ADVERTISEMENT

ಹುಬ್ಬಳ್ಳಿ: ‘ಎಡ್ಯುವರ್ಸ್’ ಶೈಕ್ಷಣಿಕ ಮೇಳ ಇಂದು, ನಾಳೆ

ವಿವಿಧ ಶಿಕ್ಷಣ ಸಂಸ್ಥೆಗಳು ಭಾಗಿ, ವಿವಿಧ ಕೋರ್ಸ್‌ಗಳ ಸಮಗ್ರ ಮಾಹಿತಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2025, 4:12 IST
Last Updated 19 ಏಪ್ರಿಲ್ 2025, 4:12 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ಹುಬ್ಬಳ್ಳಿ: ಪಿಯುಸಿ ಬಳಿಕ ಮುಂದಿನ ಕೋರ್ಸ್‌ಗಳ ಆಯ್ಕೆ ಜೊತೆಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಿದ್ಧತೆ ನಡೆಸಿದ್ದರೆ, ಇಲ್ಲಿದೆ ಉತ್ತಮ ಅವಕಾಶ. ಯಾವ ಕೋರ್ಸ್ ಓದಿದರೆ ಸೂಕ್ತ, ಯಾವ ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗಾವಕಾಶ ಎಂಬುದನ್ನು ತಿಳಿಯಬಹುದು. ಅಗತ್ಯ ಮಾರ್ಗದರ್ಶನವೂ ಉಚಿತವಾಗಿ ಸಿಗುತ್ತದೆ.

ನೀವು ಮಾಡಬೇಕಾದದ್ದು ಇಷ್ಟೇ. ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಪತ್ರಿಕೆಗಳಾದ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳು ಏಪ್ರಿಲ್ 19 ಮತ್ತು 20ರಂದು (ಶನಿವಾರ ಮತ್ತು ಭಾನುವಾರ) ಹುಬ್ಬಳ್ಳಿಯ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಿರುವ ‘ಎಡ್ಯುವರ್ಸ್’ ಶೈಕ್ಷಣಿಕ ಮೇಳಕ್ಕೆ ಭೇಟಿ ನೀಡಿದರೆ ಸಾಕು.

ವೈದ್ಯಕೀಯ, ಎಂಜಿನಿಯರಿಂಗ್, ಎಐ ತಂತ್ರಜ್ಞಾನ, ವಾಸ್ತುಶಿಲ್ಪ, ನರ್ಸಿಂಗ್, ಡಿಪ್ಲೊಮಾ, ಬ್ಯುಸಿನೆಸ್ ಮ್ಯಾನೇಜ್‌ಮೆಂಟ್, ಡಿಜಿಟಲ್ ಮಾರ್ಕೆಟಿಂಗ್ ಎಂಬಿಎ, ಬಿ.ಟೆಕ್, ಎಂ.ಟೆಕ್, ರೋಬೋಟಿಕ್ಸ್, ಪ್ರವಾಸೋದ್ಯಮ, ಎಂಸಿಎ, ಫ್ಯಾಷನ್ ಡಿಸೈನ್ ಹೀಗೆ ವಿವಿಧ ಕೋರ್ಸ್‌ಗಳ ಬಗ್ಗೆ ವಿವಿಧ ಸಂಸ್ಥೆಗಳು ಮಾಹಿತಿ ಒದಗಿಸಲಿವೆ.

ADVERTISEMENT

ವಿವಿಧ ವೃತ್ತಿಪರ ಕೋರ್ಸ್‌ಗಳ ಬಗ್ಗೆ ನಿಖರ ಮಾಹಿತಿ, ಮಾರ್ಗದರ್ಶನವನ್ನು ಈ ಮೇಳದಲ್ಲಿ ಪಡೆಯಬಹುದು. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಭಾಗವಹಿಸಲಿವೆ. ಶಿಕ್ಷಣ ತಜ್ಞರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಜೊತೆ ಚರ್ಚಿಸಬಹುದು. ಶೈಕ್ಷಣಿಕ ಕ್ಷೇತ್ರ ಕುರಿತು ಸಮಗ್ರ ಮಾಹಿತಿ ಪಡೆಯಬಹುದು.

ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಮಳಿಗೆಗಳಿಗೆ ಭೇಟಿ ನೀಡಿದರೆ, ಮುಖ್ಯಸ್ಥರು ಮತ್ತು ಪ್ರತಿನಿಧಿಗಳು ತಮ್ಮ ಸಂಸ್ಥೆಗಳಲ್ಲಿ ಲಭ್ಯವಿರುವ ಕೋರ್ಸ್ ಮತ್ತು ಅವಕಾಶಗಳ ಬಗ್ಗೆ ವಿವರಿಸುವರು. ಅಗ‌ತ್ಯ ಮಾಹಿತಿ ಪತ್ರ, ಕರಪತ್ರಗಳನ್ನು ನೀಡುವರು. ವೆಬ್‌ಸೈಟ್ ವಿಳಾಸ ಅಲ್ಲದೇ ದೂರವಾಣಿ ಸಂಖ್ಯೆಗಳನ್ನು ಒದಗಿಸುವರು.

ಕೋರ್ಸ್‌ಗಳ ಆಯ್ಕೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಗೊಂದಲ, ಸಮಸ್ಯೆಗಳಿದ್ದರೆ ಪರಿಹರಿಸಿಕೊಳ್ಳಿ. ಎಲ್ಲಾ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರನ್ನು ಮತ್ತು ಪ್ರತಿನಿಧಿಗಳನ್ನು ಒಂದೇ ಸೂರಿನಡಿ ಭೇಟಿಯಾಗುವ ಮತ್ತು ಸಂವಾದ ನಡೆಸುವ ಅವಕಾಶ ತಪ್ಪಿಸಿಕೊಳ್ಳಬೇಡಿ.

