ಕೊಣಾಜೆ ಗ್ರಾಮದ ಆದಿಶಕ್ತಿ ದೇವಸ್ಥಾನ ದಡಸ್ ಎಂಬಲ್ಲಿ ತಡೆಗೋಡೆ ಕುಸಿತ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಂಗಳವಾರ ದಿನವಿಡೀ ಸುರಿದ ಮಳೆ ಬುಧವಾರವೂ ಮುಂದುವರೆದಿದೆ. ಹಲವೆಡೆ ಮರಗಳು ಬಿದ್ದು, ಮಣ್ಣು ಕುಸಿದು ಹಾನಿ ಉಂಟಾಗಿದೆ.
ನಗರದಲ್ಲಿ ಮಂಗಳವಾರ ರಾತ್ರಿ ಬಿಟ್ಟು ಬಿಟ್ಟು ಮಳೆಯಾಗಿದೆ. ಬುಧವಾರ ನಸುಕಿನಲ್ಲಿ ಮಳೆ ನಿಂತಿತ್ತು. ಬೆಳಿಗ್ಗೆ 8ರ ಬಳಿಕ ತುಂತುರು ಮಳೆ ಮತ್ತೆ ಶುರುವಾಗಿದೆ.
ಉಳ್ಳಾಲ ತಾಲ್ಲೂಕಿನ ಸಜಿಪ ಪಡು ಗ್ರಾಮದ ತಲೆಮೊಗರು ಎಂಬಲ್ಲಿ ಇಸಮ್ಮ ಅವರ ಮನೆಗೆ ಪಕ್ಕದ ಮಸೀದಿಯ ಆವರಣ ಗೋಡೆ ಬಿದ್ದು ಭಾಗಶಃ ಹಾನಿಯಾಗಿದೆ.
ಕೊಣಾಜೆ ಗ್ರಾಮದ ಆದಿಶಕ್ತಿ ದೇವಸ್ಥಾನ ದಡಸ್ ಎಂಬಲ್ಲಿ ತಡೆಗೋಡೆ ಕುಸಿದಿದೆ. ಕಿನ್ಯ ಗ್ರಾಮದ ಮಹಮ್ಮದ್ ಹನೀಫ್ ಅವರ ಮನೆ ಭಾಗಶಃ ಹಾನಿಗೊಳಗಾಗಿದೆ.
ಸಜಿಪ ಪಡು ಗ್ರಾಮದಲ್ಲಿ ಆವರಣ ಗೋಡೆ ಕುಸಿತ
ದ.ಕ: 12 ಗ್ರಾಮಗಳಲ್ಲಿ 10 ಸೆಂ.ಮೀ.ಗೂ ಅಧಿಕ ಮಳೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ 12 ಗ್ರಾಮಗಳಲ್ಲಿ ಬುಧವಾರ ಬೆಳಿಗ್ಗೆ 8.30 ರವರೆಗಿನ 24 ಗಂಟೆಗಳಲ್ಲಿ 10 ಸೆಂ.ಮೀ. ಗೂ ಅಧಿಕ ಮಳೆಯಾಗಿದೆ.
ನೀರುಮಾರ್ಗದಲ್ಲಿ ಅತಿ ಹೆಚ್ಚು (15.7 ಸೆಂಮೀ) ಮಳೆ ದಾಖಲಾಗಿದೆ.
ಮೇರಮಜಲುವಿನಲ್ಲಿ 14.7, ಕೋಟೆಕಾರ್‌ನಲ್ಲಿ 12.8, ಪುದು ಗ್ರಾಮದಲ್ಲಿ 12.6, ಬಗಡಬೆಳ್ಳೂರಿನಲ್ಲಿ 12, ತಲಪಾಡಿಯಲ್ಲಿ 11.5, ಕಿನ್ಯದಲ್ಲಿ 11.1, ಐಕಳದಲ್ಲಿ 10.8, ಮುನ್ನೂರಿನಲ್ಲಿ 10.75, ಅಮ್ಟಾಡಿಯಲ್ಲಿ 10.7, ರಾಯಿಯಲ್ಲಿ 10.1 ಹಾಗೂ ಪಡುಮಾರ್ನಾಡಿನಲ್ಲಿ 10.05 ಸೆಂ.ಮೀ ಮಳೆಯಾಗಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.