ADVERTISEMENT

ಕುಕ್ಕೆ: ಭಾರಿ ಮಳೆಗೆ ಕುಮಾರಧಾರ ಸ್ನಾನಘಟ್ಟ ಜಲಾವೃತ

​ಪ್ರಜಾವಾಣಿ ವಾರ್ತೆ
Published 7 ಜುಲೈ 2018, 14:45 IST
Last Updated 7 ಜುಲೈ 2018, 14:45 IST
ಜಲಾವೃತಗೊಂಡ ಕುಮಾರಧಾರ ಸ್ನಾನಘಟ್ಟ
ಜಲಾವೃತಗೊಂಡ ಕುಮಾರಧಾರ ಸ್ನಾನಘಟ್ಟ   

ಸುಬ್ರಹ್ಮಣ್ಯ: ಘಟ್ಟ ಪ್ರದೇಶದಲ್ಲಿ ಹಾಗೂ ಸುಬ್ರಹ್ಮಣ್ಯ ಪರಿಸರದಲ್ಲಿ ಶುಕ್ರವಾರ ರಾತ್ರಿಯಿಂದ ಶನಿವಾರದವರೆಗೆ ನಿರಂತರವಾಗಿ ಸುರಿದ ಆಷಾಢದ ಮಳೆಗೆ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ನದಿಗೆ ಅಡ್ಡಲಾಗಿದ್ದ ಹಳೆಯ ಸೇತುವೆ ಮುಳುಗಡೆಗೊಂಡಿದೆ.

ಕುಮಾರಧಾರ ನದಿಯಲ್ಲಿ ಭಾರೀ ಪ್ರವಾಹ ಹರಿದು ಬಂದುದರಿಂದ ಕುಮಾರಧಾರ ಸ್ನಾನಘಟ್ಟ ಸಂಪೂರ್ಣ ಜಲಾವೃತಗೊಂಡಿದೆ. ಕುಕ್ಕೆಯಲ್ಲಿ ಮಳೆಯಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ನದಿ ತೊರೆ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದೆ. ಪ್ರವಾಹದ ಆತಂಕ ಸೃಷ್ಟಿಯಾಗಿದೆ.

ಕುಮಾರಧಾರ ಸ್ನಾನಘಟ್ಟವು ಬೆಳಿಗ್ಗೆಯಿಂದ ಸಂಜೆವರೆಗೆ ಸ್ನಾನಘಟ್ಟ ಜಲಾವೃತಗೊಂಡಿತ್ತು. ಸ್ನಾನಘಟ್ಟದಲ್ಲಿ ನಿರ್ಮಿತವಾಗಿದ್ದ ಶೌಚಾಲಯವು ಸಂಪೂರ್ಣ ಮುಳುಗಡೆಗೊಂಡಿತ್ತು. ಮಹಿಳೆಯರ ಡ್ರೆಸ್ಸಿಂಗ್ ರೂಂ ನೀರಿನಿಂದ ಆವೃತಗೊಂಡಿತ್ತು. ಪಾತ್ರೆಗಳಿಂದ ಮೂಲಕ ನೀರನ್ನು ಹಾಕಿ ತೀರ್ಥಸ್ನಾನ ಪೂರೈಸಿದರು. ಶನಿವಾರವೂ ನೀರಿನ ಮಟ್ಟ ಏರುವ ಲಕ್ಷಣಗಳಿವೆ.

ADVERTISEMENT

ಕುಮಾರಧಾರ ನದಿಯ ಉಪನದಿಯಾದ ದರ್ಪಣತೀರ್ಥದ ಸೇತುವೆಗೆ ತಾಗಿಕೊಂಡು ನದಿಯು ಹರಿಯುತ್ತಿದೆ. ಕೃಷಿ ತೋಟಗಳಿಗೆ ನೀರು ನುಗ್ಗಿತು. ಫಲವಸ್ತುಗಳು ಹಾಗೂ ಕೃಷಿಕರು ಹಾಕಿದ್ದ ಗೊಬ್ಬರ ನೀರು ಪಾಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.