ADVERTISEMENT

ಮಂಗಳೂರು: ಮೂವರು ಸಾಹಿತಿ, ಎರಡು ಸಂಸ್ಥೆಗಳಿಗೆ ಕೊಂಕಣಿ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 22:30 IST
Last Updated 30 ಅಕ್ಟೋಬರ್ 2025, 22:30 IST
ಪುಂಡಲೀಕ ನಾಯಕ
ಪುಂಡಲೀಕ ನಾಯಕ   

ಮಂಗಳೂರು: ಇಲ್ಲಿನ ವಿಶ್ವ ಕೊಂಕಣಿ ಕೇಂದ್ರವು ವಾರ್ಷಿಕವಾಗಿ ನೀಡುವ ಐದು ಪುರಸ್ಕಾರಗಳನ್ನು ಘೋಷಿಸಿದೆ.

ವಿಮಲಾ ವಿ. ಪೈ ಹೆಸರಿನಲ್ಲಿ ನೀಡುವ ವಿಶ್ವ ಕೊಂಕಣಿ ಜೀವನ ಸಿದ್ದಿ ಸನ್ಮಾನ ಪುರಸ್ಕಾರಕ್ಕೆ ಸಾಹಿತಿ ಪುಂಡಲೀಕ ಎನ್. ನಾಯಕ್ ಆಯ್ಕೆಯಾಗಿದ್ದಾರೆ.

ಕೊಂಕಣಿ ಕವಿತಾ ಕೃತಿ ಪುರಸ್ಕಾರಕ್ಕೆ ಕವಿ ಶಶಿಕಾಂತ ಪೂನಾಜಿ ಅವರ ‘ಗುಠೆಣಿ’ ಕೃತಿ, ಕೊಂಕಣಿ ಸಾಹಿತ್ಯ ಪುರಸ್ಕಾರಕ್ಕೆ ಲೇಖಕ ಬಾಲಚಂದ್ರ ಗಾಂವಕರ ಅವರ ‘ಪನವತ’ ಕೃತಿ ಆಯ್ಕೆಯಾಗಿವೆ ಎಂದು ಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ್ ಶೆಣೈ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‌ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರಕ್ಕೆ ಈಶ್ವರಾನಂದ ಮಹಿಳಾ ಸೇವಾಶ್ರಮ (ಅನಾಥರ ಸೇವೆ) ಹಾಗೂ ಹೊಸ ಬೆಳಕು ಸೇವಾ ಸಂಸ್ಥೆ (ನಿರ್ಗತಿಕರ ಸೇವೆ) ಆಯ್ಕೆಯಾಗಿವೆ. ಈ ಐದು ಪುರಸ್ಕಾರಗಳು ತಲಾ ₹1 ಲಕ್ಷ ನಗದು, ಫಲಕ ಒಳಗೊಂಡಿವೆ ಎಂದರು. 

ನ.1ರಂದು ಬೆಳಿಗ್ಗೆ 9 ಗಂಟೆಗೆ ವಿಶ್ವ ಕೊಂಕಣಿ ಕೇಂದ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪುರಸ್ಕಾರ ಪ್ರದಾನ ಮಾಡಲಾಗುವುದು. ಎಂದು ಹೇಳಿದರು. 

ಬಾಲಚಂದ್ರ ಗಾಂವಕರ
ಶಶಿಕಾಂತ ಪೂನಾಜಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.