
ಹುಬ್ಬಳ್ಳಿ: ಹೊಸತನದ ಸಂಭ್ರಮದೊಂದಿಗೆ 2025 ಅನ್ನು ಸ್ವಾಗತಿಸಿದ ‘ವಾಣಿಜ್ಯ ನಗರಿ’ ಹುಬ್ಬಳ್ಳಿಯು, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ, ಭಕ್ತಿಯ ಪರಾಕಾಷ್ಠೆ ಜೊತೆಗೆ ಸಾಲುಸಾಲು ಅಪರಾಧ ಪ್ರಕರಣಗಳಿಗೂ ಸಾಕ್ಷಿಯಾಯಿತು.
ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪಿಯ ಎನ್‌ಕೌಂಟರ್, ಆರೋಪಿಗಳ ಕಾಲಿಗೆ ಪೊಲೀಸರ ಗುಂಡೇಟು, ಪಾರಿಜಾತಾ ರೆಸಿಡೆನ್ಸಿಯ ವೇಶ್ಯಾವಾಟಿಕೆ ಅಡ್ಡೆ, ಮರ್ಯಾದೆಗೇಡು ಹತ್ಯೆ ರಾಜ್ಯದಲ್ಲಿ ಸದ್ದು ಮಾಡಿತು.
2025ರಲ್ಲಿ ಮೇಲ್ಸೇತುವೆಯ ಕಾಮಗಾರಿಯ ಕಿರಿಕಿರಿ, ದೂಳು, ಕೊಲೆ, ದರೋಡೆ, ಕಳವು, ಅತ್ಯಾಚಾರದಂತಹ ಅಪರಾಧಗಳು, ಹಲವು ಪ್ರತಿಭಟನೆಗಳು, ರಾಜಕೀಯ ನಾಯಕರ ವಾಕ್ಸಮರ ಮಾತ್ರವಲ್ಲದೆ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ರಂಗದ ಸಾಧನೆಯ ಹಾದಿಯಲ್ಲಿ ಹುಬ್ಬಳ್ಳಿ ಪಯಣಿಸಿತು.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ಹುಬ್ಬಳ್ಳಿಯ ಇನಿಷ್ಕಾ ನಡುಗಡ್ಡಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಹಾಗೂ ನಾಗವೇಣಿ ರಾಯಚೂರು ಆರನೇ ಸ್ಥಾನ ಗಳಿಸಿದರು. ಯುಪಿಎಸ್‌ಸಿ ಪರೀಕ್ಷೆ ವೈದ್ಯೆ ಇಶಿಕಾ ಸಿಂಗ್‌ಗೆ 206ನೇ ರ‍್ಯಾಂಕ್ ಪಡೆದು ಹುಬ್ಬಳ್ಳಿಯ ಗರಿಮೆ ಹೆಚ್ಚಿಸಿದರು.
ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ನಡೆದ ಮಹಾಮಸ್ತಕಾಭಿಷೇಕ ಹಾಗೂ 405 ಅಡಿ ಎತ್ತರದ ಸುಮೇರು ಪರ್ವತದ ಪಂಚ ಕಲ್ಯಾಣ ಪ್ರತಿಷ್ಠಾನ ಮಹೋತ್ಸವದಲ್ಲಿ ರಾಜ್ಯಪಾಲರು, ಉಪರಾಷ್ಟ್ರಪತಿ, ಲೋಕಸಭೆ ಸ್ಪೀಕರ್ ಸೇರಿದಂತೆ ದೇಶದ ಹಾಗೂ ರಾಜ್ಯದ ರಾಜಕೀಯ ಮತ್ತು ಧಾರ್ಮಿಕ ನಾಯಕರ ಸಮಾಗಮವಾಯಿತು.
