ADVERTISEMENT

ಮಂಗಳೂರು: ಸಿಟಿ ಕ್ಯಾಂಪಸ್‍ನಲ್ಲಿ ‘ಹೋಳಿ ರಂಗ್’

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2022, 15:56 IST
Last Updated 18 ಮಾರ್ಚ್ 2022, 15:56 IST
ಶ್ರೀನಿವಾಸ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹೋಳಿ ಆಚರಿಸಿದರು.
ಶ್ರೀನಿವಾಸ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹೋಳಿ ಆಚರಿಸಿದರು.   

ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯದ ಇನ್‍ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‍ಮೆಂಟ್, ಏವಿಯೇಷನ್ ಸ್ಟಡೀಸ್, ಶಿಕ್ಷಣ ಮತ್ತು ಇಂಟೀರಿಯರ್ ಡಿಸೈನ್ ವಿಭಾಗ ವಿದ್ಯಾರ್ಥಿಗಳು ಗುರುವಾರ ಪಾಂಡೇಶ್ವರದ ಸಿಟಿ ಕ್ಯಾಂಪಸ್‍ನಲ್ಲಿ ‘ಹೋಳಿ ರಂಗ್ 2022’ ಆಚರಿಸಿದರು.

ಮಳೆ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು, ಡಿಜೆ ಹಾಡುಗಳು ಮತ್ತು ಬಣ್ಣಗಳ ರೋಮಾಂಚಕ ಆಟದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಡಾ ಸಿ.ಎ.ಎ. ರಾಘವೇಂದ್ರ ರಾವ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಶ್ರೀನಿವಾಸ್ ಸಮೂಹ ಸಂಸ್ಥೆಗಳ ಉಪಾಧ್ಯಕ್ಷ ಡಾ.ಎ. ಶ್ರೀನಿವಾಸ್ ರಾವ್ ಅಧ್ಯಕ್ಷತೆ ವಹಿಸಿದ್ದರು.

ಮಹಾನಗರ ಪಾಲಿಕೆ ಆಯುಕ್ತ‌ ಅಕ್ಷಯ್ ಶ್ರೀಧರ್ ತಮ್ಮ ಕಾಲೇಜು ದಿನಗಳನ್ನು ನೆನಪಿಸಿಕೊಂಡರು.
ಶ್ರೀನಿವಾಸ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಪಿ.ಎಸ್‌.ಐತಾಳ್ ಮತ್ತು ಡೆವಲಪ್‍ಮೆಂಟ್‌ ರಿಜಿಸ್ಟ್ರಾರ್ ಡಾ. ಅಜಯ್ ಕೆ.ಜೆ ಇದ್ದರು. ವಿಮಾನಯಾನ ಅಧ್ಯಯನ ಸಂಸ್ಥೆಯ ಉಪನ್ಯಾಸಕಿ ಕಾವ್ಯಶ್ರೀ ನಿರೂಪಿಸಿದರು. ಶಿಕ್ಷಣ ಸಂಸ್ಥೆಯ ಡೀನ್ ಡಾ.ಜಯಶ್ರೀ ವಂದಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.