ಧಾರವಾಡ: ಆಂಧ್ರದಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳ್ಳರನ್ನು ಹಿಡಿಯಲು ಬಂದ ಆಂಧ್ರ ಪೊಲೀಸರ ಮೇಲೆ ಇರಾನಿ ಗ್ಯಾಂಗ್ ಗುರುವಾರ ಹಲ್ಲೆ ನಡೆಸಿ ಪರಾರಿಯಾಗಿದೆ.
ಧಾರವಾಡದ ಸಂಗಮ್ ವೃತ್ತದ ಬಳಿ ಇರುವ ಲೈನ್ ಬಝಾರ್ ಹನುಮಂತ ದೇವಸ್ಥಾನದ ಎದುರು ಖಚಿತ ಮಾಹಿತಿ ಮೇರೆಗೆ, ಅಂದ್ರ ಪೊಲೀಸರು ಕಳ್ಳರನ್ನು ಹಿಡಿಯಲು ಮುಂದಾದರು.
ಇರಾನಿ ಗ್ಯಾಂಗಿನವರು ಬಿಯರ್ ಬಟಲಿಯಿಂದ ಪೊಲೀಸರಿಗೆ ಹೊಡೆಡಿದ್ದಾರೆ. ತಾವೇ ಬಿಯರ್ ಬಾಟಲಿಯಿಂದ ಇರಿದುಕೊಂಡು
ಸ್ಥಳದಿಂದ ಪರಾರಿಯಾಗಿದ್ದಾರೆ.
ಗಾಯಾಳು ಪೊಲೀಸರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಧಾರವಾಡ ಎಸಿಪಿ ಅನುಷಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಧಾರವಾಡ ಶಹರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.