ವ್ಯಾಪಕ ಮಳೆಯಿಂದ ವಿವಿಧೆಡೆ ಸಮಸ್ಯೆ ಉಂಟಾಗಿ, ರೈತರ ಬೆಳೆ ಹಾನಿಯಾಗಿ, ಜನಜೀವನ ಅಸ್ತವ್ಯಸ್ತವಾಯಿತು. ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಗದ್ದುಗೆಯನ್ನು ಬಿಜೆಪಿಯ ಜ್ಯೋತಿ ಪಾಟೀಲ ಏರಿದರು. ಪಾಲಿಕೆಯು ಸ್ವಚ್ಛ ಸರ್ವೇಕ್ಷಣ ಸಮೀಕ್ಷೆಯಲ್ಲಿ 2ನೇ ಸ್ಥಾನ ಗಳಿಸಿತು. ಇದೇ ಕಾರಣಕ್ಕೆ ಸಾರ್ವಜನಿಕರಿಂದ ತೀವ್ರ ಟೀಕೆಗೂ ಒಳಗಾಯಿತು.
ಸಿದ್ದಾರೂಢರ ಜಲರಥೋತ್ಸವ, ಗುರುಸಿದ್ಧೇಶ್ವರರ ಮಹಾರಥೋತ್ಸವ, ಲಕ್ಷದೀಪೋತ್ಸವ, ಗಣೇಶ ಚತುರ್ಥಿಯ ಸಂಭ್ರಮದಲ್ಲಿ ಹುಬ್ಬಳ್ಳಿ ಜನ ಭಕ್ತಿಭಾವದಲ್ಲೂ ಮಿಂದೆದ್ದರು. ಸಾವಿರಾರು ಜನ ವೀರಶೈವ ಲಿಂಗಾಯತರ ಒಗ್ಗಟ್ಟು ಪ್ರದರ್ಶನಕ್ಕೆ ಹುಬ್ಬಳ್ಳಿ ವೇದಿಕೆಯಾಯಿತು.
ಕಲಾವಿದ ಯಶವಂತ ಸರ್‌ದೇಶಪಾಂಡೆ ಅವರನ್ನು ಕಳೆದುಕೊಂಡದ್ದು ದುರ್ದೈವವೇ ಸರಿ. ಡಿಜಿಟಲ್ ಅರೆಸ್ಟ್, ಆನ್‌ಲೈನ್ ವಂಚನೆ, ಸೈಬರ್ ಅಪರಾಧಗಳಿಗೆ ಒಳಗಾದವರ ಸಂಖ್ಯೆಯೂ ಹೆಚ್ಚಿದೆ. ನಗರದಲ್ಲಿ ನಡೆದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಅಭಿನಂದನಾ ಸಮಾರಂಭಕ್ಕೆ ರಾಜಕೀಯ ಮುಖಂಡರು ಪಕ್ಷಾತೀತವಾಗಿ ಭಾಗಿಯಾದರು.
ವರ್ಷದ ಕೊನೆಗೆ ನಡೆದ ಅನ್ಯ ಜಾತಿಯ ವ್ಯಕ್ತಿಯನ್ನು ಮದುವೆಯಾಗಿದ್ದಕ್ಕೆ ಸಿಟ್ಟಾದ ತಂದೆ, ಗರ್ಭಿಣಿ ಮಗಳನ್ನೇ ಕೊಲೆ ಮಾಡಿದ ಭೀಕರ ಘಟನೆ ಎಲ್ಲರ ಮನ ಕಲುಕಿತು.
