ಪುತ್ತೂರು: ಮಣ್ಣು ಸಡಿಲಗೊಂಡು ರಸ್ತೆ ಬದಿಯ ಧರೆ ಕುಸಿದು, ತೋಡಿನ ಬದಿಗೆ ನಿರ್ಮಿಸಿದ್ದ ತಡೆಗೋಡೆ ಕುಸಿದ ಘಟನೆ ಪುತ್ತೂರು ತಾಲ್ಲೂಕಿನಲ್ಲಿ ನಡೆದಿದೆ.
ನರಿಮೊಗರು ಗ್ರಾಮದ ಮುಕ್ವೆ ಸಮೀಪ ರಸ್ತೆ ಬದಿಯಲ್ಲಿ ಹಾದು ಹೋಗುವ ತೋಡಿನ ಬದಿಗೆ ನಿರ್ಮಿಸಿದ್ದ ತಡೆಗೋಡೆ ಗುರುವಾರ ರಾತ್ರಿ ವೇಳೆ ಕುಸಿದಿದೆ.
ಕೋಡಿಂಬಾಡಿ ಗ್ರಾಮದ ವಿನಾಯಕ ನಗರದಲ್ಲಿ ಪುತ್ತೂರು-ಉಪ್ಪಿನಂಗಡಿ ರಸ್ತೆಯ ಬದಿಯ ಧರೆ ಕುಸಿದು ರಸ್ತೆಗೂ ಬಿದ್ದಿದ್ದು, ಆ ಭಾಗದಲ್ಲಿದ್ದ ವಿದ್ಯುತ್ ಕಂಬ ಮುರಿದು ಬಿದ್ದಿದೆ. ರಸ್ತೆ ಬದಿಯ ಚರಂಡಿಯೂ ಮುಚ್ಚಿ ಹೋಗಿದೆ. ಘಟನಾ ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಹೊಸ ಕಂಬ ಅಳವಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.