ADVERTISEMENT

ಬೆಳ್ತಂಗಡಿ | ಪ್ರಜ್ಞಾವಂತ ಸಮಾಜ ನಿರ್ಮಾಣಕ್ಕೆ ಶ್ರಮಿಸೋಣ: ವಿಖ್ಯಾತನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 6:15 IST
Last Updated 4 ಮಾರ್ಚ್ 2026, 6:15 IST
ಧಾರ್ಮಿಕ ಸಭೆಯಲ್ಲಿ ಬೆಂಗಳೂರಿನ ಸೋಲೂರು ಮಠದ ಆರ್ಯ ಈಡಿಗ ಮಹಾಸಂಸ್ಥಾನದ ವಿಖ್ಯಾತನಂದ ಸ್ವಾಮೀಜಿ ಆಶೀರ್ವಚನ ನೀಡಿದರು
ಧಾರ್ಮಿಕ ಸಭೆಯಲ್ಲಿ ಬೆಂಗಳೂರಿನ ಸೋಲೂರು ಮಠದ ಆರ್ಯ ಈಡಿಗ ಮಹಾಸಂಸ್ಥಾನದ ವಿಖ್ಯಾತನಂದ ಸ್ವಾಮೀಜಿ ಆಶೀರ್ವಚನ ನೀಡಿದರು   

ಬೆಳ್ತಂಗಡಿ: ‘ನಾಡಿನ ಆರಾಧ್ಯ ಮೂರ್ತಿಗೆ ಬ್ರಹ್ಮಕಲಶ ನೆರವೇರಿಸುವುದು ಪುಣ್ಯದ ಕೆಲಸ. ಜೀವನದಲ್ಲಿ ಎಲ್ಲರ ಒಳಿತಿಗಾಗಿ ಪ್ರಾರ್ಥಿಸೋಣ. ಮಕ್ಕಳ ಪ್ರತಿಭೆ, ಶಿಕ್ಷಣಕ್ಕೆ ಆದ್ಯತೆ ನೀಡುವ ಮೂಲಕ ಪ್ರಜ್ಞಾವಂತ ಸಮಾಜ ನಿರ್ಮಾಣ ಮಾಡುವಲ್ಲಿ ಶ್ರಮಿಸೋಣ’ ಎಂದು ಬೆಂಗಳೂರಿನ ಸೋಲೂರು ಮಠದ ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ವಿಖ್ಯಾತನಂದ ಸ್ವಾಮೀಜಿ ಹೇಳಿದರು.

ನಾರಾವಿ ಸೂರ್ಯನಾರಾಯಣ ದೇವಸ್ಥಾನದಲ್ಲಿ ಎಡಪದವು ಬ್ರಹ್ಮಶ್ರೀ ರಾಧಾಕೃಷ್ಣ ತಂತ್ರಿ ಅವರ ಪೌರೋಹಿತ್ಯದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಎರಡನೇ ದಿನದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ನಾವು ಯಾರಿಗೂ ಕೆಟ್ಟದನ್ನು ಬಯಸಬಾರದು. ಅತಿಯಾದ ಕೋಪ ಬುದ್ಧಿನಾಶಕ್ಕೆ ಕಾರಣವಾಗುತ್ತದೆ. ಬುದ್ಧಿನಾಶದಿಂದ ಮನುಷ್ಯ ನಾಶವಾಗುತ್ತಾನೆ ಎಂದರು.

ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಜಗದೀಶ್ ಅಂಚನ್ ಅಧ್ಯಕ್ಷತೆ ವಹಿಸಿದ್ದರು. ಮುನಿಯಾಲು ಉದಯ ಕೃಷ್ಣಯ್ಯ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಮುನಿಯಾಲು, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಯೋಗೀಶ್ ಕುಮಾರ್ ನಡಕ್ಕರ, ವೇಣೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ. ಜಯರಾಮ್ ಶೆಟ್ಟಿ, ಬೆಳ್ತಂಗಡಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ತುಕರಾಮ್ ಬಿ, ಅಪರ ಸರ್ಕಾರಿ ವಕೀಲ ಮನೋಹರ ಕುಮಾರ್, ವೇಣೂರು ವಲಯ ಅರಣ್ಯಾಧಿಕಾರಿ ಭರತ್ ಯು.ಜಿ., ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲಿಯಾನ್, ದಾನಿ ವೀರಮ್ಮ ಸಂಜೀವ ಸಾಲ್ಯಾನ್ ಡೊಂಕುಬೆಟ್ಟು, ವೇಣೂರು ಪೆರ್ಮುಡ ಕಂಬಳ ಸಮಿತಿ ಅಧ್ಯಕ್ಷ ನಿತೀಶ್ ಎಚ್. ಕೋಟ್ಯಾನ್, ನಾರಾವಿ ಹೆಗ್ಗಡೆ ಸಮಾಜದ ಅಧ್ಯಕ್ಷ ಸದಾನಂದ ಹೆಗ್ಡೆ, ಸತೀಶ್ ಚಿಗುರು, ಕಾರ್ಕಳದ ಉದ್ಯಮಿ ರಾಕೇಶ್ ಅಮೀನ್, ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ವಿಠಲ ಪೂಜಾರಿ ಸಾವ್ಯ, ಉಜಿರೆಯ ಉದ್ಯಮಿ ಸುರೇಶ್ ಪೂಜಾರಿ, ಪೂವಪ್ಪ ಪೂಜಾರಿ ಹಾರೋಲ್ದಡ್ಡ, ಶೀನ ಪೂಜಾರಿ ನಾರಾವಿ, ಪುದುವೆಟ್ಟು ವನದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬೊಮ್ಮಣ್ಣ ಗೌಡ, ತೋಟತ್ತಾಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಿವಾಕರ ಪೂಜಾರಿ, ಕಕ್ಕಿಂಜೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯಪ್ರಸಾದ್ ಗೌಡ, ನಾರಾವಿ ಸೂರ್ಯನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರ ರವೀಂದ್ರ ಪೂಜಾರಿ ಬಾಂದೊಟ್ಟು, ಪ್ರಧಾನ ಅರ್ಚಕ ಕೃಷ್ಣ ತಂತ್ರಿ, ಬ್ರಹ್ಮಕಲಶ ಸಮಿತಿ ಕಾರ್ಯಾಧ್ಯಕ್ಷರಾದ ಮಹಾವೀರ ಜೈನ್, ಎನ್. ಶ್ರೀನಿವಾಸ ವಾಸುದೇವ ಕಿಣಿ, ಪ್ರಧಾನ ಕಾರ್ಯದರ್ಶಿ ವಿನಯ ಹೆಗ್ಡೆ ಹಂಬಡ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜಗದೀಶ್ ಹೆಗ್ಡೆ, ಎನ್. ದಿವಾಕರ ಭಂಡಾರಿ, ಲಕ್ಷ್ಮಣ ಬಂಗೇರ, ಶಂಕರ್ ತುಂಬೆಗುಡ್ಡೆ, ಯಶೋದಾ, ರಶ್ಮಿ, ವಿವಿಧ ಸಮಿತಿ ಪದಾಧಿಕಾರಿಗಳು ಭಾಗವಹಿಸಿದ್ದರು.