2: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯಿಂದ ಕಠಿಣ ಕ್ರಮ; ₹110 ಕೋಟಿ ಆಸ್ತಿ ತೆರಿಗೆ ಸಂಗ್ರಹ
4: ಹು–ಧಾ ನಗರ ಸಾರಿಗೆ; 48 ಹೆಚ್ಚುವರಿ ಹೊಸ ಬಸ್ ಸೌಲಭ್ಯ, ಮೂರು ತಿಂಗಳಿನಿಂದ ಸ್ಥಗಿತವಾಗಿದ್ದ ಮೇಲ್ಸೇತುವೆ ಕಾಮಗಾರಿ ಪುನರಾರಂಭ
6: ಮೂರುಸಾವಿರ ಮಠದ ಆವರಣದಲ್ಲಿ ಆಕಾಶಬುಟ್ಬಿ ಹಬ್ಬ ಆಚರಣೆ
7: ಪ್ರಥಮ ಕಿತ್ತೂರು ಕರ್ನಾಟಕ ಜಾಂಬೊರೇಟ್ ಉದ್ಘಾಟನೆ, ಶಾಸಕ ಪ್ರಸಾದ ಅಬ್ಬಯ್ಯಗೆ ಬೆದರಿಕೆ: ಪ್ರಕರಣ ದಾಖಲು
8: ಹೈಟೆಕ್ ಸ್ಪರ್ಶದೊಂದಿಗೆ ಮೈದಳೆದ ಹಳೇ ಬಸ್ ನಿಲ್ದಾಣ
10: ಶಾಂತಿಯುತವಾಗಿ ನೆರವೇರಿದ ಅವಳಿನಗರ ಬಂದ್
11: ಕುಸುಗಲ್ಲದಲ್ಲಿ ಮಗನಿಂದಲೇ ತಂದೆ, ಮಲತಾಯಿ ಹತ್ಯೆ
13: ನಗರ ಮತ್ತು ಉಪನಗರ ಸಾರಿಗೆ ಬಸ್ ನಿಲ್ದಾಣ ಉದ್ಘಾಟನೆ
14: ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರ ನೂಲ್ವಿ–ಬೆಳಗಲಿ ಕ್ರಾಸ್ ರಸ್ತೆ ಕೆಳ ಸೇತುವೆ ನಿರ್ಮಾಣಕ್ಕೆ ಭೂಮಿಪೂಜೆ
18: ಇ–ಆಸ್ತಿ, ಆಸ್ತಿ ತೆರಿಗೆ ಮೇಳಕ್ಕೆ ಚಾಲನೆ
22: 930 ಆರೋಪಿಗಳ ಪರೇಡ್, ನಗರ– ಉಪನಗರ ಬಸ್ ನಿಲ್ದಾಣದಿಂದ ಬಸ್ ಸಂಚಾರ ಆರಂಭ
25: ವರೂರು: ಒಂಬತ್ತು ತೀರ್ಥಂಕರರ ಮೂರ್ತಿಗಳಿಗೆ ಮಹಾಮಸ್ತಕಾಭಿಷೇಕ
ಫೆಬ್ರುವರಿ
1: ಒಣಮೆಣಸಿನಕಾಯಿ ಮೇಳ
5: ದರೋಡೆ; ಆರೋಪಿಗಳ ಕಾಲಿಗೆ ಗುಂಡೇಟು
9: ಲ್ಯಾಮಿಂಗ್ಟನ್ ರಸ್ತೆಯಲ್ಲಿನ ಜಾಗಕ್ಕಾಗಿ ಕಾಂಗ್ರೆಸ್–ಜೆಡಿಯು ನಡುವೆ ವಾಗ್ವಾದ
10: ಪೇಜಾವರ ಮಠದ ವಿಶ್ವೇಶ ತೀರ್ಥ ಪಂಚಮ ಪಾದುಕಾ ಆರಾಧನಾ ಮಹೋತ್ಸವ
21: ಎರಡು ದಿನದ ಗಾಳಿಪಟ ಉತ್ಸವಕ್ಕೆ ಚಾಲನೆ
3: ಅಂಬೇಡ್ಕರ್ ಕಾಲೊನಿಯ 138 ಮನೆಗಳ ಹಕ್ಕುಪತ್ರ ವಿತರಣೆ
11: ಪಾಲಿಕೆ ಆಸ್ತಿಗಳ ಜಿಐಎಸ್ ಸರ್ವೆ
