ADVERTISEMENT

ಆತೂರು: ರೋಮಾಂಚನಗೊಳಿಸಿದ ಕಾರ್ ರೇಸ್

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2025, 13:42 IST
Last Updated 10 ಫೆಬ್ರುವರಿ 2025, 13:42 IST
ಉಪ್ಪಿನಂಗಡಿ ಸಮೀಪದ ಆತೂರಿನಲ್ಲಿ ನಡೆದ ಕಾರ್ ರೇಸ್‌ನ ದೃಶ್ಯ
ಉಪ್ಪಿನಂಗಡಿ ಸಮೀಪದ ಆತೂರಿನಲ್ಲಿ ನಡೆದ ಕಾರ್ ರೇಸ್‌ನ ದೃಶ್ಯ   

ಉಪ್ಪಿನಂಗಡಿ: ಆತೂರು ಪಾರ್ಟಿ ಆ್ಯಂಡ್‌ ಎಂಟರ್‌ಟೈನ್‌ಮೆಂಟ್‌ ಸರ್ವಿಸ್‌ ಸಂಸ್ಥೆಯ ಆಶ್ರಯದಲ್ಲಿ ಅನ್ವರ್ ಆತೂರು ಮತ್ತು ನಝೀರ್ ಆತೂರು ಸಾರಥ್ಯದಲ್ಲಿ ಭಾನುವಾರ ಕಾರ್ ರೇಸ್ ನಡೆಯಿತು. 

ಗೋವಾ, ಮಹಾರಾಷ್ಟ್ರ, ಕೇರಳ, ಕೊಡಗು, ಚಿಕ್ಕಮಗಳೂರು, ಮೈಸೂರು, ಮಂಡ್ಯದ ಸ್ಪರ್ಧಿಗಳು ಭಾಗವಹಿಸಿದ್ದರು. ಬೆಳಿಗ್ಗೆಯಿಂದ ಸಂಜೆವರೆಗೆ ನಡೆದ ಕಾರ್ ರೇಸ್ ಕಣ್ತುಂಬಿಕೊಂಡ ಸ್ಥಳೀಯರು ರೋಮಾಂಚನಗೊಂಡರು.

14 ವಿಭಾಗಗಳಲ್ಲಿ 109 ಸ್ಪರ್ಧಿಗಳು ಭಾಗವಹಿಸಿದ್ದರು. 6 ಮಂದಿ ಮಹಿಳಾ ಸ್ಪರ್ಧಿಗಳು ಭಾಗವಹಿಸಿದ್ದರು.

ADVERTISEMENT

ವಿಜೇತರು: 1600 ಸಿ.ಸಿ: ಜೀಸಂ ಚಿಕ್ಕಮಗಳೂರು (ಪ್ರಥಮ), ಅಝೀಂ ಹಂಚಿ ಗೋವಾ (ದ್ವಿತೀಯ). 1400 ಸಿ.ಸಿ: ಜೀಸಂ ಚಿಕ್ಕಮಗಳೂರು (ಪ್ರಥಮ), ಪ್ರಕಾಶ್ ಮೂಡಿಗೆರೆ (ದ್ವಿತೀಯ). ಇಂಡಿಯನ್ ಓಪನ್: ಜೀಸಂ (ಪ್ರಥಮ), ನಸೀಬ್ ಆತೂರು (ದ್ವಿತೀಯ). ಸ್ಟಾಕ್ ಕ್ಲಾಸ್: ಅಶ್ರಫಿ ಗಾಯಕ್ವಾಡ್ ಗೋವಾ (ಪ್ರಥಮ). 

1100 ಸಿ.ಸಿ: ಸೂರಜ್ ಮಂದಣ್ಣ ಮಡಿಕೇರಿ (ಪ್ರಥಮ), ಪ್ರಕಾಶ್ ಮೂಡಿಗೆರೆ (ದ್ವಿತೀಯ), 800 ಸಿ.ಸಿ: ಸೂರಜ್ ಮಡಿಕೇರಿ (ಪ್ರಥಮ), ವಿವೇಕ್ ಮೂಡಿಗೆರೆ (ದ್ವಿತೀಯ). ನೋವಿಯಸ್ 1100 ಸಿ.ಸಿ: ಫೈಝಲ್ ಅಹಮದ್ ಮೂಡುಬಿದಿರೆ (ಪ್ರಥಮ), ನಸೀಬ್ ಆತೂರು (ದ್ವಿತೀಯ). ನೋವಿಯಸ್ ಓಪನ್: ಅಲ್ವಿನ್ ಮೂಡಿಗೆರೆ (ಪ್ರಥಮ), ಎಂ.ಸಿರಾಜುದ್ದೀನ್ ಮೂಡಿಗೆರೆ (ದ್ವಿತೀಯ).

