ADVERTISEMENT

ಹವಾಮಾನ ವೈಪರೀತ್ಯ: ಕೊಚ್ಚಿಯಲ್ಲಿ ಇಳಿದ ದುಬೈ‌ ವಿಮಾನ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2021, 7:47 IST
Last Updated 13 ಏಪ್ರಿಲ್ 2021, 7:47 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮಂಗಳೂರು: ನಗರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಾಗಿದ್ದ ದುಬೈ - ಮಂಗಳೂರು ವಿಮಾನ ಹವಾಮಾನ ವೈಪರೀತ್ಯದಿಂದಾಗಿ ಕೊಚ್ಚಿಯಲ್ಲಿ ಇಳಿದಿದೆ.

'ದುಬೈ - ಮಂಗಳೂರು ಏರ್ ಇಂಡಿಯಾ ವಿಮಾನವೂ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಾಗಿದ್ದು, ಆದರೆ ಮಂಗಳೂರಿನಲ್ಲಿ ವಿಮಾನ ಇಳಿಯಲು ಅನುಕೂಲಕರ ವಾತಾವರಣ ಇಲ್ಲದ ಕಾರಣ, ವಿಮಾನದ ಮಾರ್ಗ ಬದಲಿಸಿ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿದೆ' ಎಂದು ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕ ಎ.ಸಿ.ಕೆ ನಾಯರ್ ಮಾಹಿತಿ ನೀಡಿದ್ದಾರೆ.

ವಿಮಾನದಲ್ಲಿ 118 ಮಂದಿ ಪ್ರಯಾಣಿಕರಿದ್ದು, ರಾತ್ರಿ 12.30 ಕ್ಕೆ ಬಜ್ಪೆ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿತ್ತು.

ADVERTISEMENT

ಆದರೆ ಮಂಗಳೂರಿನಲ್ಲಿ ಭಾರೀ ಸಿಡಿಲು ಮಳೆಯ ಕಾರಣ ವಿಮಾನ ಇಳಿಯಲಾಗದೆ ಕೊಚ್ಚಿಯಲ್ಲಿ ಲ್ಯಾಂಡ್ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.