13: ಬೆಚ್ಚಿ ಬೀಳಿಸಿದ ಹುಬ್ಬಳ್ಳಿಯಲ್ಲಿ ಕೊಲೆ, ಬಂಕಾಪುರದಲ್ಲಿ ಶವ ಪತ್ತೆ ಪ್ರಕರಣ
15: ಜನತಾ ಬಜಾರ್ ಸ್ಥಳ ಹರಾಜು, 72 ಮಳಿಗೆ ಹಂಚಿಕೆಗೆ ಕೋರ್ಟ್ ತಡೆ
16: ದರೋಡೆ: ಮೂವರ ಕಾಲಿಗೆ ಗುಂಡೇಟು
17: ಹುಬ್ಬಳ್ಳಿ ಜಗ್ಗಲಗಿ ಹಬ್ಬಕ್ಕೆ ಚಾಲನೆ
1: ಈದ್ ವೇಳೆ ಅವಹೇಳನಕಾರಿ ಪೋಸ್ಟರ್ ಪ್ರದರ್ಶನ; ಪ್ರಕರಣ
5: ಮಾದಕ ವ್ಯಸನಿಗಳ ಪತ್ತೆಗೆ ಕಾರ್ಯಾಚರಣೆ
9: ಚಾಕು ಇರಿತ ಪ್ರಕರಣ: ಆರೋಪಿಗೆ ಗುಂಡು
16: ಬಹು ವರ್ಷದ ಬೇಡಿಕೆಯಾದ ಕುಂಚಬ್ರಹ್ಮ ಎಂ.ವಿ.ಮಣಜಗಿ ಆರ್ಟ್ ಗ್ಯಾಲರಿ ಉದ್ಘಾಟನೆ
17: ಪಾಲಿಕೆಯಿಂದ ತೆರಿಗೆ ಹೆಚ್ಚಳದ ಬರೆ
21: ಮೇಲ್ಸೇತುವೆ ಕಾಮಗಾರಿ; ಹಳೇ ಬಸ್‌ನಿಲ್ದಾಣ ಬಂದ್
25: ಪೌರಕಾರ್ಮಿಕ ಮಹಿಳೆ ಶವವಿಟ್ಟು ಪ್ರತಿಭಟನೆ
2: ಕರಾವಳಿ ಉತ್ಸವದ ಸಂಭ್ರಮ
5: ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ರಸ್ತೆ ನಿರ್ಮಿಸಿದ ಪಾಲಿಕೆ
13: ಬಾಲಕರ ಮಧ್ಯೆ ಜಗಳ; ಚಾಕು ಇರಿದು ಕೊಲೆ
22: ಮಳೆ; ಕೋಡಿ ಹರಿದ ಉಣಕಲ್ ಕೆರೆ
26: ಕೋವಿಡ್ ಮುುಂಜಾಗ್ರತಾ ಕ್ರಮ; 10 ಸಾವಿರ ಕಿಟ್ ಹಂಚಿಕೆ
27: ರಾಜಕಾಲುವೆ ಮೇಲಿದ್ದ ಕಮರಿಪೇಟೆ ಪೊಲೀಸ್ ಠಾಣೆ ಸ್ಥಳಾಂತರ
30: ಚನ್ನಪೇಟೆ ಶಾಲೆ: 1ನೆೇ ತರಗತಿಗೆ ಪ್ರವೇಶಕ್ಕೆ ₹1,000 ಠೇವಣಿ ಇಡುವ ಯೋಜನೆ ಜಾರಿ
4: ಅರಳಿಕಟ್ಟಿ ಓಣಿ: ಮಣ್ಣು ಕುಸಿದು ಕಾರ್ಮಿಕ ಸಾವು
14: ಮೇಲ್ಸೇತುವೆ ಕಾಮಗಾರಿ: ಈದ್ಗಾ ಕಾಂಪೌಂಡ್ ತೆರವಿಗೆ ಚಾಲನೆ
18: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಆಕಾಂಕ್ಷಿಗಳ ಧರಣಿ
19: 48.3 ಕಿ.ಮೀ ಉದ್ದದ ಇಂಗ್ಲಿಷ್ ಕಾಲುವೆಯನ್ನು 13 ಗಂಟೆ 37 ನಿಮಿಷದಲ್ಲಿ ಈಜಿದ ಗ್ರಾಮೀಣ ಠಾಣೆಯ ಇನ್‌ಸ್ಪೆಕ್ಟರ್ ಮುರುಗೇಶ ಚನ್ನಣ್ಣವರ ತಂಡ
