ಅಣ್ಣಿಗೇರಿ ಬಳಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ: ಮೈಸೂರು, ಬೆಂಗಳೂರಿನ ಮೂವರ ಸಾವು
ಧಾರವಾಡ: ಜಿಲ್ಲೆಯ ಅಣ್ಣಿಗೇರಿ ತಾಲ್ಲೂಕಿನ ಭದ್ರಾಪುರ ಬಸ್ ನಿಲ್ದಾಣ ಸಮೀಪ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದು ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟ ಅವಘಡ ಶುಕ್ರವಾರ ಸಂಭವಿಸಿದೆ.
ಕಾರು ಚಾಲಕ ಮೈಸೂರಿನ ಜೆ.ಪಿ.ನಗರದ ಜಯನ್ ಸುರೇಶನ್ (64), ಕುವೆಂಪುನಗರದ ನಿವೃತ್ತ ಎಂಜಿನಿಯರ್ ಜೆ.ಮದನ್‌ಮೋಹನ್ (64) ಹಾಗೂ ಬೆಂಗಳೂರಿನ ಕಲ್ಯಾಣನಗರದ ಸಾಫ್ಟ್‌ವೇರ್ ಎಂಜಿನಿಯರ್ ಲಕ್ಷ್ಮಿನಾರಾಯಣ ನಾಗೇಂದ್ರ (62) ಮೃತಪಟ್ಟವರು.
ಹುಬ್ಬಳ್ಳಿ ಕಡೆಗೆ ಸಾಗುತ್ತಿದ್ದ ಕಾರು ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಗುದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.