿಜನ್, ಟ್ಯಾಂಕ್‌ಗಳು, ಆಕ್ಸಿಜನ್ ಕಾಂಸ್ಟ್ರೇಟರ್‌ ಪೂರೈಕೆ
ಎರಡು ಕಂಟೈನರ್‌ಗಳಲ್ಲಿ ವೈದ್ಯಕೀಯ ಆಕ್ಸಿಜನ್, ಟ್ಯಾಂಕ್‌ಗಳು, ಆಕ್ಸಿಜನ್ ಕಾಂಸ್ಟ್ರೇಟರ್‌ ಪೂರೈಕೆ    

ಮಂಗಳೂರು: ಭಾರತೀಯ ನೌಕಾಪಡೆಯ ಸಮುದ್ರ ಸೇತು–2 ಭಾಗವಾಗಿ ಸೋಮವಾರ ಕುವೈತ್‌ನಿಂದ 40 ಟನ್‌ ಆಮ್ಲಜನಕವನ್ನು ಹೊತ್ತ ಐಎನ್‌ಎಸ್‌ ಕೋಲ್ಕತ್ತ ಹಡಗು ಇಲ್ಲಿನ ನವ ಮಂಗಳೂರು ಬಂದರಿಗೆ ಬಂದಿದೆ.

ಭಾರತದೊಂದಿಗಿನ ಭಾಂದವ್ಯದ ದ್ಯೋತಕವಾಗಿ ಕುವೈತ್‌ ಸರ್ಕಾರ ಎರಡು ಕಂಟೈನರ್‌ಗಳಲ್ಲಿ ವೈದ್ಯಕೀಯ ಆಕ್ಸಿಜನ್, ಟ್ಯಾಂಕ್‌ಗಳು, ಆಕ್ಸಿಜನ್ ಕಾಂಸ್ಟ್ರೇಟರ್‌ ಪೂರೈಕೆ ಮಾಡಿದೆ.

ಒಂದು ಹಡಗು ಸೋಮವಾರ ಬಂದಿದ್ದು, ಮಂಗಳವಾರ ಇನ್ನೂ ಎರಡು ಹಡಗುಗಳು ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ADVERTISEMENT

ಶಾಸಕ ಡಾ.ವೈ ಭರತ್ ಶೆಟ್ಟಿ, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹಾಗೂ ಪ್ರಮುಖರು ಹಡಗನ್ನು ಬರಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.