28: ಉಣಕಲ್ ಕೆರೆ ಭರ್ತಿ: ಬಾಗಿನ ಅರ್ಪಣೆ
1: ಮಹಾನಗರ ಪಾಲಿಕೆಯ 24ನೇ ಅವಧಿಯ ನೂತನ ಮೇಯರ್ ಆಗಿ ಬಿಜೆಪಿಯ ಜ್ಯೋತಿ ಪಾಟೀಲ ಮತ್ತು ಉಪ ಮೇಯರ್ ಆಗಿ ಸಂತೋಷ ಚವ್ವಾಣ ಆಯ್ಕೆ
5: ಹುಬ್ಬಳ್ಳಿಯ ಹೊಸೂರಿನ ಪಾರಿಜಾತ ರೆಸಿಡೆನ್ಸಿಯಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರು ಮೈಸೂರಿನ ಒಡನಾಡಿ ಸಂಸ್ಥೆ ಸಹಯೋಗದಲ್ಲಿ ದಾಳಿ ನಡೆಸಿ, ಐವರು ವಿದೇಶಿ ಮಹಿಳೆಯರಣೆ ರಕ್ಷಣೆ.
12: ಹಳೇಹುಬ್ಬಳ್ಳಿಯ ಇಂಡಿಪಂಪ್ ವೃತ್ತದ ಬಳಿಯಿದ್ದ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ಕಟ್ಟಡ ಶಿಥಿಗೊಂಡಿದ್ದು, ಅಯೊಧ್ಯಾನಗರದ ಶ್ರೀರಾಮ ಕಾಲೊನಿಯಲ್ಲಿರುವ ಲೀಡ್ಕರ್ ಸಭಾಭವನಕ್ಕೆ ಠಾಣೆಗೆ ತಾತ್ಕಾಲಿಕವಾಗಿ ಸ್ಥಳಾಂತರ
15: ಶಕ್ತಿ ಯೋಜನೆ ಯಶಸ್ವಿಯಾದ ಹಿನ್ನೆಲೆ ಹುಬ್ಬಳ್ಳಿಯ ಹೊಸುರು ಪ್ರಾದೇಶಿಕ ಬಸ್ ನಿಲ್ದಾಣದಲ್ಲಿ ಸಚಿವ ಸಂತೋಷ ಲಾಡ್ ನೇತೃತ್ವದಲ್ಲಿ ಕರಪತ್ರ ಬಿಡುಗಡೆ. ಸಂಭ್ರಮದಲ್ಲಿ ಶಾಸಕರಾದ ಪ್ರಸಾದ ಅಬ್ಬಯ್ಯ, ಎನ್.ಎಚ್.ಕೋನರಡ್ಡಿ ಭಾಗಿ
18: ಕೇಂದ್ರ ಸರ್ಕಾರದ ‘ಸ್ವಚ್ಛ ಸರ್ವೇಕ್ಷಣ– 2025 ಸಮೀಕ್ಷೆಯಲ್ಲಿ ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆಯು ದೇಶದಲ್ಲಿಯೇ 34ನೇ ಸ್ಥಾನ. ರಾಜ್ಯದಲ್ಲಿ 2ನೇ ಸ್ಥಾನ ಉಳಿಸಿಕೊಂಡು ಉತ್ತಮ ಸಾಧನೆ. ಇದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತವಾದ ತೀವ್ರ ಟೀಕೆ
24: ಕೊಪಳ್ಳ ಜಿಲ್ಲಾ ಕೈಗಾರಿಕಾ ಉಪನಿರ್ದೇಶಕ ಶೇಖು ಚವ್ಹಾಣ್ ಅವರ ಹುಬ್ಬಳ್ಳಿಯ ಮನೆ ಮೇಲೆ ಲೋಕಾಯುಕ್ತ ದಾಳಿ
31: ಹುಬ್ಬಳ್ಳಿ –ಧಾರವಾಡ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರಿಂದ ಧರಣಿ.
