ADVERTISEMENT

ಪುತ್ತೂರು | ಜನಮನ ಕಾರ್ಯಕ್ರಮದಲ್ಲಿ ಜನರು ಅಸ್ವಸ್ಥ: ಕ್ಷಮೆ ಕೇಳಿದ ಶಾಸಕ ಅಶೋಕ್ ರೈ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 3:15 IST
Last Updated 21 ಅಕ್ಟೋಬರ್ 2025, 3:15 IST
<div class="paragraphs"><p>ಅಶೋಕ್ ರೈ</p></div>

ಅಶೋಕ್ ರೈ

   

ಪುತ್ತೂರು: ಸೋಮವಾರ ಇಲ್ಲಿನ ಕೊಂಬೆಟ್ಟು ಕಾಲೇಜು ಬಳಿಯ ಮೈದಾನದಲ್ಲಿ ನಡೆದ ಅಶೋಕ ಜನಮನ ದೀಪಾವಳಿ ವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಜನಸ್ತೋಮದ ನಡುವೆ ಸಿಲುಕಿ‌ ಕೆಲವರು ಅಸ್ವಸ್ಥಗೊಂಡ ಘಟನೆಗೆ ಸಂಬಂಧಿಸಿ ಶಾಸಕ ಅಶೋಕ್ ರೈ ಕ್ಷಮೆ ಕೋರಿದ್ದಾರೆ.

‘ನಿರೀಕ್ಷಿಸಿದಕ್ಕಿಂತ ಹೆಚ್ಚು ಜನರು ಕಾರ್ಯಕ್ರಮಕ್ಕೆ ಬಂದಿದ್ದರು.‌ ಮಧ್ಯಾಹ್ನ ಮಳೆಯೂ ಬಂತು. ಹೀಗಾಗಿ ಜನಸ್ತೋಮದಲ್ಲಿ ಸಿಲುಕಿ ಕೆಲವು ಮಂದಿ ಅಸ್ವಸ್ಥರಾದರು. ಕೂಡಲೇ ಅವರಿಗೆ ಚಿಕಿತ್ಸೆ ಕೊಡಿಸಲಾಗಿದೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

‘ಎಲ್ಲ ಬಗೆಯ ವ್ಯವಸ್ಥೆ ಮಾಡಿದ್ದರೂ ಜನಸಂದಣಿಯಿಂದಾಗಿ ವ್ಯತ್ಯಯ ಆಯಿತು. ಈ ವೇಳೆ ಕೆಲವರ ಮನಸ್ಸಿಗೆ ನೋವಾಗಿದೆ. ಇದು ಕೂಡ ನನಗೆ ಬೇಸರ ತಂದಿದೆ. ರಾತ್ರಿ 9.30ರವರೆಗೂ ಉಡುಗೊರೆ ವಿತರಣೆ ನಡೆದಿದೆ’ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.