ಡಿ.ಕೆ.ಓಪನ್: ನಸೀಬ್ ಆತೂರು (ಪ್ರಥಮ), ಪವನ್ ಮೂಡುಬಿದಿರೆ (ದ್ವಿತೀಯ). ಡೀಸೆಲ್‌ ಓಪನ್: ಫಝೀಲ್ ಅಹಮದ್ ಮೂಡುಬಿದಿರೆ ಪ್ರಥಮ), ಅರ್ಬಝ್ ಖಾನ್ ಮೂಡಿಗೆರೆ (ದ್ವಿತೀಯ). ಟೀಮ್ ಡೈನಮಿಕ್: ಜೀಸಂ ಚಿಕ್ಕಮಗಳೂರು (ಪ್ರಥಮ), ಸೂರಜ್ ಮಂದಣ್ಣ ಮಡಿಕೇರಿ (ದ್ವಿತೀಯ).

ಜೀಪ್ 4+4: ಅಭಿಷೇಕ್ ಬೋರ್ಕರ್ ಪುತ್ತೂರು (ಪ್ರಥಮ), ಮನೀಶ್ ಪುತ್ತೂರು (ದ್ವಿತೀಯ). ಟೀಮ್ ಡೈನಮಿಕ್: ಜಸೀನ ಚಿಕ್ಕಮಗಳೂರು (ಪ್ರಥಮ), ಸೂರಜ್ ಮಂದಣ್ಣ ಮಡಿಕೇರಿ (ದ್ವಿತೀಯ). ಮಹಿಳಾವಿಭಾಗ: ಅಶ್ರಫಿ ಗಾಯಕ್ವಾಡ್ ಗೋವಾ (ಪ್ರಥಮ), ಸಂಜನಾ ಬೆಳಗಾವಿ (ದ್ವಿತೀಯ).

ಕಾರ್ಯಕ್ರಮವನ್ನು ಮುಖಂಡ ಸಂಜೀವ ಮಠಂದೂರು ಉದ್ಘಾಟಿಸಿದರು. ಆರ್ಯಾಪು ಸೇವಾ ಸಹಕಾರ ಸಂಘದ ಅಧ್ಯಕ್ಷ ಎಚ್.ಮಹಮ್ಮದ್ ಅಲಿ, ಕಡಬ ತಾಲ್ಲೂಕು ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಲಕ್ಷ್ಮೀನಾರಾಯಣ ರಾವ್, ರಾಮಕುಂಜ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರಶಾಂತ್, ಬದ್ರಿಯಾ ಸ್ಕೂಲ್ ಸಂಚಾಲಕ ಆದಂ ಪಿಲಿಕೂಡೇಲು, ಆತೂರು ಮುಹಿಯುದ್ದೀನ್ ಮಸೀದಿ ಅಧ್ಯಕ್ಷ ಹೈದರ್ ಕಲಾಯಿ, ಕೊಯಿಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಫಲೂಲುದ್ದೀನ್ ಹೇಂತಾರು, ರಾಮಕುಂಜ ಗ್ರಾಮ ಪಂಚಾಯಿತಿ ಸದಸ್ಯ ಯತೀಶ್ ಬಾನಡ್ಕ, ಉದ್ಯಮಿಗಳಾದ ಜಿ. ಮಹಮ್ಮದ್ ರಫೀಕ್, ಟಿ.ಡಿ.ನೌಫಲ್ ಕೊಯಿಲ, ದೇವಿಪ್ರಸಾದ್ ನೀರಾಜೆ, ಕೌಶಿಕ್ ಶೆಟ್ಟಿ ಬೆಳುವಾಯಿ, ಸಮದ್ ಸೋಂಪಾಡಿ, ಸಿರಾಜುದ್ದೀನ್ ಷಾ, ಸಲೀಂ, ನವಾಝ್, ಅಬೂಬಕ್ಕರ್ ಶಫೀಕ್ ಕೊಯಿಲ ಭಾಗವಹಿಸಿದ್ದರು.

ಕಾರ್ಯಕ್ರಮದ ಸಂಘಟಕ ಆತೂರು ಪಾರ್ಟಿ ಆ್ಯಂಡ್ ಎಂಟರ್‌ಟೈನ್‌ಮೆಂಟ್‌ ಸರ್ವಿಸ್‌ ಸಂಸ್ಥೆಯ ನಝೀರ್ ಆತೂರು ಸ್ವಾಗತಿಸಿ, ನಝೀರ್ ಕೊಯಿಲ ವಂದಿಸಿದರು. ರಫೀಕ್ ಗೋಳಿತ್ತಡಿ, ಅಜೀಜ್ ಅಮೈ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.