6: ಸಾರಿಗೆ ಸಿಬ್ಬಂದಿ ಮುಷ್ಕರ, ಬಸ್ ಸ್ಥಗಿತ, ಜನ ಸಂಚಾರಕ್ಕೆ ಪರದಾಟ
7: ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಕೇಂದ್ರ ಉದ್ಘಾಟನೆ
10:ಸಿದ್ದಾರೂಢರ ಜಲರಥೋತ್ಸವ
11: ಬೆಳಗಾವಿ– ಬೆಂಗಳೂರು ನಡುವೆ ಸಂಚರಿಸುವ ನೂತನ ವಂದೇ ಭಾರತ ರೈಲಿಗೆ ಸ್ವಾಗತ
19: ಮೂರುಸಾವಿರಮಠದ ಆವರಣದಲ್ಲಿ ಗುರುಸಿದ್ಧೇಶ್ವರರ ಮಹಾರಥೋತ್ಸವ
25: ಬೀದಿನಾಯಿ ದತ್ತು ಅಭಿಯಾನಕ್ಕೆ ಚಾಲನೆ
27: ಗಣೇಶ ಚತುರ್ಥಿ ಸಂಭ್ರಮ
ಆಗಸ್ಟ್ ತಿಂಗಳಲ್ಲಿ ಸುರಿದ ಮಳೆಗೆ ಬೆಳೆ ನಾಶ
3: ನಾಲ್ಕೂವರೆ ತಿಂಗಳಿಂದ ಸ್ಥಗಿತವಾಗಿದ್ದ ಉಪನಗರ ಕೇಂದ್ರ ಬಸ್ ನಿಲ್ದಾಣ ಪುನರಾರಂಭ
7: ಗಣಪತಿಗೆ ಅದ್ದೂರಿ ವಿದಾಯ
8: ಈದ್ ಮೆರವಣಿಗೆಯಲ್ಲಿ ಪ್ಯಾಲೇಸ್ತಿನ್ ಧ್ವಜ ಹಿಡಿದವರ ವಿರುದ್ಧ ಪ್ರಕರಣ ದಾಖಲು
ಗಣೇಶ ಮೆರವಣಿಗೆ ವೇಳೆ ಚಾಕು ಇರಿತ; ಬಾಲಕ ಸೇರಿ ಐವರ ಬಂಧನ
19: ವೀರಶೈವ ಲಿಂಗಾಯತರು ಒಗ್ಗೂಡಲು ಏಕತಾ ಸಮಾವೇಶ; ಸಾವಿರಾರು ಜನ ಭಾಗಿ
26: ಹು–ಧಾ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪೇ ಪಾರ್ಕಿಂಗ್ ಗುತ್ತಿಗೆದಾರರಿಗೆ ದಂಡ ವಿಧಿಸಲು ನಿರ್ಣಯ
29: ಕಲಾವಿದ ಯಶವಂತ ಸರದೇಶಪಾಂಡೆ ನಿಧನ
3: ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ಜನಿಸಿದ ಗಂಡು ಮಗುವಿನ ಹೊಟ್ಟೆಯಲ್ಲಿ ಮತ್ತೊಂದು ಮಗುವಿನ ಅಯವಯ ಪತ್ತೆ– ಯಶಸ್ವಿ ಶಸ್ತ್ರ ಚಿಕಿತ್ಸೆ
8: ನಗರದ ಕೇಶ್ವಾಪುರದಲ್ಲಿ ಭಿಕ್ಷೆ ಬೇಡಿ ತನ್ನ ಮೂವರು ಮಕ್ಕಳನ್ನು ಸಾಕುತ್ತಿದ್ದ ತಾಯಿ ಅನಾರೋಗ್ಯದಿಂದ ನಿಧನ. ತಾಯಿಯ ಶವದ ಮುಂದೆ ಬಟ್ಟೆಯಿಲ್ಲದೇ ಆಟವಾಟುತ್ತಿದ್ದ ಮಗು