ADVERTISEMENT

ರಶ್ಮಿ ನಾರಾವಿ ಪ್ರಾರ್ಥಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಕ್ಷಿತ್ ಶಿವರಾಮ್ ಸ್ವಾಗತಿಸಿದರು. ಯುವ ಸಾಹಿತಿ ಚಂದ್ರಹಾಸ ಬಳಂಜ ಪ್ರಾರ್ಥಿಸಿದರು. 

ಬೆಳಿಗ್ಗೆ ಅಷ್ಟಬಂಧ ಪ್ರತಿಷ್ಠೆ, ಮಹಾಪೂಜೆ ನಡೆಯಿತು. ಸಂಜೆ ದೊಡ್ಡರಂಗ ಪೂಜೆ ಉತ್ಸವ ನಡೆಯಿತು. ಬೆಳಿಗ್ಗೆ ವಿವಿಧ ತಂಡಗಳಿಂದ ಭಜನೆ, ಸಂಜೆ ಮೈಸೂರು ರಾಮಚಂದ್ರ ರಾವ್ ಅವರಿಂದ ದಾಸರ ಹಾಡುಗಳ ಗಾಯನ ನಡೆಯಿತು.

ಇಂದಿನ ಕಾರ್ಯಕ್ರಮಗಳು: ಬುಧವಾರ (ಮಾರ್ಚ್ 4) ಬೆಳಿಗ್ಗೆ ಸಂಜೀವಿನಿ ಮೃತ್ಯುಂಜಯ ಹೋಮ, ಆದಿತ್ಯ ಹೃದಯ ಹೋಮ ನಡೆಯಲಿದೆ. ಸಂಜೆ ನಡೆಯುವ ಧಾರ್ಮಿಕ ಸಭೆಯಲ್ಲಿ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚನ ನೀಡುವರು. ಕ್ಷೇತ್ರದ ಆಡಳಿತ ಮೊಕ್ತೇಸರ ರವೀಂದ್ರ ಪೂಜಾರಿ ಬಾಂದೊಟ್ಟು ಅಧ್ಯಕ್ಷತೆ ವಹಿಸುವರು. ಶಾಸಕ ಹರೀಶ್ ಪೂಂಜ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಸೇರಿದಂತೆ ಗಣ್ಯರು ಭಾಗವಹಿಸುವರು. ಸಂಜೆ ‘ನೃತ್ಯವೃಕ್ಷ’ ಭರತನಾಟ್ಯ ಕಾರ್ಯಕ್ರಮ, ಸ್ಥಳೀಯ ಮಹಿಳೆಯರಿಂದ ‘ಮಹಿಷಮರ್ದಿನಿ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಎಲ್ಲರ ಸಹಕಾರದಿಂದ ಬ್ರಹ್ಮಕಲಶೋತ್ಸವ ಅದ್ದೂರಿಯಾಗಿ ನಡೆಯುತ್ತಿದೆ. ತಾಲ್ಲೂಕಿನ ದೇವಸ್ಥಾನಗಳು, ಸಂಘ ಸಂಸ್ಥೆಗಳ ಸಹಕಾರದಲ್ಲಿ ಅಪಾರ ಪ್ರಮಾಣದ ಹಸಿರುವಾಣಿ ಹೊರೆಕಾಣಿಕೆ ಕ್ಷೇತ್ರಕ್ಕೆ ಸಮರ್ಪಣೆಯಾಗಿದೆ. 1000ಕ್ಕೂ ಮಿಕ್ಕಿ ಭಜಕರಿಂದ ನಡೆದ ಸೂರ್ಯವಂದನ ಭಜನೋತ್ಸವದಿಂದ ಬ್ರಹ್ಮಕಲಶಕ್ಕೆ ಅದ್ದೂರಿ ಚಾಲನೆ ಸಿಕ್ಕಿದೆ

ರಕ್ಷಿತ್ ಶಿವರಾಮ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.