ADVERTISEMENT

ಕಾಸರಗೋಡು: ಅಂಗನವಾಡಿಗೆ ಕನ್ನಡ ಶಿಕ್ಷಕಿ ನೇಮಿಸಲು ಹೈಕೋರ್ಟ್‌ ಆದೇಶ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2025, 12:55 IST
Last Updated 18 ಫೆಬ್ರುವರಿ 2025, 12:55 IST
ಕೋರಿಕಂಡ ಅಂಗನವಾಡಿಗೆ ಕನ್ನಡ ಗೊತ್ತಿರುವ ಶಿಕ್ಷಕಿಯನ್ನು ನೇಮಿಸುವಂತೆ ಹೈಕೋರ್ಟ್ ನೀಡಿರುವ ತೀರ್ಪಿನ ಪ್ರತಿ
ಕೋರಿಕಂಡ ಅಂಗನವಾಡಿಗೆ ಕನ್ನಡ ಗೊತ್ತಿರುವ ಶಿಕ್ಷಕಿಯನ್ನು ನೇಮಿಸುವಂತೆ ಹೈಕೋರ್ಟ್ ನೀಡಿರುವ ತೀರ್ಪಿನ ಪ್ರತಿ   

ಕಾಸರಗೋಡು: ಜಿಲ್ಲೆಯ ಅಡೂರು ಬಳಿಯ ಕೋರಿಕಂಡ ಅಂಗನವಾಡಿಗೆ ಕನ್ನಡ ಗೊತ್ತಿರುವ ಶಿಕ್ಷಕಿಯನ್ನು ನೇಮಿಸುವಂತೆ ಕೇರಳ ಹೈಕೋರ್ಟ್ ತೀರ್ಪು ನೀಡಿದೆ.

ಕನ್ನಡ ಮಾಧ್ಯಮದ ಈ ಅಂಗನವಾಡಿಗೆ ರಾಜ್ಯ ಸರ್ಕಾರ ಮಲಯಾಳ ಭಾಷೆಯ ಶಿಕ್ಷಕಿಯನ್ನು ನೇಮಿಸಿದೆ. 

ಈ ಅಂಗನವಾಡಿಯ ಮಕ್ಕಳ ಪೋಷಕರು ಮತ್ತು ಅಂಗನವಾಡಿ ಮೇಲುಸ್ತುವಾರಿ ಸಮಿತಿಯವರು (ಎಎಲ್‌ಎಂಎಸ್) ಹೈಕೋರ್ಟ್‌ಗೆ 3 ಪ್ರತ್ಯೇಕ ರಿಟ್ ಅರ್ಜಿ ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್, ಮಲಯಾಳ ಶಿಕ್ಷಕಿಯ ನೇಮಕ ಸರಿಯಲ್ಲ; ತಕ್ಷಣವೇ ಕನ್ನಡ ಶಿಕ್ಷಕಿಯನ್ನು ನೇಮಿಸಬೇಕು ಎಂದು ಆದೇಶಿಸಿದೆ.

ADVERTISEMENT
ಕೋರಿಕಂಡ ಅಂಗನವಾಡಿಗೆ ಕನ್ನಡ ಗೊತ್ತಿರುವ ಶಿಕ್ಷಕಿಯನ್ನು ನೇಮಿಸುವಂತೆ ಹೈಕೋರ್ಟ್ ನೀಡಿರುವ ತೀರ್ಪಿನ ಪ್ರತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.