9: ತನ್ನನ್ನು ಷಡ್ಯಂತ್ರದಿಂದ ಕೆಲಸದಿಂದ ತೆಗೆದಿದ್ದಾರೆ ಎಂದು ದೂರಿದ ಕೆಎಂಸಿಐಆರ್ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ವಾರ್ಡ್ ಬಾಯ್ ಸೀಮೆಎಣ್ಣೆ ಸುರಿದು ಆತ್ಮಹತ್ಯೆಗೆ ಯತ್ನ
13: ಕಲಾವಿದ ರಾಜು ತಾಳಿಕೋಟೆ ನಿಧನ
14: ಬ್ಯಾಂಕ್ ನೌಕರನಿಗೆ ₹39.42 ಲಕ್ಷ ವಂಚನೆ
15: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹುಬ್ಬಳ್ಳಿಗೆ ಭೇಟಿ
25: ಬೆಂಬಲ ಬೆಲೆಗೆ ಆಗ್ರಹಿಸಿ ಈರುಳ್ಳಿ ಸುರಿದು ರೈತರ ಪ್ರತಿಭಟನೆ
30: ಡಿಜಿಟಲ್ ಅರೆಸ್ಟ್; ₹68.50 ಲಕ್ಷ
2: ಡಿಜಿಟಲ್ ಅರೆಸ್ಟ್ ₹1.07 ಕೋಟಿ ವಂಚನೆ
3: ಈರುಳ್ಳಿ ದರ ಕುಸಿತ ದಿಢೀರ್ ಪ್ರತಿಭಟನೆ
7: ಹುಬ್ಬಳ್ಳಿಯ ಗೋಕುಲ ಬಸ್ ನಿಲ್ದಾಣವನ್ನು ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸಿದರು
10: 108 ಗಂಟೆಗಳ ಅಖಂಡ ಹನುಮಾನ ಚಾಲೀಸಾ ಪಠಣ
12: ವಿದ್ಯಾನಗರದಲ್ಲಿ ಪ್ರೀತಿ ವಿಚಾರಕ್ಕೆ ಇಬ್ಬರಿಗೆ ಚಾಕು ಇರಿತ
16: ಕೊಲೆ ಪ್ರಕರಣ: ಇಬ್ಬರು ರೌಡಿಗಳ ಕಾಲಿಗೆ ಗುಂಡೇಟು; ಪೊಲೀಸ್ ಸಿಬ್ಬಂದಿ ಸೇರಿ ಮೂವರ ಮೇಲೆ ಹಲ್ಲೆ
20: ಸಿದ್ಧಾರೂಡರ ಲಕ್ಷ ದೀಪೋತ್ಸವ
23: ಇಡಿ ಅಧಿಕಾರಿ ಸೋಗಿನಲ್ಲಿ ಮೂರು ಕೋಟಿಗೂ ಹೆಚ್ಚು ಮೌಲ್ಯದ ಚಿನ್ನಾಭರಣ ಲೂಟಿ, ಪ್ರಕರಣ ದಾಖಲು
1: ಬಿಸಿಯೂಟ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಪಾಲಿಕೆ ಎದುರು ಅಹೋರಾತ್ರಿ ಧರಣಿ ನಡೆಸಿದರು
13: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಅಭಿನಂದನಾ ಸಮಾರಂಭ.
13: ಇಂದಿರಾ ಗಾಜಿನ ಮನೆಯಲ್ಲಿ ಫಲಪುಷ್ಪ ಪ್ರದರ್ಶನ
21: ಅನ್ಯಜಾತಿ ಯುವಕನ ಮದುವೆಯಾಗಿದ್ದಕ್ಕೆ ಗರ್ಭಿಣಿ ಮಗಳನ್ನು ಕೊಂದ ತಂದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.