ಎಡ್ಯುವರ್ಸ್ ಲೋಗೋ
ನೋಂದಾಯಿಸಲು ಸ್ಕ್ಯಾನ್ ಮಾಡಿ

ಪರಿಣಿತರಿಂದ ಉಪನ್ಯಾಸ ಮಾರ್ಗದರ್ಶನ

ಏಪ್ರಿಲ್ 19ರಂದು ಬೆಳಿಗ್ಗೆ 10ಕ್ಕೆ ಎಡ್ಯುವರ್ಸ್ ಶೈಕ್ಷಣಿಕ ಮೇಳವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸುವರು. ಜಿಲ್ಲಾಧಿಕಾರಿ ದಿವ್ಯಪ್ರಭು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಸಾಧನಾ ಅಕಾಡೆಮಿ ಸ್ಥಾಪಕ ನಿರ್ದೇಶಕರಾದ ಮಂಜುನಾಥ ಬಿ. ಅವರು ಸ್ಫೂರ್ತಿದಾಯಕ ಭಾಷಣ ಮಾಡುವರು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮಾಜಿ ಸಾರ್ವಜನಿಕ ಸಂಪರ್ಕಾಧಿಕಾರಿ ರವಿ.ಎ.ಎಸ್ ಅವರು ಸಿಇಟಿ ಕುರಿತು ಉಪನ್ಯಾಸ ನೀಡುವರು. ಏಪ್ರಿಲ್ 20ರಂದು ಬೆಳಿಗ್ಗೆ 10ಕ್ಕೆ ಧಾರವಾಡದ ಐಐಟಿ ಡೀನ್ ಪ್ರೊ. ಎಸ್.ಎಂ.ಶಿವಪ್ರಸಾದ್ ಅವರು ವಿಶೇಷ ಉಪನ್ಯಾಸ ನೀಡುವರು. ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಅವರು ವಿಶೇಷ ಉಪನ್ಯಾಸ ನೀಡುವರು. ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರೊಫೆಸರ್ ಶ್ರವಣಕುಮಾರ ನಾಯಕ್ ಅವರು ಕಾಮೆಡ್–ಕೆ ಕುರಿತು ಉಪನ್ಯಾಸ ನೀಡುವರು. ಧಾರವಾಡದ ವಿದ್ಯಾಪೋಷಕ್‌ನ ರತ್ನಾ ಹಿಪ್ಪರಗಿ ಅವರು  ಶಿಷ್ಯವೇತನ ಕುರಿತು ಉಪನ್ಯಾಸ ನೀಡುವರು.

ನೀಟ್ ಮಾದರಿ ಪರೀಕ್ಷೆ

‘ಎಡ್ಯುವರ್ಸ್’ ಶಿಕ್ಷಣ ಮೇಳದಲ್ಲಿ ನೀಟ್‌ (NEET) ಮಾದರಿ ಪರೀಕ್ಷೆಯೂ ನಡೆಯಲಿದೆ. ಆಸಕ್ತರು ಪರೀಕ್ಷೆಯಲ್ಲಿ ಪಾಲ್ಗೊಳ್ಳಬಹುದು. ಉತ್ತಮ ಅಂಕಗಳನ್ನು ಗಳಿಸಿದ್ದಲ್ಲಿ ಅವರಿಗೆ ಆಕರ್ಷಕ ಬಹುಮಾನಗಳನ್ನು ಪ್ರದಾನ ಮಾಡಲಾಗುವುದು. ಅವರಿಗೆ ಪರಿಗಣಿತರಿಂದ ಅಗತ್ಯ ಸಲಹೆ ಮಾರ್ಗದರ್ಶನ ಸಿಗಲಿದೆ. ಪರೀಕ್ಷೆಯ ಸ್ವರೂಪವೂ ಗೊತ್ತಾಗುತ್ತದೆ.

ಉಚಿತ ಪ್ರವೇಶ

ಶೈಕ್ಷಣಿಕ ಮೇಳಕ್ಕೆ ವಿದ್ಯಾರ್ಥಿಗಳು ತಮ್ಮ ಪೋಷಕರು ಮತ್ತು ಸ್ನೇಹಿತರ ಜೊತೆ ಭೇಟಿ ನೀಡಬಹುದು. ಉಚಿತ ಪ್ರವೇಶವಿದೆ. ಎಡ್ಯುವರ್ಸ್‌ನ ಕ್ಯುಆರ್‌ ಕೋಡ್‌ ಸ್ಕ್ಯಾನ್ ಮಾಡಿ ಹೆಸರು ನೋಂದಾಯಿಸಿ. ರಾಜ್ಯದ ದೊಡ್ಡ ಶೈಕ್ಷಣಿಕ ಮೇಳಕ್ಕೆ ಸಾಕ್ಷಿಯಾಗುತ್ತೀರಿ. ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅವಕಾಶ ಸದ್ಬಳಕೆ ಮಾಡಿಕೊಳ್ಳಿ. ಸ್ಥಳದಲ್ಲೂ ನೋಂದಣಿಗೆ ಅವಕಾಶವಿದೆ. ಸಮಯ: ಬೆಳಿಗ್ಗೆ 10 ರಿಂದ ಸಂಜೆ 6. ಸ್ಥಳ: ನೆಹರೂ ಕ್ರೀಡಾಂಗಣ ಹುಬ್ಬಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.